ಕೇರಳದ ನರ್ಸಿಂಗ್ ವಿದ್ಯಾರ್ಥಿನಿಗೆ ಮದ್ಯ ಕುಡಿಸಿ ಸ್ನೇಹಿತರಿಂದಲೇ ಅತ್ಯಾಚಾರ

By Anusha Kb  |  First Published Feb 21, 2023, 3:04 PM IST

ನರ್ಸಿಂಗ್ ವಿದ್ಯಾರ್ಥಿನಿಗೆ ಒತ್ತಾಯಪೂರ್ವಕವಾಗಿ ಸಾರಾಯಿ ಕೂಡಿಸಿ ಆಕೆಯ ಮೇಲೆ ಸ್ನೇಹಿತರೇ ಅತ್ಯಾಚಾರವೆಸಗಿದ ಘಟನೆ ಕೇರಳದ ಕೊಜಿಕೋಡ್‌ನಲ್ಲಿ ನಡೆದಿದೆ.


ಕೊಜಿಕೋಡ್: ನರ್ಸಿಂಗ್ ವಿದ್ಯಾರ್ಥಿನಿಗೆ ಒತ್ತಾಯಪೂರ್ವಕವಾಗಿ ಸಾರಾಯಿ ಕೂಡಿಸಿ ಆಕೆಯ ಮೇಲೆ ಸ್ನೇಹಿತರೇ ಅತ್ಯಾಚಾರವೆಸಗಿದ ಘಟನೆ ಕೇರಳದ ಕೊಜಿಕೋಡ್‌ನಲ್ಲಿ ನಡೆದಿದೆ.  ಒತ್ತಾಯಪೂರ್ವಕವಾಗಿ ಆಕೆಗೆ ಮದ್ಯ ಕುಡಿಸಿದ ಸ್ನೇಹಿತರು ಬಳಿಕ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಘಟನೆಯ ಬಳಿ ಖಿನ್ನತೆಗೆ ಜಾರಿದ ವಿದ್ಯಾರ್ಥಿನಿ ಕಾಲೇಜಿನಲ್ಲಿ ವಿಚಿತ್ರವಾಗಿ ವರ್ತಿಸಲು ಆರಂಭಿಸಿದ್ದನ್ನು ಗಮನಿಸಿದ ಕಾಲೇಜು ಆಡಳಿತ ಮಂಡಳಿ  ಆಕೆಗೆ ಆಪ್ತ ಸಮಾಲೋಚನೆ ನಡೆಸಿದ್ದಾರೆ.  ಈ ವೇಳೆ ಆಕೆ ಘಟನೆಯ ಬಗ್ಗೆ ತಿಳಿಸಿದ್ದಾಳೆ. ಇದಾದ ಬಳಿಕ ಕೊಜಿಕೋಡ್ ಕಸಬಾ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿ ದೂರು ದಾಖಲಿಸಿದ್ದಾಳೆ. 

ಎರ್ನಾಕುಲಂ(Ernakulam) ಮೂಲದ ಈ ವಿದ್ಯಾರ್ಥಿನಿಯನ್ನು ಆಕೆಯ ಸ್ನೇಹಿತರು ಅವರಿದ್ದ ಬಾಡಿಗೆ ಮನೆಗೆ ಕರೆದಿದ್ದಾರೆ. ನಂತರ ಒತ್ತಾಯಪೂರ್ವಕವಾಗಿ ಆಕೆಗೆ ಮದ್ಯ ಕುಡಿಸಿದ್ದಾರೆ.  ಬಳಿಕ ಅವಳು ಮದ್ಯದ ನಸೆಯಲ್ಲಿರುವುದನ್ನು(inebriated state) ಖಚಿತಪಡಿಸಿಕೊಂಡು ಆಕೆಯ ಮೇಲೆ ಇಬ್ಬರೂ ಅತ್ಯಾಚಾರವೆಸಗಿದ್ದಾರೆ.  ಘಟನೆಯ ಬಳಿಕ ಆರೋಪಿ ಈ ನರ್ಸಿಂಗ್ ವಿದ್ಯಾರ್ಥಿನಿಯನ್ನು ಒಬ್ಬನೇ ಬಿಟ್ಟು ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ಇದಾದ ಬಳಿಕ ವಿದ್ಯಾರ್ಥಿನಿಗೆ ಪ್ರಜ್ಞೆ ಬಂದಿದ್ದು, ಆಕೆ ಬಳಿಕ ತನ್ನ ಗೆಳತಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ. ಆಕೆ ಬಂದು ಈಕೆಯನ್ನು ಕರೆದೊಯ್ದಿದ್ದಾರೆ. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕೊಜಿಕೋಡ್ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಅವರಿಬ್ಬರೂ ಪೊಲೀಸ್ ಕಸ್ಟಡಿಯಲ್ಲಿದ್ದಾರೆ (police custody).

Tap to resize

Latest Videos

Kolara: ಅಪಹರಿಸಿ ಆಪ್ರಾಪ್ತ ಬಾಲಕಿಯ ಅತ್ಯಾಚಾರ, 4 ಆರೋಪಿಗಳಿಗೆ ಜೀವಿತಾವಧಿವರೆಗೂ ಜೈಲು

ಮದುವೆಯಾಗುವುದಾಗಿ ನಂಬಿಸಿ ವಂಚನೆ: ಬೆಳಗಾವಿ ಪಿಎಸ್ಐ ವಿರುದ್ಧ ಕೇಸ್

ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕ್ರಿಯೆಗೆ ಮಾಡಿದ್ದಲ್ಲದೇ ಬೇರೆ ಯುವತಿಯನ್ನು ಮದುವೆಯಾಗಿ ಮೋಸ ಮಾಡಿರುವ ಕುರಿತು ಪಿಎಸ್ಐ ಮೇಲೆ‌ ಫೆ.17ರಂದು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೈಯರ್ ಲೆಸ್ (Wireless)ವಿಭಾಗದಲ್ಲಿ ಸಬ್-ಇನ್ಸ್‍ಪೆಕ್ಟರ್ (Sub Inspector) ಆಗಿ ಕಾರ್ಯ ನಿರ್ವಹಿಸುತ್ತಿದ್ದ ಲಾಲಸಾಬ್ ನಧಾಪ್ ಮೇಲೆ ಪ್ರಕರಣ ದಾಖಲಾಗಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ (Ramadurga) ತಾಲೂಕಿನ ಯುವತಿಯೋರ್ವಳನ್ನು ಫೇಸ್‌ಬುಕ್‌ (Facebook) ಮೂಲಕ ಪರಿಚಯಿಸಿಕೊಂಡಿದ್ದಾರೆ. 

ಇದಾದ ಬಳಿಕ ಒಬ್ಬರೊಬ್ಬರು ಆತ್ಮೀಯರಾಗಿ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ನಂತರ ದಿನಗಳಲ್ಲಿ ಬೆಂಗಳೂರು, ಹುಬ್ಬಳ್ಳಿ ಧಾರವಾಡ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸುತ್ತಾಡಿದ್ದಾರೆ. ಬಳಿಕ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕ್ರಿಯೆಯನ್ನು ನಡೆಸಿದ್ದಾನೆ. ಇಬ್ಬರ ‌ವಿಷಯ ಕುಟುಂಬಸ್ಥರಿಗೆ ತಿಳಿದಿದ್ದರಿಂದ ಹಿರಿಯರ‌ ಸಮ್ಮುಖದಲ್ಲಿ ಪಿಎಸ್ಐ ಲಾಲಸಾಬ ನದಾಫ್ ಯುವತಿಯನ್ನು ಮದುವೆಯಾಗುವುದಾಗಿ ಬಾಂಡ್ ಮೂಲಕ ಒಪ್ಪಂದ ಪತ್ರಕ್ಕೆ ಸಹಿ ಹಾಕಿದ್ದಾನೆ.

ಚರ್ಚ್ ಪಾದ್ರಿಗಳಿಂದ 5,000 ಹೆಣ್ಮಕ್ಕಳ ಮೇಲೆ ರೇಪ್​, ಪೋರ್ಚುಗಲ್‌ನಲ್ಲಿ ಮಾನವ ಕುಲವೇ ತಲೆತಗ್ಗಿಸು ಘಟನೆ!

ಆದರೂ ಪಿಎಸ್ಐ ಲಾಲ್ ಸಾಬ ನದಾಫ್ ಪ್ರೀತಿಸಿದ ಯುವತಿಯನ್ನು ಒಪ್ಪಂದದಂತೆ ಮದುವೆಯಾಗದೆ ಕಳೆದ ಕೆಲವು ದಿನಗಳ‌ ಹಿಂದಷ್ಟೇ ಬೇರೆ ಯುವತಿಯನ್ನು ಮದುವೆ ಆಗಿದ್ದಾನೆ. ಇದರಿಂದಾಗಿ ಪಿಎಸ್ಐ ನ ಕಾಮಕ್ಕೆ ಬಲಿಯಾದ ಯುವತಿ ನಗರದ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವ ಕುರಿತು ಪ್ರಕರಣ ದಾಖಲಿಸಿದ್ದಾಳೆ. ಇತ್ತ ಕಳೆದ ಒಂದು ತಿಂಗಳಕ್ಕೂ ಹೆಚ್ಚು ಕಾಲದಿಂದ ಆತ ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದು ತಿಳಿದು ಬಂದಿದೆ.  ಅಲ್ಲದೇ ‌ಕೆಲವು ದಿನಗಳ ಹಿಂದೆ ಈ ಕುರಿತು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅವರಿಗೆ ಈತನ ಕೃತ್ಯದ ಕುರಿತು ದೂರು‌ ಸಲ್ಲಿಸಿದ್ದರೂ, ಅಂದಿನ ಡಿಸಿಪಿ ಕಾಲ‌ ಹರಣ  ಮಾಡಿದ್ದಾರೆ ಎಂದು ಮೋಸಕ್ಕೊಳಗಾದ ಯುವತಿ ಅಸಮಾಧಾನ ವ್ಯಕ್ತಪಡಿಸಿದ್ದಾಳೆ.  

click me!