Ram Temple: ಅಯೋಧ್ಯೆ ರಾಮಮಂದಿರದಲ್ಲಿ ಹುಂಡಿ ಕಳವು ಪತ್ತೆ ಹಚ್ಚಿದ್ದು ಸೆಕ್ಯೂರಿಟಿ ಗಾರ್ಡ್, ಶೌಚಾಲಯದಲ್ಲಿ ಕಂಡಿದ್ದೇನು?

Kannadaprabha News   | Kannada Prabha
Published : Jul 18, 2026, 06:22 AM IST
Who discovered the theft of the donation box at the Ayodhya Ram Mandir, and how?

ಸಾರಾಂಶ

ಅಯೋಧ್ಯೆ ರಾಮಮಂದಿರದ ಶೌಚಾಲಯದಲ್ಲಿ ಸಿಕ್ಕ 40,000 ರೂ. ಹಣದಿಂದ ದೇಗುಲದ ಹುಂಡಿ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು 80 ಲಕ್ಷ ರೂ. ವಶಪಡಿಸಿಕೊಂಡು ಎಂಟು ಮಂದಿಯನ್ನು ಬಂಧಿಸಿದ್ದು, ಪ್ರಕರಣದ ತನಿಖೆಯನ್ನು ಎಸ್‌ಐಟಿ ವಹಿಸಿಕೊಂಡಿದೆ.

ಅಯೋಧ್ಯೆ (ಜು.18): ಅಯೋಧ್ಯೆ ರಾಮಮಂದಿರ(Ayodhya Ram mandir)ದಲ್ಲಿನ ಹುಂಡಿ ಹಣ ಕಳವು ಪ್ರಕರಣ ಬೆಳಕಿಗೆ ಬಂದಿದ್ದು ದೇಗುಲದ ಭದ್ರತಾ ಸಿಬ್ಬಂದಿಯೊಬ್ಬರಿಗೆ ಶೌಚಾಲಯದಲ್ಲಿ ಸಿಕ್ಕ 40000 ರು. ಹಣದಿಂದ ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಹಣ ಪತ್ತೆಯಾದ ಬೆನ್ನಲ್ಲೇ ದೇಗುಲದ ಆಡಳಿತ ಮಂಡಳಿ ಅಲರ್ಟ್‌ ಆದ ಕಾರಣ ಕಳ್ಳತನವಾಗಿದ್ದ 80 ಲಕ್ಷ ರು. ಹಣವನ್ನು ಪೊಲೀಸರ ಮುಖಾಂತರ ಕೇವಲ 17 ಗಂಟೆಗಳ ಅವಧಿಯಲ್ಲಿ ವಶಪಡಿಸಿಕೊಳ್ಳಲಾಗಿತ್ತು ಎಂದು ವರದಿಗಳು ತಿಳಿಸಿವೆ

ಶೌಚಾಲಯದೊಳಗೆ ಕಂತೆ ಕಂತೆ ನೋಟು!

ಮೇ ತಿಂಗಳ ಕೊನೆಯ ವಾರ ದೇಗುಲದ ಶೌಚಾಲಯದಲ್ಲಿ ನೋಟುಗಳ ಕಂತೆ ಅಡಗಿಸಿಟ್ಟಿರುವುದು ಗಾರ್ಡ್‌ ಕಣ್ಣಿಗೆ ಬಿತ್ತು. ತಕ್ಷಣ ಗಾರ್ಡ್‌ ಈ ಕುರಿತು ದೇಗುಲದ ಟ್ರಸ್ಟ್‌ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಟ್ರಸ್ಟ್‌ ಅಧಿಕಾರಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾಥಮಿಕ ಆಂತರಿಕ ತನಿಖೆ ನಡೆಸಿದ್ದು, ತರುವಾಯ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

ಪೊಲೀಸರು ದೇಗುಲದ ದೇಣಿಗೆ ಕೌಂಟರ್‌ನ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ ಬಳಿಕ ಹಲವೆಡೆ ದಾ‍‍ಳಿ ನಡೆಸಿದರು. ಅಯೋಧ್ಯೆ ಮತ್ತು ಉತ್ತರಪ್ರದೇಶದ ಹಲವೆಡೆ ಪೊಲೀಸರು 80 ಲಕ್ಷ ರು.ಗಳನ್ನು ವಶಕ್ಕೆ ಪಡೆದರು. ಜತೆಗೆ ಎಂಟು ಮಂದಿ ಆರೋಪಿಗಳನ್ನೂ ಬಂಧಿಸಿದ್ದು, ಅವರು ನೀಡಿದ ಮಾಹಿತಿ ಆಧರಿಸಿ ಇನ್ನಷ್ಟು ಆಭರಣಗಳು, ಹಣವನ್ನು ವಶಕ್ಕೆ ಪಡೆಯಲಾಯಿತು.

ಈ ವೇಳೆ ಟ್ರಸ್ಟ್ ಕೂಡ 21 ಮಂದಿಯ ತಂಡವನ್ನು ರಚಿಸಿ ಡೊನೇಷನ್‌ ಕೌಂಟರ್‌ನ ಕಾರ್ಯನಿರ್ವಹಣೆ ಕುರಿತು ಪರಿಶೀಲನೆ ನಡೆಸಿತು. ಪೊಲೀಸರ ಜತೆಗೂ ಸಮನ್ವಯ ಸಾಧಿಸಿ ತನಿಖೆಗೆ ಸಹಕರಿಸಿತು. ಇದಾದ ನಂತರವೇ ಪೊಲೀಸರು ಅಧಿಕೃತವಾಗಿ ಕ್ರಿಮಿನಲ್‌ ತನಿಖೆ ಆರಂಭಿಸಿದರು. ಆ ಬಳಿಕ ಪ್ರಕರಣದ ತನಿಖೆಯನ್ನು ಎಸ್‌ಐಟಿ ವಹಿಸಿಕೊಂಡಿತು.

ಅಯೋಧ್ಯೆ ಹುಂಡಿ ಹಣ ಲೂಟಿ: ನಾಡಿದ್ದು ಮಧ್ಯಂತರ ವರದಿ

ಲಖನೌ: ಅಯೋಧ್ಯೆ ರಾಮಮಂದಿರದ ಹುಂಡಿ ಲೂಟಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಸೋಮವಾರ ಸುಪ್ರೀಂಕೋರ್ಟ್‌ಗೆ ತನ್ನ ಮಧ್ಯಂತರ ವರದಿ ಸಲ್ಲಿಸುವ ಸಾಧ್ಯತೆಯಿದೆ. ದೇಣಿಗೆ ಲೂಟಿ ಪ್ರಕರಣದ ಸಿಬಿಐ ತನಿಖೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಇದರ ವಿಚಾರಣೆ ವೇಳೆ ನ್ಯಾಯಾಲಯ ವಸ್ತು ಸ್ಥಿತಿ ವರದಿ ಕೇಳಿತ್ತು. ಅದನ್ನೀಗ ನೀಡಲು ಎಸ್‌ಐಟಿ ಮುಂದಾಗಿದೆ. ಮತ್ತೊಂದೆಡೆ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾ ತಂಡವು, ತನಿಖೆಗೆ ಇನ್ನಷ್ಟು ಸಮಯ ಕೋರಿ ಉತ್ತರಪ್ರದೇಶ ಸರ್ಕಾರಕ್ಕೆ ಮನವಿ ಸಲ್ಲಿಸುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ದೇಗುಲ ಶುದ್ಧೀಕರಣ

ಅಯೋಧ್ಯೆ: ರಾಮ ಮಂದಿರದಲ್ಲಿ ನಡೆದ ಇತ್ತೀಚಿನ ದೇಣಿಗೆ ವಿವಾದಗಳ ನಡುವೆ ದೇವಸ್ಥಾನ ಮಂಡಳಿಯು ಪ್ರಾಯಃಶ್ಚಿತದ ಭಾಗವಾಗಿ 10 ದಿನಗಳ ಕಾಲ ದೇವಸ್ಥಾನದ ಶುದ್ಧೀಕರಣ ಕಾರ್ಯ ಕೈಗೊಂಡಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದಲ್ಲಿ ಬಡವರು ಖರೀದಿಸುತ್ತಿದ್ದ ಬಜೆಟ್ ಫೋನ್‌ಗಳಿಗೆ ಬ್ರೇಕ್; ಮೊಬೈಲ್‌ಗಳ ಬೆಲೆ ಏರಿಕೆ ನಡುವೆ ಇದೆಂಥಾ ಶಾಕ್!
ಭಾರತದ ಮೊದಲ ಖಾಸಗಿ ರಾಕೆಟ್‌ 'ವಿಕ್ರಮ್-1' ನಾಳೆ ಉಡಾವಣೆ; ಬಾಹ್ಯಾಕಾಶಕ್ಕೆ ರವಾನೆಯಾಗಲಿದೆ ಪಿಎಂ ಮೋದಿ ವಿಶೇಷ ಸಂದೇಶ!