ಉತ್ತರಪ್ರದೇಶ: ಸಿಎಂ ಯೋಗಿ ಆಡಳಿತದಲ್ಲಿ ಒಟ್ಟು 10900 ಎನ್‌ಕೌಂಟರ್‌!

By Kannadaprabha News  |  First Published May 5, 2023, 10:40 AM IST

ಉತ್ತರ ಪ್ರದೇಶದಲ್ಲಿ ಮುುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮೊದಲ ಬಾರಿ ಅಧಿಕಾರ ವಹಿಸಿಕೊಂಡ 2017ರಿಂದ ಈವರೆಗಿನ 6 ವರ್ಷದಲ್ಲಿ ಒಟ್ಟು 183 ಕ್ರಿಮಿನಲ್‌ಗಳನ್ನು ಎನ್‌ಕೌಂಟರ್‌ ಮಾಡಲಾಗಿದೆ.


ಲಖನೌ: ಉತ್ತರ ಪ್ರದೇಶದಲ್ಲಿ ಮುುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮೊದಲ ಬಾರಿ ಅಧಿಕಾರ ವಹಿಸಿಕೊಂಡ 2017ರಿಂದ ಈವರೆಗಿನ 6 ವರ್ಷದಲ್ಲಿ ಒಟ್ಟು 183 ಕ್ರಿಮಿನಲ್‌ಗಳನ್ನು ಎನ್‌ಕೌಂಟರ್‌ ಮಾಡಲಾಗಿದೆ. ಒಟ್ಟು 10,900 ಎನ್‌ಕೌಂಟರ್‌ಗಳಲ್ಲಿ 23,300 ಕ್ರಿಮಿನಲ್‌ಗಳನ್ನು ಬಂಧಿಸಲಾಗಿದೆ. ಈ ಘಟನೆಗಳಲ್ಲಿ 5,046 ಕ್ರಿಮಿನಲ್‌ಗಳು ಗಾಯಗೊಂಡಿದ್ದಾರೆ. 1,443 ಪೊಲೀಸರು ಕೂಡ ಗಾಯಗೊಂಡಿದ್ದು, 13 ಪೊಲೀಸ್‌ ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ಮತ್ತೊಬ್ಬ ಪಾತಕಿ ದುಜಾನಾ ಎನ್‌ಕೌಂಟರ್‌

Tap to resize

Latest Videos

ಇತ್ತ ಉತ್ತರ ಪ್ರದೇಶದಲ್ಲಿ ಗ್ಯಾಂಗ್‌ಸ್ಟರ್‌ಗಳ ಎನ್‌ಕೌಂಟರ್‌ ಸರಣಿ ಮುಂದುವರಿದಿದ್ದು, ರಾಜ್ಯ ಪೊಲೀಸರ ವಿಶೇಷ ಕಾರ್ಯಪಡೆ ಗುರುವಾರ ಅನಿಲ್‌ ದುಜಾನಾ ಎಂಬ ಮತ್ತೊಬ್ಬ ಪಾತಕಿಯನ್ನು ಮೀರತ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದೆ. ದೆಹಲಿ, ರಾಷ್ಟ್ರ ರಾಜಧಾನಿ ಪ್ರದೇಶದ ನೋಯ್ಡಾ, ಗಾಜಿಯಾಬಾದ್‌ ಮತ್ತು ಇತರ ಪ್ರದೇಶಗಳಲ್ಲಿ ಅನಿಲ್‌ ದುಜಾನಾ, ಜನರನ್ನು ಭಯಭೀತರನ್ನಾಗಿಸಲು ಕುಖ್ಯಾತನಾಗಿದ್ದ. 16 ಹತ್ಯೆ, ಸುಲಿಗೆ ಸೇರಿ 60ಕ್ಕೂ ಹೆಚ್ಚು ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿದ್ದ.

ಮೋದಿಗೆ ನಿಂದಿಸಿದ ಖರ್ಗೆ ಪುತ್ರನ ಠೇವಣಿ ಕಳೆಯಿರಿ: ತಂದೆ ರೀತಿ ಪ್ರಿಯಾಂಕ್‌ರನ್ನೂ ಸೋಲಿಸಿ: ಯೋಗಿ ಕರೆ

ದುಜಾನಾ, ಕೊಲೆ ಪ್ರಕರಣವೊಂದರಲ್ಲಿ ಜಾಮೀನು ಪಡೆದು ವಾರದ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಅದರ ನಂತರ, ಆತ ತನ್ನ ವಿರುದ್ಧ ದಾಖಲಾದ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಗಳಲ್ಲಿ ಒಬ್ಬನಿಗೆ ಬೆದರಿಕೆ ಹಾಕಲು ಪ್ರಾರಂಭಿಸಿದ್ದ. ಆ ಸಾಕ್ಷಿಯನ್ನು ಕೊಲ್ಲಲು ನಿರ್ಧರಿಸಿದ್ದ. ಜೊತೆಗೆ ಬಿಡುಗಡೆ ಬಳಿಕ ಮತ್ತೆ ತನ್ನ ಗ್ಯಾಂಗ್‌ ಅನ್ನು ಸಕ್ರಿಯಗೊಳಿಸಲು ಯೋಜಿಸಿದ್ದ. ಇದರ ಭಾಗವಾಗಿ ವ್ಯಕ್ತಿಯೊಬ್ಬರ ಭೇಟಿಗೆ ತೆರಳುತ್ತಿದ್ದ.

ವಿಷಯ ತಿಳಿದ ಎಸ್‌ಟಿಎಫ್‌ (STF) ಆತನನ್ನು ಬಂಧಿಸಲು ಮುಂದಾಗಿತ್ತು. ಗ್ರಾಮವೊಂದರಲ್ಲಿ ಅಡಗಿದ್ದ ಆತನನ್ನು ಸುತ್ತುವರಿದಿತ್ತು. ಕಾರ್ಯಾಚರಣೆಯ ಸಮಯದಲ್ಲಿ, ದುಜಾನಾ ಮತ್ತು ಅವನ ಗ್ಯಾಂಗ್‌, ಪೊಲೀಸರ ಜತೆ ಕಾದಾಟಕ್ಕಿಳಿದಿತ್ತು. ಪೊಲೀಸರ ಮೇಲೆ ಆತನ ಗ್ಯಾಂಗ್‌ ಗುಂಡು ಹಾರಿಸಿತು. ಈ ವೇಳೆ ಎನ್‌ಕೌಂಟರ್‌ನಲ್ಲಿ ದುಜಾನಾ ಸಾವಿಗೀಡಾದ ಎಂದು ಮೂಲಗಳು ತಿಳಿಸಿವೆ.

ಹನುಮಾನ್ ಭಕ್ತರ ಆಹ್ವಾನಿಸಲು ಬಂದಿದ್ದೇನೆ, ಶ್ರೀರಾಮಂದಿರ ಉದ್ಘಾಟನೆಗೆ ಕನ್ನಡಿಗರಿಗೆ ಯೋಗಿ ಆಹ್ವಾನ!

ಇತ್ತೀಚೆಗೆ ಎಸ್‌ಪಿ (SP Leader) ಮುಖಂಡ ಹಾಗೂ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ನ (Atiq Ahmed) ಪುತ್ರ ಹಾಗೂ ಆತನ ಸಹಚರನನ್ನು ಪೊಲೀಸರು ಝಾನ್ಸಿ (Jhansi) ಬಳಿ ಎನ್‌ಕೌಂಟರ್‌ನಲ್ಲಿ (Encounter) ಸಾಯಿಸಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ಅತೀಕ್‌ ಅಹ್ಮದ್‌ ಹಾಗೂ ಆತನ ಸೋದರರನ್ನು ಕೆಲವು ಕ್ರಿಮಿನಲ್‌ಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇದಕ್ಕೂ ಮುನ್ನ ಉತ್ತರ ಪ್ರದೇಶ ಮುಖ್ಯಮಂತ್ರಿ (CM) ಯೋಗಿ ಆದಿತ್ಯನಾಥ್‌ (Yogi Adityanath) ಅವರು ಉತ್ತರ ಪ್ರದೇಶದಲ್ಲಿ ಪಾತಕಿಗಳನ್ನು ಹೊಸಕಿ ಹಾಕುವ ಗುಡುಗು ಹಾಕಿದ್ದರು. 2017ರಲ್ಲಿ ಯೋಗಿ ಅಧಿಕಾರಕ್ಕೆ ಬಂದ ನಂತರ ಈವರೆಗೆ 183 ಕ್ರಿಮಿನಲ್‌ಗಳ ಎನ್‌ಕೌಂಟರ್‌ ನಡೆದಿದೆ.

click me!