
ಮತಾಂತರದ ಬಗ್ಗೆ ಇದಾಗಲೇ ಹಲವಾರು ಕಡೆಗಳಲ್ಲಿ ಶಾಕಿಂಗ್ ಎನ್ನುವಂಥ ಸುದ್ದಿಗಳು ಸದ್ದುಮಾಡುತ್ತಲೇ ಇವೆ. ಹಿಂದೂ ಹುಡುಗಿಯರನ್ನು ಅವರ ಜಾತಿಯ ಆಧಾರದ ಮೇಲೆ ಮತಾಂತರ ಮಾಡಿದರೆ ಇಂತಿಷ್ಟು ಹಣ ನೀಡಲಾಗುತ್ತದೆ ಎನ್ನುವ ಬಗ್ಗೆ ಇದಾಗಲೇ ಕೆಲವು ಮುಸ್ಲಿಂ ಯುವಕರು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. ಜಾತಿಯ ಆಧಾರದ ಮೇಲೆ ಲಕ್ಷಗಟ್ಟಲೆ ದುಡ್ಡು ಫಿಕ್ಸ್ ಆಗುತ್ತದೆ. ಐಷಾರಾಮಿ ಕಾರು, ಬೈಕ್ ತಂದು, ಟಿಪ್ಟಾಪ್ ಆಗಿ ರೆಡಿ ಮಾಡಿಕೊಂಡು, ನಟರ ರೀತಿಯಲ್ಲಿ ಹೇರ್ಕಟ್ ಮಾಡಿಕೊಂಡು, ಕೆಲವೊಮ್ಮೆ ಹಿಂದೂ ಹೆಸರು ಇಟ್ಟುಕೊಂಡು ಹುಡುಗಿಯರ ತಲೆ ಕೆಡಿಸಿ ಆ ಬಳಿಕ ಅವರನ್ನು ಮತಾಂತರ ಮಾಡಲಾಗುತ್ತಿದೆ ಎಂದು ಪೊಲೀಸರು ಎಚ್ಚರಿಕೆಯನ್ನೂ ನೀಡುತ್ತಿದ್ದಾರೆ. ದುಬಾರಿ ಬೈಕ್, ಕಾರಿಗೆ ಮರುಳಾಗುವ ಕಾಲೇಜು ಹುಡುಗಿಯರೂ ಕಮ್ಮಿಯೇನಿಲ್ಲ. ದುಡ್ಡೊಂದಿದ್ದರೆ ಸಾಕು ಎಂದು ಎಲ್ಲದ್ದಕ್ಕೂ ಸಿದ್ಧರಾಗಿ ಕೊನೆಗೆ ಜೀವನವನ್ನು ಸಂಪೂರ್ಣ ಹಾಳುಮಾಡಿಕೊಂಡು ಸಾವಿನ ಹಾದಿ ತುಳಿದ ಉದಾಹರಣೆಗಳೂ ಇವೆ.
ಇವುಗಳ ನಡುವೆಯೇ, ಮತ್ತೊಂದೆಡೆ, ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಇರುವಂತೆ, ಹೆಣ್ಣುಮಕ್ಕಳೇ ಹಿಂದೂ ಸ್ನೇಹಿತೆಯರನ್ನು ಟಾರ್ಗೆಟ್ ಮಾಡಿ ಅವರನ್ನು ಮತಾಂತರ ಮಾಡುವ ಕಾರ್ಯವೂ ಸದ್ದಿಲ್ಲದೇ ನಡೆಯುತ್ತಿದೆ ಎನ್ನುವ ಆರೋಪಗಳೂ ಕೇಳಿಬರುತ್ತಿವೆ. ಈ ಆರೋಪಕ್ಕೆ ಸಾಕ್ಷಿ ಎಂಬಂತೆ, ಉತ್ತರ ಪ್ರದೇಶದ ಮೊರಾದಾಬಾದ್‌ನ ಸಿಸಿಟಿವಿಯಲ್ಲಿ ಶಾಕಿಂಗ್ ವಿಡಿಯೋ ಒಂದು ದಾಖಲಾಗಿದೆ. ಇದರಲ್ಲಿ ಟ್ಯೂಷನ್ಗೆ ಹೋದ ಸಂದರ್ಭದಲ್ಲಿ ಕೆಲವು ಮುಸ್ಲಿಂ ಯುವತಿಯರು ಹಿಂದೂ ಯುವತಿಗೆ ಬುರ್ಖಾ ಧರಿಸುವಂತೆ ಒತ್ತಾಯ ಮಾಡುತ್ತಿರುವುದನ್ನು ನೊಡಬಹುದಾಗಿದೆ.
ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಐದು ಮುಸ್ಲಿಂ ಹುಡುಗಿಯರ ವಿರುದ್ಧ ಉತ್ತರ ಪ್ರದೇಶ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇಂಥ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಹೊರಕ್ಕೆ ಕಳುಹಿಸಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಾಗಲೇ ಕೆಲವರು ತಮ್ಮ ಮಕ್ಕಳಿಗೆ ಟ್ಯೂಷನ್ ಕಳಿಸುವುದನ್ನೇ ನಿಲ್ಲಿಸಿದ್ದಾರೆ ಎಂದು ವರದಿಯಾಗಿದೆ!
ಸದ್ಯ ಸಿಸಿಟಿವಿಯ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಹಿಂದೂ ಹುಡುಗಿ ತನಗೆ ಒತ್ತಡ ಹಾಕುತ್ತಿರುವುದಾಗಿ ಹೇಳಿದ್ದಾಳೆ, ಆದರೆ ಆರೋಪಿ ಹೆಣ್ಣುಮಕ್ಕಳ ಪಾಲಕರು ಇದು ತಮಾಷೆಗೆ ಮಾಡಿದ್ದು ಎನ್ನುತ್ತಿದ್ದಾರೆ. ಇದರ ಬಗ್ಗೆ ಇನ್ನಷ್ಟೇ ಸತ್ಯಾಂಶ ಬಹಿರಂಗಗೊಳ್ಳಬೇಕಿದೆ. indianewspage ಖಾತೆಯಲ್ಲಿನ ವಿಡಿಯೋ ಇಲ್ಲಿದೆ ನೋಡಿ:
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ