ನೀರಿಗಾಗಿ ಅಮ್ಮನ ಕಷ್ಟಕಂಡು ಬಾವಿ ತೋಡಿದ 14ರ ಬಾಲಕ

Published : May 05, 2023, 07:43 AM IST
ನೀರಿಗಾಗಿ ಅಮ್ಮನ ಕಷ್ಟಕಂಡು ಬಾವಿ ತೋಡಿದ 14ರ ಬಾಲಕ

ಸಾರಾಂಶ

ಮನೆಗೆ ನೀರು ತರಲು ತನ್ನ ತಾಯಿ ನಿತ್ಯವೂ ಬಹಳ ದೂರ ಸಾಗಬೇಕಾದ ಅನಿವಾರ್ಯತೆ ನೋಡಿ ಬೇಸರಗೊಂಡಿದ್ದ 9ನೇ ತರಗತಿ ಬಾಲಕ, ತಾಯಿಗೆ ನೆರವಾಗಲು ತನ್ನ ಮನೆಯ ಬಳಿಯೇ ಬಾವಿಯೊಂದನ್ನು ಅಗೆದಿರುವ ಅಪರೂಪದ ಘಟನೆ Maharashtraದ Palgharನಲ್ಲಿ ನಡೆದಿದೆ.

ಪಾಲ್ಘರ್‌: ಮನೆಗೆ ನೀರು ತರಲು ತನ್ನ ತಾಯಿ ನಿತ್ಯವೂ ಬಹಳ ದೂರ ಸಾಗಬೇಕಾದ ಅನಿವಾರ್ಯತೆ ನೋಡಿ ಬೇಸರಗೊಂಡಿದ್ದ 9ನೇ ತರಗತಿ ಬಾಲಕ, ತಾಯಿಗೆ ನೆರವಾಗಲು ತನ್ನ ಮನೆಯ ಬಳಿಯೇ ಬಾವಿಯೊಂದನ್ನು ಅಗೆದಿರುವ ಅಪರೂಪದ ಘಟನೆ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ನಡೆದಿದೆ.

ಧಾಂವಗೆ ಪದ ಎಂಬ ಬುಡಕಟ್ಟು ಹಳ್ಳಿಯ ಪ್ರಣವ್‌ ಸಾಲ್ಕರ್‌ (Pranav salkara) ಎಂಬ 14 ವರ್ಷದ ಹುಡುಗ 12 ರಿಂದ 15 ಅಡಿ ಆಳದವರೆಗೆ ನೀರು ಸಿಗುವವರೆಗೂ ಬಾವಿ ತೋಡಿದ್ದಾನೆ. ಬಾವಿಯ ನೀರನ್ನು ಮನೆಗೆಲಸಕ್ಕೀಗ ಬಾಲಕನ ತಾಯಿ ಬಳಸಿಕೊಳ್ಳುತ್ತಿದ್ದಾರೆ. ತಾಯಿ ಕೂಲಿ ಕೆಲಸ ಮಾಡಿ ಸುಸ್ತಾಗಿ ಬಂದರೂ ನೀರಿಗಾಗಿ ಸುಮಾರು ಅರ್ಧ ಕಿ.ಮೀ ನಡೆದು ಹೋಗಬೇಕಿತ್ತು. ಇದು ಪ್ರಣವ್‌ನ ಈ ನಿರ್ಧಾರಕ್ಕೆ ಕಾರಣವಾಗಿದೆ. ಸದ್ಯ ಈ ಊರಿನಲ್ಲಿ ನಿರು ಸರಬರಾಜು ಇದೆಯಾದರೂ ವಾರದಲ್ಲಿ 3 ದಿನ ಮಾತ್ರ ನಲ್ಲಿಯಲ್ಲಿ ನೀರು ಬರುತ್ತದೆ.

Chikkamagaluru: ಕುಡಿಯುವ ನೀರಿಗಾಗಿ 55 ಅಡಿ ಬಾವಿ ತೆಗೆದ ವೃದ್ಧ ದಂಪತಿ

ಇನ್ನು ಬಾಲಕ ಪ್ರಣವ್‌ಗೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು ಅಂಧ ಪೋಷಕರನ್ನು ಹೆಗಲ ಮೇಲೆ ಹೊತ್ತು ನಡೆದ ರಾಮಾಯಣದ ಶ್ರವಣಕುಮಾರನನ್ನು ಉಲ್ಲೇಖಿಸಿ ಆತನನ್ನು ಆಧುನಿಕ ‘ಶ್ರವಣ್‌ಬಲ್‌’ ಎಂದು ಜನರು ಕೊಂಡಾಡಿದ್ದಾರೆ. ಇನ್ನು ಪ್ರಣವ್‌ನ ಮಾದರಿ ಕೆಲಸವನ್ನು ಮೆಚ್ಚಿದ ಜಿಲ್ಲಾ ಪರಿಷದ್‌ ಪದಾಧಿಕಾರಿಗಳು ಗುರುವಾರ ಬಾಲಕನ ಸನ್ಮಾನಿಸಿ 11,000 ರು. ಬಹುಮಾನ ನೀಡಿದ್ದಾರೆ. ಅಲ್ಲದೇ 2024ರ ವೇಳೆಗೆ ಜಿಲ್ಲೆಯ ಪ್ರತಿ ಕುಟುಂಬಕ್ಕೂ ಮನೆಗೇ ನೀರು ಒದಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿರಸಿ: ಲಾಕ್‌ಡೌನ್‌ದಲ್ಲಿ ಮತ್ತೊಂದು ಬಾವಿ ತೋಡಿದ ಗೌರಿ..!

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು