
ನವದೆಹಲಿ (ಅ. 30): ತಿಲಕ ಧರಿಸಿ ದೀಪಾವಳಿ ಹಬ್ಬಾಚರಣೆಯಲ್ಲಿ ಪಾಲ್ಗೊಂಡ ನಟ ಶಾರುಖ್ ಖಾನ್ ಬಗ್ಗೆ ಮುಸ್ಲಿಮರಲ್ಲಿ ಟೀಕೆ ವ್ಯಕ್ತವಾದ ಬಗ್ಗೆ ನಟಿ ಶಬಾನಾ ಆಜ್ಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೀಕಾಕಾರರನ್ನು ‘ವಿವೇಕರಹಿತ ಮುಸ್ಲಿಮರು’ ಎಂದು ಶಬಾನಾ ತರಾಟೆಗೆ ತೆಗೆದುಕೊಂಡಿದ್ದಾರೆ.
‘ದೀಪಾವಳಿ ವೇಳೆ ತಿಲಕ ಧರಿಸಿದ ಶಾರುಖ್ ಖಾನ್‌ರನ್ನು ‘ನಕಲಿ ಮುಸ್ಲಿಂ’ ಎಂದು ‘ವಿವೇಕರಹಿತ ಮುಸ್ಲಿಮರು’ ಟೀಕಿಸುತ್ತಿರುವುದು ನನಗೆ ಆಘಾತ ತಂದಿದೆ. ಭಾರತದ ಸುಂದರ ಸಂಪ್ರದಾಯ ಹೊಂದಿದೆ. ಆದರೆ ಇದರಿಂದ ಬೆದರಿಕೆಗೆ ಒಳಗಾಗುವಷ್ಟು ದುರ್ಬಲ ಧರ್ಮ ಇಸ್ಲಾಂ ಅಲ್ಲ. ಗಂಗಾ, ಯಮುನಾದ ನಿರ್ಮಲತೆಯಲ್ಲಿ ಭಾರತದ ಸುಂದರತೆ ಇದೆ’ ಎಂದು ಶಬಾನಾ ಟ್ವೀಟ್ ಮಾಡಿದ್ದಾರೆ. ಶಾರುಖ್ ಖಾನ್ ಅವರು ತಿಲಕ ಧರಿಸಿ ದೀಪಾವಳಿ ಆಚರಿಸಿಕೊಳ್ಳುತ್ತಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಭಾನುವಾರ ಹಾಕಿಕೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ