
ಚೆನ್ನೈ: ಮೊಬೈಲ್ ಕಳ್ಳರಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಯತ್ನಿಸುತ್ತಿದ್ದ ವೇಳೆ ಮಹಿಳೆಯೊಬ್ಬರು ಆಯತಪ್ಪಿ ರೈಲಿನಿಂದ ಬಿದ್ದು, ಸಾವನ್ನಪ್ಪಿದ ಘಟನೆ ನೆರೆಯ ರಾಜ್ಯ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. 22 ವರ್ಷದ ಪ್ರೀತಿ (S Preethi) ಮೃತ ಮಹಿಳೆ. ಜುಲೈ 2 ರಂದು ಈ ಘಟನೆ ನಡೆದಿದ್ದು, ರೈಲಿನಿಂದ ಕೆಳಗೆ ಬಿದ್ದು ಗಾಯಗೊಂಡ ಪ್ರೀತಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಗಂಭೀರ ಗಾಯಗೊಂಡಿದ್ದ ಪ್ರೀತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಚೆನ್ನೈ ಲೋಕಲ್ ರೈಲಿನಲ್ಲಿ ಪ್ರೀತಿ ತೆರಳುತ್ತಿದ್ದಾಗ ಇಬ್ಬರು ಮೊಬೈಲ್ ಕಳ್ಳರು ಆಕೆಯಿಂದ ಮೊಬೈಲ್ ಕಸಿಯಲು ಯತ್ನಿಸಿದ್ದು, ಈ ವೇಳೆ ಇದನ್ನು ವಿರೋಧಿಸುವ ವೇಳೆ ಪ್ರೀತಿ ಆಯತಪ್ಪಿ ರೈಲಿನಿಂದ ಕೆಳಗೆ ಬಿದ್ದಿದ್ದಾಳೆ. ರೈಲಿನಿಂದ ಬಿದ್ದ ಪ್ರೀತಿಯ ತಲೆಗೆ ಗಂಭೀರ ಗಾಯಗಳಾಗಿದ್ದವು. ಚೆನ್ನೈನ ಇಂದಿರಾನಗರ ರೈಲ್ವೆ ಸ್ಟೇಷನ್‌ನಲ್ಲಿ ರೈಲಿನ ಫೂಟ್‌ಬೋರ್ಡ್‌ನಲ್ಲಿ ನಿಂತುಕೊಂಡು ಪ್ರೀತಿ ತನ್ನ ಫೋನ್‌ನಲ್ಲಿ ಮಾತನಾಡುತ್ತಿದ್ದಳು. ಈ ವೇಳೆ ಇಬ್ಬರು ಕಳ್ಳರು ಆಕೆಯ ಮೊಬೈಲ್ ಫೋನ್ ಕಸಿಯಲು ಯತ್ನಿಸಿದ್ದಾರೆ. ಈ ವೇಳೆ ಆಕೆ ವಿರೋಧಿಸಿದ್ದು, ಕಳ್ಳರು ಹಾಗೂ ಆಕೆಯ ಮಧ್ಯೆ ಎಳೆದಾಟವಾಗಿದೆ. ಈ ವೇಳೆ ಆಯತಪ್ಪಿ ಆಕೆ ರೈಲಿನಿಂದ ಕೆಳಗೆ ಬಿದ್ದಿದ್ದಾಳೆ. ನಂತರ ಆಕೆಯ ಮೊಬೈಲ್ ಕಸಿದು ಕಳ್ಳರು ಆಕೆಯನ್ನು ಅಲ್ಲಿಯೇ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಇತ್ತ ಕೆಳಗೆ ಬಿದ್ದ ಪ್ರೀತಿ ಪ್ರಜ್ಞಾಶೂನ್ಯಳಾಗಿದ್ದು, ನಂತರ ರೈಲ್ವೆ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
Chikkamagaluru: ಮೊಬೈಲ್ ಕಿತ್ತುಕೊಳ್ಳಲು ಬಂದವನನ್ನ ಕಲ್ಲಿನಿಂದ ಜಜ್ಜಿ ಕೊಲೆ: ಆರೋಪಿ ಬಂಧನ
ಇತ್ತ ಸೈಬರ್ ಅಪರಾಧ (ciber Crime) ನಿಯಂತ್ರಣ ದಳದ ನೆರವಿನಿಂದ ಆಕೆಯ ಮೊಬೈಲ್ ಫೋನ್ ಅನ್ನು ಟ್ರಾಕ್ ಮಾಡಿರುವ ಪೊಲೀಸರಿಗೆ ಪ್ರೀತಿಯ ಮೊಬೈಲ್ ಫೋನ್ ಇರುವ ಲೋಕೇಷನ್ ಪತ್ತೆಯಾಗಿದೆ. ನಂತರ ಅಲ್ಲಿಗೆ ತೆರಳಿದ ಪೊಲೀಸರಿಗೆ ರಾಜು ಎಂಬಾತನ ಬಳಿ ಫೋನ್ ಇರುವುದು ಪತ್ತೆಯಾಗಿದೆ. ಈ ರಾಜು ಚೆನ್ನೈನ ಬೇಸೆಂಟ್ ನಗರದಲ್ಲಿ ಮೀನು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ, ಆತನನ್ನು ಪೊಲೀಸರು ಹಿಡಿದು ವಿಚಾರಿಸಿದಾಗ ಆತ 2000 ಸಾವಿರ ರೂಪಾಯಿ ನೀಡಿ ಈ ಮೊಬೈಲ್ ಫೋನ್ ಯುವಕನಿಂದ ಖರೀದಿಸಿದ್ದಾಗಿ ಹೇಳಿದ್ದಾನೆ.
ವಿಚಾರಣೆ ಮುಂದುವರಿಸಿದ ಪೊಲೀಸರು ಆತನಿಗೆ ಮೊಬೈಲ್ ಫೋನ್ ಮಾರಿದ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಣಿಮಾರನ್ (Manimaran) ಹಾಗೂ ವಿಘ್ನೇಶ್ (Vighnesh) ಬಂಧಿತ ಆರೋಪಿಗಳು, ವಿಚಾರಣೆ ವೇಳೆ ಇಬ್ಬರೂ ತಾವು ಪ್ರೀತಿ ಬಳಿಯಿಂದ ಮೊಬೈಲ್ ಕಸಿದಿದ್ದಾಗಿ ಹೇಳಿದ್ದಾರೆ. ನಂತರ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 2 ಸಾವಿರ ರೂಪಾಯಿ ಆಸೆಗಾಗಿ ದುರುಳರು ಮಾಡಿದ ಈ ಕಳ್ಳತನ ಅಮಾಯಕ ಯುವತಿಯ ಜೀವನನ್ನೇ ಬಲಿ ಪಡೆದಿದೆ. ಕದ್ದ ಮೊಬೈಲ್ ಫೋನ್ ಸಿಕ್ಕಿದೆ. ಆದರೆ ಮೊಬೈಲ್‌ಗಾಗಿ ಹೋರಾಡಿದ ಯುವತಿ ಜೀವ ಹೋರಟೋಗಿದೆ.
ಮೊಬೈಲ್ ಕಳ್ಳತನಕ್ಕೆ ಪ್ರತಿರೋಧ: ಇಬ್ಬರು ಬಾಲಕರಿಂದ 18 ವರ್ಷದ ತರುಣನ ಹತ್ಯೆ
ಇಂದು ತಂತ್ರಜ್ಞಾನ ಸಾಕಷ್ಟು ಮುಂದುವರೆದಿದ್ದು, ಮೊಬೈಲ್‌ನಲ್ಲೇ ಅನೇಕರ ಇಡೀ ವಹೀವಾಟುಗಳಿರುತ್ತವೆ. ಬ್ಯಾಕ್ ಬ್ಯಾಲೆನ್‌ನಿಂದ, ಆರೋಗ್ಯ ಆಹಾರದವರೆಗೆ ಮೊಬೈಲ್‌ನಿಂದ ಎಲ್ಲವನ್ನೂ ಕಾಲ್ಬುಡಕ್ಕೆ ತರಿಸಿಕೊಳ್ಳಲು ಸಾಧ್ಯ. ಅದರ ಜೊತೆಗೆ ಇರುವ ಸಾವಿರಾರು ಕಂಟ್ಯಾಕ್ಟ್‌ಗಳು, ಅಮೂಲ್ಯ ದಾಖಲೆಗಳು ಅದರಲ್ಲಿರುತ್ತವೆ. ಇದೇ ಕಾರಣಕ್ಕೆ ಮೊಬೈಲ್ ಹೋದರೆ ಬಹುತೇಕರಿಗೆ ಜೀವ ಹೊರಟೋದಂತೆ ಆಗುತ್ತದೆ. ಹಾಗಂತ ಈ ರೀತಿ ಅಪಾಯಕ್ಕೆ ಸಿಲುಕಿದಾಗ ಮೊಬೈಲ್ ಹೊರಟೋಯ್ತು ಅಂತ ಯಾರು ಬದುಕನ್ನು ಅಪಾಯಕ್ಕೆ ಒಡ್ಡದಿರಿ, ತಂತ್ರಜ್ಞಾನದ ಸಹಾಯದಿಂದ ಕದ್ದ ಮೊಬೈಲ್ ವಾಪಸ್ ಪಡೆಯಬಹುದು. ಅಲ್ಲದೇ ಮೊಬೈಲ್ ಹೋದರೆ ಮತ್ತೊಂದು ಕೊಳ್ಳಬಹುದು. ಆದರೆ ಜೀವ ಹೋದರೆ ಕೈ ಕಾಲು ಮುರಿದರೆ ಮತ್ತೆ ಗಳಿಸಲು ಸಾಧ್ಯವಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ