ಮನೆಯೊಳಗೇ ನುಗ್ಗಿದ ಚಿರತೆ: ನಾಯಿ ಬೊಗಳಿದ್ರೂ ಏಳಲಿಲ್ಲ ಮನೆಯವರು! ಮುಂದೇನಾಯ್ತು? ಶಾಕಿಂಗ್‌ ವಿಡಿಯೋ ವೈರಲ್‌

By Suchethana D  |  First Published Dec 10, 2024, 12:49 PM IST

ಚಿರತೆಯೊಂದು ಮನೆಯೊಳಗೇ ನುಗ್ಗಿರುವ ಶಾಕಿಂಗ್‌ ವಿಡಿಯೋ ವೈರಲ್‌ ಆಗಿದೆ. ಅದನ್ನು ನೋಡಿದ ನಾಯಿ ಮಾಡಿದ್ದೇನು? 
 


ಈಗ ಚಿರತೆ ಬೆಂಗಳೂರಿನಂಥ ಮಹಾನಗರಗಳಲ್ಲಿಯೂ ಕಾಣಿಸಿಕೊಳ್ಳಲು ಶುರು ಮಾಡಿದೆ. ಇಷ್ಟು ದಿನ ಕಾಡಿನಲ್ಲಿದ್ದ ಚಿರತೆ, ಆಹಾರ ಸಿಗದೇ ಅಥವಾ ಇನ್ನಾವುದೋ ಕಾರಣಕ್ಕೆ ಊರೊಳಗೆ ಬರುವುದು ಮಾಮೂಲಾಗಿಬಿಟ್ಟಿದೆ. ಕಾಡು ಪ್ರದೇಶಗಳನ್ನು ಕಡಿದು ಅದರ ಜಾಗದಲ್ಲಿಯೂ ಮನೆಯನ್ನು ಕಟ್ಟಿಕೊಂಡರೆ ಕಾಡುಪ್ರಾಣಿಗಳು ಮಾಡುವುದಾದರೂ ಏನು ಎಂಬ ಬಗ್ಗೆಯೂ ಈಗ ಚರ್ಚೆಗಳು ಶುರುವಾಗಿದೆ. ಹಾಗೆ ಹೇಳಬೇಕು ಎಂದರೆ, ಕಾಡು ಪ್ರಾಣಿಗಳು ನಾಡಿಗೆ ಬರುತ್ತಿಲ್ಲ, ಬದಲಿಗೆ ಮನುಷ್ಯರು ಎನಿಸಿಕೊಂಡವರೇ ಅವುಗಳ ಜಾಗಕ್ಕೆ ಲಗ್ಗೆ ಇಡುತ್ತಿದ್ದು, ಅವು ಅಲ್ಲಿ ಬರುವುದರಲ್ಲಿ ತಪ್ಪೇನೂ ಇಲ್ಲ ಎಂಬ ವಾದವೂ ಇದೆ. ತನ್ನ ಜಾಗವನ್ನು ಆಕ್ರಮಿಸಿಕೊಂಡಿರುವುದು ಒಂದು ಕಡೆ, ಆಹಾರ ಸಿಗದೇ ಕೊರಗುವುದು ಇನ್ನೊಂದು ಕಡೆ... ಕಾರಣ ಏನೇ ಇರಲಿ.. ಈಗ ಊರೊಳಗೆ ಚಿರತೆಯಂಥ ಪ್ರಾಣಿಗಳು ನುಗ್ಗಿ ಅವಾಂತರ ಸೃಷ್ಟಿಸುತ್ತಿರುವುದು ಮಾತ್ರ ಭಯ ಪಡುವ ವಿಷಯವಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿನ ಕೊಟ್ಟಿಗೆಗಳಿಗೆ ನುಗ್ಗಿ ದನ-ಕರುಗಳನ್ನು ಎಳೆದೊಯ್ಯುತ್ತಿದ್ದ ಚಿರತೆ, ಈಗ ನಾಡಿಗೆ ಬಂದು ನಾಯಿಗಳನ್ನು ಸಾಯಿಸುವುದು ಮಾಮೂಲಾಗಿದೆ. ಒಮ್ಮೆ ಮನುಷ್ಯನ ರಕ್ತದ ರುಚಿ ಸಿಕ್ಕರೆ ಅವರನ್ನೂ ಕೊಂದು ತಿನ್ನುವುದು ಕಾಡುಪ್ರಾಣಿಗಳ ಹುಟ್ಟುಗುಣ. ಇದೇ ಕಾರಣಕ್ಕೆ ಎಲ್ಲರೂ ಭಯಭೀತರಾಗಬೇಕಾದ ಪರಿಸ್ಥಿತಿ ಬಂದಿದೆ. ಇದಾಗಲೇ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಕಾಣಿಸಿಕೊಂಡ ಚಿರತೆಗಳು ಕೊಟ್ಟ ಉಪದ್ರವ ಅಷ್ಟಿಷ್ಟಲ್ಲ. ಶಾಲಾ-ಕಾಲೇಜುಗಳಿಗೆ ರಜೆಯನ್ನೂ ಘೋಷಿಸುವ ಸ್ಥಿತಿಯೂಬಂದಿತ್ತು, ಈಗಲೂ ಚಿರತೆ ಕಾಟ ಹೆಚ್ಚಾಗುತ್ತಲೇ ಇದೆ.

Tap to resize

Latest Videos

ಅಪ್ಪು ಬಣ್ಣ ಕಪ್ಪು ಎಂದವರಿಗೆ ಡಾ.ರಾಜ್‌ ಹೇಳಿದ್ದೇನು? ಕುತೂಹಲದ ಹಳೆಯ ವಿಡಿಯೋ ವೈರಲ್‌

ಆದರೆ ಇದೀಗ    ಚಿರತೆಯೊಂದು ನೇರವಾಗಿ ಮನೆಯೊಳಗೆ ನುಗ್ಗಿರುವ ಶಾಕಿಂಗ್‌ ವಿಡಿಯೋ ಒಂದು ವೈರಲ್‌ ಆಗಿದೆ. ಮನೆಯಲ್ಲಿರುವ ಸಿಸಿಟಿವಿಯಲ್ಲಿ ಇದರ ವಿಡಿಯೋ ಸೆರೆಯಾಗಿದೆ. ಮನೆಯೊಳಗೆ ಚಿರತೆ ಹೇಗೆ ನುಗ್ಗಿದೆ ಎನ್ನುವುದು ತಿಳಿದಿಲ್ಲ. ಇದು ಯಾವ ಪ್ರದೇಶದ್ದು ಎನ್ನುವ ಸರಿಯಾದ ಮಾಹಿತಿಯೂಇಲ್ಲ. ಆದರೆ ಚಿರತೆಯನ್ನು ಕಂಡು ನಾಯಿ ಸಿಕ್ಕಾಪಟ್ಟೆ ಬೊಗಳಿದೆ. ಚಿರತೆಯನ್ನು ಓಡಿಸಲು ತನ್ನ ಕೈಲಾದ ಪ್ರಯತ್ನ ಮಾಡಿದೆ. ಇಷ್ಟಾದರೂ ಮನೆಯವರಿಗೆ ಎಚ್ಚರ ಆಗದೇ ಇರುವುದು ಮಾತ್ರ ವಿಚಿತ್ರ ಎನ್ನಿಸುತ್ತಿದೆ. ನಾಯಿ ಬೊಗಳಿದಾಗ, ಮನೆಯವರು ಎಲ್ಲಿ ಎಚ್ಚರ ಆಗಿಬಿಟ್ಟಾರೋ ಎಂದು ಚಿರತೆ ಭಯದಿಂದ ಓಡಿ ಹೋಗಿ, ಪುನಃಪುನಃ ವಾಪಸಾಗುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

ಚಿರತೆ ಬಂದಾಗಲೆಲ್ಲಾ ಜೀವಭಯ ಬಿಟ್ಟು ನಾಯಿ ಬೊಗಳಿ ಬೊಗಳಿ ಇಟ್ಟಿದೆ. ಹೀಗೆ ಕೆಲ ನಿಮಿಷ ನಾಯಿ-ಚಿರತೆ ಸಮರ ನಡೆದಿದೆ. ಕೊನೆಗೂ ಮನೆಯವರಿಗೆ ಎಚ್ಚರವಾಗಿದೆ. ಅವರು ಬಂದು ನೋಡಿದ್ದಾರೆ.  ಅವರು ಬರುವ ಶಬ್ದ ತಿಳಿಯುತ್ತಿದ್ದಂತೆಯೇ ಚಿರತೆ ಅಲ್ಲಿಂದ ಪರಾರಿಯಾಗಿದೆ. ಬಹುಶಃ ಸಿಸಿಟಿವಿ ನೋಡುವವರೆಗೂಅಲ್ಲಿ ಏನಾಗಿತ್ತು ಎನ್ನುವುದೇ ಮನೆಯವರಿಗೆ ತಿಳಿದಿರಲಿಕ್ಕಿಲ್ಲ! ಒಟ್ಟಿನಲ್ಲಿ ನಾಯಿ ಮನೆಯವರನ್ನು ಕಾಪಾಡಿರುವುದಂತೂ ಸತ್ಯ. ಈ ವಿಡಿಯೋ ಅನ್ನು ಡಿಸ್‌ಕವರ್‍‌ ವೈಲ್ಡ್‌ಪಾಸ್‌ ಎನ್ನುವ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‍‌ ಮಾಡಲಾಗಿದೆ. 

ಲಕ್ಷ್ಮೀನಿವಾಸ ಚಿನ್ನುಮರಿ ಪಾತ್ರಕ್ಕೆ ತಂಗಿ ಬದ್ಲು ಅಕ್ಕ ಬರ್ತಾಳಾ? ನೆಟ್ಟಿಗರಿಗೆ ಡೌಟ್‌ ಬಂದಿದ್ಯಾಕೆ?

click me!