
ವಾಷಿಂಗ್ಟನ್ (ಅ. 30): ಐಸಿಸ್ ಸಂಸ್ಥಾಪಕ ಅಬೂಬಕರ್ ಅಲ್ ಬಾಗ್ದಾದಿಯನ್ನು ಅಮೆರಿಕ ಸೇನೆ ಹೊಡೆದುರುಳಿಸಿದ ಬೆನ್ನಲ್ಲೇ, ಐಸಿಸ್ ಉಗ್ರರು ಇರಾಕ್‌ನ ಮರುಭೂಮಿಗಳಲ್ಲಿ ಕೋಟ್ಯಂತರ ಮೌಲ್ಯದ ಚಿನ್ನಾಭರಣ, ಡಾಲರ್‌ಗಳನ್ನು ಮಣ್ಣಲ್ಲಿ ಅಡಗಿಸಿಟ್ಟಿದ್ದ ಎಂಬ ಕುತೂಹಲಕಾರಿ ವಿಚಾರ ಬಯಲಾಗಿದೆ.
ಐಸಿಸ್ ಉಗ್ರ ಬಾಗ್ದಾದಿಗೆ ಪತ್ನಿಯಿಂದಲೇ ಉರುಳು; ಕಾರ್ಯಾಚರಣೆ ಹೀಗಿತ್ತು!
ಇರಾಕ್ ಭದ್ರತಾ ಸಿಬ್ಬಂದಿಯಿಂದ ಬಂಧಿತನಾದ ಬಾಗ್ದಾದಿ ಸಂಬಂಧಿಕನೇ ಈ ಕುರಿತು ಬಹಿರಂಗಪಡಿಸಿದ್ದಾನೆ. ಈ ಪೈಕಿ ಅಲ್-ಅನ್ಬರ್ ಮರುಭೂಮಿಯಲ್ಲಿ ಅಡಗಿಸಿಡಲಾಗಿದ್ದ 25 ಮಿಲಿಯನ್ ಡಾಲರ್(177 ಕೋಟಿ ರು.) ತಮ್ಮ ಕೈತಪ್ಪಿತ್ತು. ಆ ಬಳಿಕ ಈ ಹಣ ಕುರಿಗಾಹಿಗಳಿಗೆ ಸಿಕ್ಕಿತ್ತು ಎಂದು ಅವನು ಹೇಳಿದ್ದಾನೆ.
ಹೆಸರು ಹೇಳಲ್ಲ, ಫೋಟೋ ನೋಡಿ: ಬಾಗ್ದಾದಿ ಬೆನ್ನತ್ತಿದ್ದ ನಾಯಿ ತೋರಿಸಿದ ಟ್ರಂಪ್!
2015ರಿಂದಲೂ ಐಸಿಸ್‌ನಲ್ಲಿ ಸಕ್ರಿಯನಾಗಿದ್ದ ಬಾಗ್ದಾದಿ ಸಂಬಂಧಿಕ ಮೊಹಮ್ಮದ್ ಅಲಿ ಸಾಜೇತ್, ಸೌದಿ ಮೂಲದ ಅಲ್ ಅರೇಬಿಯಾ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿದ್ದು, ಈ ಸಂದರ್ಭದಲ್ಲಿ ತಾನೂ ಸೇರಿದಂತೆ ಇತರ ಐಸಿಸ್ ಸದಸ್ಯರು, ಭಾರೀ ಪ್ರಮಾಣದ ಡಾಲರ್, ಚಿನ್ನಾಭರಣ, ಬೆಳ್ಳಿ ಸೇರಿದಂತೆ ಇತರ ಬೆಲೆ ಬಾಳುವ ವಸ್ತುಗಳನ್ನು ಇರಾಕ್ ಮರುಭೂಮಿಯಲ್ಲಿ ಅಡಗಿಸಿಟ್ಟಿದ್ದೆವು. ಅಲ್ಲದೆ, ನೆಲದಡಿ ನಿರ್ಮಾಣ ಮಾಡಲಾಗಿದ್ದ ಬಂಕರ್‌ಗಳಲ್ಲಿ ಈ ಭಾರೀ ಪ್ರಮಾಣದ ಚಿನ್ನಾಭರಣ ಮತ್ತು ಡಾಲರ್‌ಗಳನ್ನು ಧರ್ಮದ ಗ್ರಂಥಗಳ ಜೊತೆಗೆ ಅಡಗಿಸಿಡಲಾಗಿತ್ತು ಎಂದು ಹೇಳಿದ್ದಾನೆ.
ಜೊತೆಗೆ, ಐಸಿಸ್ ಸದಸ್ಯನಾಗಿದ್ದಾಗ ತಾನು ಸಹ 8 ಮೀಟರ್ ಉದ್ದ, 5-6 ಮೀಟರ್ ಅಗಲಿವಿರುವ ವಿದ್ಯುತ್ ಪೂರೈಕೆ ಇರುವ ಸಕಲ ಸೌಲಭ್ಯವಿರುವ ಸುರಂಗದಲ್ಲಿ ವಾಸವಿದ್ದೆ. ಅಲ್ಲಿ, ಕುರಾನ್ ಸೇರಿದಂತೆ ಇನ್ನಿತರ ಧಾರ್ಮಿಕ ಗ್ರಂಥಗಳಿದ್ದವು ಎಂದು ಅವನು ಹೇಳಿದ್ದಾನೆ.
ಡಿಎನ್‌ಎ ಪರೀಕ್ಷೆಗಾಗಿ ಬಾಗ್ದಾದಿಗೆ ಅಂಡರ್‌ವೇರ್ ತರಿಸಿದ್ದ ಅಮೆರಿಕ !
ಐಸಿಸ್ ಉಗ್ರ ಸಂಘಟನೆ ಸಂಸ್ಥಾಪಕ ಅಬು ಬಕರ್ ಅಲ್- ಬಾಗ್ದಾದಿ ಸಾವನ್ನು ಖಚಿತಪಡಿಸಿಕೊಳ್ಳಲು ಡಿಎನ್‌ಎ ಪರೀಕ್ಷೆಗಾಗಿ ಅಮೆರಿಕದ ಸೇನಾಪಡೆಗಳು ಬಾಗ್ದಾದಿಯ ಅಂಡರ್‌ವೇರ್ ಅನ್ನು ಕಾರ‌್ಯಾ ಚರಣೆಗೂ ಮೊದಲೇ ತರಿಸಿಕೊಂಡಿದ್ದವು ಎಂಬ ಸಂಗತಿ ಬೆಳಕಿಗೆ ಬಂದಿದೆ.
ಅಮೆರಿಕ ಕಮಾಂಡೋಗಳ ಕಾರ‌್ಯಾಚರಣೆ ವೇಳೆ ಬಾಗ್ದಾದಿ ತನ್ನನ್ನು ತಾನು ಸ್ಫೋಟಿಸಿಕೊಂಡು ಸಾವಿಗೀಡಾಗಿದ್ದ. ಆತನ ದೇಹ ಛಿದ್ರ ವಾಗಿತ್ತು. ಆ ಪೈಕಿ ಒಂದು ಚೂರನ್ನು ಬಳಸಿ ಡಿಎನ್‌ಎ ಪರೀಕ್ಷೆ ನಡೆಸಿ ಸತ್ತಿದ್ದು ಬಾಗ್ದಾದಿಯೇ ಎಂಬುದನ್ನು ಕಮಾಂಡೋಗಳು ಖಚಿತಪಡಿಸಿಕೊಂಡಿದ್ದರು. ಆದರೆ ಅದಕ್ಕೆ ಬೇಕಾದ ಸ್ಯಾಂಪಲ್ ಸಂಗ್ರಹಕ್ಕೆ ಅಂಡರ್‌ವೇರ್ ಮೊರೆ ಹೋಗಿದ್ದರು. ಕುರ್ದಿಶ್ ಗುಪ್ತಚರ ಸಂಸ್ಥೆಯ ಬೇಹುಗಾರನ ಮೂಲಕ ಬಾಗ್ದಾದಿ ಅಂಡರ್‌ವೇರ್ ತರಿಸಿಕೊಂಡು ಪರೀಕ್ಷೆ ನಡೆಸಿ ಸತ್ತಿದ್ದು, ಬಗ್ದಾದಿಯೇ ಎಂದು ಅಮೆರಿಕ ಖಚಿತಪಡಿಸಿಕೊಂಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ