ಜ್ಯೂಸ್‌ಗೆ ಡ್ರಗ್‌ ಮಿಕ್ಸ್‌ ಮಾಡಿ ಹಲವು ಅಪ್ರಾಪ್ತರ ಮೇಲೆ ಮಧ್ಯವಯಸ್ಕನಿಂದ ರೇ*ಪ್: ವೀಡಿಯೋ ಮಾಡಿ ಬ್ಲಾಕ್‌ಮೇಲ್

Published : Dec 18, 2025, 11:09 AM IST
child abuse4

ಸಾರಾಂಶ

ಮುಂಬೈನಲ್ಲಿ, ತಂಪು ಪಾನೀಯದಲ್ಲಿ ಮಾದಕ ದ್ರವ್ಯ ಬೆರೆಸಿ ಅಪ್ರಾಪ್ತ ಯುವತಿಯರ ಮೇಲೆ ಅತ್ಯಾಚಾರವೆಸಗುತ್ತಿದ್ದ 45 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ  ಕೃತ್ಯದ ವೀಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಒಟ್ಟು 8ರಿಂದ 10 ಬಾಲಕಿಯರ ಮೇಲೆ ಈತ ಲೈಂಗಿಕ ದೌರ್ಜನ್ಯವೆಸಗಿದ್ದಾನೆ.

 

ಮುಂಬೈ: ತಂಪು ಪಾನೀಯದಲ್ಲಿ ಮತ್ತು ಭರಿಸುವ ಮಾದಕ ದ್ರವ್ಯವನ್ನು ಮಿಕ್ಸ್ ಮಾಡಿ ನೀಡಿ ಹಲವು ಯುವತಿಯರ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ 45 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈನ ಕುರಾರ್ ಪೊಲೀಸ್ ಠಾಣೆಯ ಅಧಿಕಾರಿಗಳ ಪ್ರಕಾರ ಆರೋಪಿಯನ್ನು ಮಹಶ್ ರಮೇಶ್ ಪವಾರ್ ಎಂದು ಗುರುತಿಸಲಾಗಿದೆ. ಮುಂಬೈನ ಉಪನಗರವಾದ ವಿರಾರ್‌ನಿಂದ ಆತನನ್ನು ಬಂಧಿಸಲಾಗಿದೆ. ಆರೋಪಿ ಯುವತಿಯರಿಗೆ ಅವರ ತಂಪು ಪಾನೀಯದಲ್ಲಿ ಮತ್ತು ಭರಿಸುವ ಮಾದಕದ್ರವ್ಯಗಳನ್ನು ಹಾಕಿ ನೀಡುತ್ತಿದ್ದು, ಆ ಯುವತಿಯರು ತಂಪು ಪಾನೀಯ ಕುಡಿದು ಪ್ರಜ್ಞೆ ಕಳೆದುಕೊಳ್ಳುತ್ತಿದ್ದಂತೆ ಅವರ ಮೇಲೆ ಅತ್ಯಾಚಾರವೆಸಗುತ್ತಿದ್ದ, ಜೊತೆಗೆ ಈ ಅಶ್ಲೀಲ ದೃಶ್ಯಗಳನ್ನು ಮೊಬೈಲ್‌ಗಳಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ. ಬಹುತೇಕ ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಹೀಗೆ ನಿದ್ರಾಜನಕ ಮಾತ್ರೆಗಳನ್ನು ಅವರು ಕುಡಿಯುವ ಜ್ಯೂಸ್‌ಗೆ ಮಿಕ್ಸ್ ಮಾಡಿ ನೀಡುತ್ತಿದ್ದ. ಅವರು ಜ್ಯೂಸ್ ಕುಡಿದು ಪ್ರಜ್ಞೆ ಕಳೆದುಕೊಳ್ಳುತ್ತಿದ್ದಂತೆ ಅವರ ಮೇಲೆ ರೇಪ್ ಮಾಡಿ ಅವರ ಅಶ್ಲೀಲ ವೀಡಿಯೋಗಳನ್ನು ಮಾಡಿಕೊಳ್ಳುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿ ಇದುವರೆಗೂ 8ರಿಂದ 10 ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಹೀಗೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಆತನ ವಿರುದ್ಧ ದೂರು ಬಂದ ನಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಅಪ್ರಾಪ್ತ ಮಕ್ಕಳನ್ನು ಪರಿಚಯ ಮಾಡಿಕೊಂಡುಜ್ಯೂಸ್ ಕೊಡಿಸುವುದಾಗಿ ಆಮಿಷವೊಡ್ಡಿ ಕರೆದುಕೊಂಡು ಹೋಗಿ ಈ ಕೃತ್ಯವೆಸಗುತ್ತಿದ್ದ. ಜ್ಯೂಸ್‌ ಕೊಡಿಸುತ್ತಾನೆ ಎಂದು ಕರೆದುಕೊಂಡು ಹೋಗುತ್ತಿದ್ದ ಆರೋಪಿ ಬಳಿಕ ಮಕ್ಕಳಿಗೆ ತಿಳಿಯದಂತೆ ಅದಕ್ಕೆ ಮಾದಕವಸ್ತು ಅಥವಾ ನಿದ್ರಾಜನಕ ಮಾತ್ರೆಗಳನ್ನು ಮಿಕ್ಸ್ ಮಾಡುತ್ತಿದ್ದ. ಇತ್ತ ಈತನ ಕರಾಳ ಕೃತ್ಯದ ಅರಿವಿಲ್ಲದ ಮಕ್ಕಳು ಆ ಜ್ಯೂಸ್ ಕುಡಿದು ಪ್ರಜ್ಞೆ ಕಳೆದುಕೊಳ್ಳುತ್ತಿದ್ದರು. ಪ್ರಜ್ಞೆ ಕಳೆದುಕೊಂಡ ನಂತರ ಅವರ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ. ಆ ದೃಶ್ಯವನ್ನು ವೀಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದು, ಬಳಿಕ ಆ ದೃಶ್ಯವನ್ನು ಅವರಿಗೆ ತೋರಿಸಿ ಅವರಿಗೆ ದೃಶ್ಯವನ್ನು ಬಯಲು ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ, ಈ ಬೆದರಿಕೆಗೆ ಹೆದರಿ ಮಕ್ಕಳು ಆತ ಕರೆದಾಗಲೆಲ್ಲ ಬರುವಂತೆ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಪುಸ್ತಕ ಪಕ್ಕಕ್ಕಿಟ್ಟು ಟಿವಿ ನೋಡ್ತಿದ್ದ ಬಾಲಕಿಗೆ ಅಪ್ಪನ ಆಗಮನದ ಬಗ್ಗೆ ಸೂಚನೆ ನೀಡಿದ ಜರ್ಮನ್ ಶೆಫರ್ಡ್‌ ಶ್ವಾನ: ವೀಡಿಯೋ ಭಾರಿ ವೈರಲ್

ಈ ಘಟನೆ ಸ್ಥಳೀಯರಲ್ಲಿ ತವ್ರ ದಿಗ್ಬ್ರಮೆ ಮೂಡಿಸಿದ್ದು, ಇಂತಹ ವಿವಿಧ ರೂಪಗಳಲ್ಲಿ ಹೊರ ಬರುತ್ತಿರುವ ಕಾಮುಕರಿಂದ ಅಪ್ರಾಪ್ತ ಮಕ್ಕಳನ್ನು ರಕ್ಷಿಸುವುದಾದರು ಹೇಗೆ ಎಂಬ ಭಯ ಪೋಷಕರನ್ನು ಕಾಡುತ್ತಿದೆ. ಅಪರಿಚಿತರಾಗಲಿ ಪರಿಚಿತರೇ ಆಗಲಿ ಹೀಗೆ ಜ್ಯೂಸ್ ಕೊಡಿಸುತ್ತೇವೆ, ಚಾಕೋಲೇಟ್ ಕೊಡಿಸುತ್ತೇವೆ ಎಂದು ಹತ್ತಿರ ಬಂದರೆ ತೆಗೆದುಕೊಳ್ಳದಂತೆ ಅವರ ಬಳಿ ಹೋಗದಂತೆ ಪೋಷಕರು ಅಪ್ರಾಪ್ತ ಮಕ್ಕಳಿಗೆ ಜಾಗೃತಿ ಮೂಡಿಸಬೇಕಿದೆ. ಜೊತೆಗೆ ಪುಟ್ಟ ಹೆಣ್ಣು ಮಕ್ಕಳ ಬದುಕು ಹಾಳು ಮಾಡಿದ ಈ ಪಾತಕಿ ಕಾಮುಕನಿಗೆ ಘೋರ ಶಿಕ್ಷೆ ನೀಡಬೇಕಿದೆ.

ಇದನ್ನೂ ಓದಿ: ನಾ ಚೆನ್ನಾಗಿಲ್ಲ, ನಾ ಬಿಳಿ ಇಲ್ಲ, ನನ್ನ ಕುರೂಪಿ ಅಂತಾರೆ: ಪುಟ್ಟ ಮಗಳ ಅಳು ಕೇಳಲಾಗದೇ ನೆಟ್ಟಿಗರ ಸಲಹೆ ಕೇಳಿದ ತಾಯಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ
India Latest News Live: ಜ್ಯೂಸ್‌ಗೆ ಡ್ರಗ್‌ ಮಿಕ್ಸ್‌ ಮಾಡಿ ಹಲವು ಅಪ್ರಾಪ್ತರ ಮೇಲೆ ಮಧ್ಯವಯಸ್ಕನಿಂದ ರೇ*ಪ್ - ವೀಡಿಯೋ ಮಾಡಿ ಬ್ಲಾಕ್‌ಮೇಲ್