ಬೈಕ್ನಲ್ಲಿ ಬಂದ ಕಳ್ಳರು ಮೊಬೈಲ್ ಎಗರಿಸಿಕೊಂಡು ಹೋದಾಗ ಅವರ ಹಿಂದೆ ಓಡಿದ ಯುವತಿಯ ಭಯಾನಕ ವಿಡಿಯೋ ವೈರಲ್ ಆಗಿದೆ. ಮುಂದಾದದ್ದೇ ದುರಂತ!
ಈಗ ಕಳ್ಳರು ಯಾವ್ಯಾವ ರೀತಿಯಲ್ಲಿ ಕಳ್ಳತನ ಮಾಡುತ್ತಾರೆ ಎಂದು ಹೇಳುವುದೇ ಕಷ್ಟ. ಅದರಲ್ಲಿಯೂ ಹೆಣ್ಣು ಮಕ್ಕಳು ದಾರಿಯಲ್ಲಿ ಒಂಟಿಯಾಗಿ ಓಡಾಡುವುದೇ ತಪ್ಪು ಎನ್ನುವಷ್ಟರ ಮಟ್ಟಿಗೆ ಭಯಾನಕ ಘಟನೆಗಳು ನಡೆಯುತ್ತವೆ. ಅದರಲ್ಲಿಯೂ ಮೊಬೈಲ್ನಲ್ಲಿ ಮಾತನಾಡುತ್ತಾ ಹೋದರೆ, ಲೋಕದ ಅರಿವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಕೆಲವರು ನಡೆದುಕೊಂಡು ಹೋಗುತ್ತಾರೆ. ಅಂಥ ಸಂದರ್ಭದಲ್ಲಿ ಬೈಕ್ಗಳಲ್ಲಿ ಬರುವ ಕಳ್ಳರು ಸುಲಭದಲ್ಲಿ ಮೊಬೈಲ್ ಫೋನ್ ಎಗರಿಸಿಕೊಂಡು ಹೋಗುವುದು ಉಂಟು. ಇಲ್ಲವೇ ಮಹಿಳೆಯರಾದರೆ ಸರಕ್ಕೆ ಕೈಹಾಕಿ ಅದನ್ನು ಎಗರಿಸಿದರೆ, ಭುಜಕ್ಕೆ ಹಾಕಿಕೊಂಡಿರುವ ಬ್ಯಾಗ್ ಅನ್ನೂ ಕಿತ್ತುಕೊಂಡು ಹೋಗುವುದು ಉಂಟು. ಇಂಥ ಸಂದರ್ಭಗಳಲ್ಲಿ ಏನು ಮಾಡಬೇಕು ಎಂದು ತಿಳಿಯದೇ ಕಿರುಚಾಡುವಷ್ಟರಲ್ಲಿಯೇ ಈ ಖದೀಮರು ಸುಲಭದಲ್ಲಿ ತಮ್ಮ ಕೆಲಸ ಮಾಡಿಕೊಂಡು ಹೋಗಿಬಿಟ್ಟಿರುತ್ತಾರೆ. ಅದಕ್ಕಾಗಿ ಎಷ್ಟೇ ಜಾಗರೂಕರಾಗಿ ಇದ್ದರೂ ಈಗಿನ ಕಾಲದಲ್ಲಿ ಕಷ್ಟವೇ ಎನ್ನುವಂತಾಗಿದೆ.
ಇಲ್ಲೊಬ್ಬ ಯುವತಿ ಬೈಕ್ನಲ್ಲಿ ಬಂದು ಮೊಬೈಲ್ ಫೋನ್ ಕದ್ದ ಕಳ್ಳರನ್ನು ಹಿಂಬಾಲಿಸಿ ಪ್ರಾಣವನ್ನೇ ಪಣಕ್ಕಿಟ್ಟಿರುವ ಭಯಾನಕ ಘಟನೆ ನಡೆದಿದೆ. ಪಂಜಾಬ್ನ ಜಲಂಧರ್ನಲ್ಲಿ ಈ ಘಟನೆ ನಡೆದಿದೆ. ದ್ವಿತೀಯ ಪಿಯುಸಿ ಓದುತ್ತಿರುವ ಲಕ್ಷ್ಮಿ ಎಂಬಾಕೆಯ ಭಯಾನಕ ದೃಶ್ಯ ಇದಾಗಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೋಡುಗರನ್ನು ಭಯಭೀತಿಗೊಳಿಸುವಂತಿದೆ. ಕಷ್ಟಪಟ್ಟು ದುಡಿದು ಸಂಪಾದನೆ ಮಾಡಿರುವ ವಸ್ತುಗಳು ಕಳ್ಳರ ವಶಕ್ಕೆ ಹೋಗುವುದನ್ನು ನೋಡಿ ಸುಮ್ಮನೇ ಕುಳಿತುಕೊಳ್ಳುವುದು ಕಷ್ಟವೇ. ಕೆಲವೊಮ್ಮೆ ಹೀಗೆ ಕದ್ದ ವಸ್ತುಗಳ ಹಿಂದೆ ಅದೆಷ್ಟೋ ಭಾವನಾತ್ಮಕ ಸಂಬಂಧಗಳೂ ಇರುತ್ತವೆ. ಹಾಗೆಂದು ಪ್ರಾಣವನ್ನೇ ಪಣಕ್ಕಿಟ್ಟುಬಿಟ್ಟರೆ ಹೇಗೆ? ಹೇಳುವುದು ಸುಲಭ. ಆ ಸಮಯದಲ್ಲಿ ವಿಚಲಿತವಾಗುವ ಮನಸ್ಸು ಯಾವ ಹಂತಕ್ಕಾದರೂ ಹೋಗಿಬಿಡುತ್ತದೆ ಎನ್ನುವುದಕ್ಕೆ ಈ ಭೀಕರ ಘಟನೆಯೇ ಸಾಕ್ಷಿಯಾಗಿದೆ.
ಗೌರಿ ವಾರ್ನ್ ಮಾಡಿದ್ರೂ ಎಲ್ಲರೆದುರು ಪ್ರಿಯಾಂಕಾಳ ಬಟ್ಟೆ ಬಿಚ್ಚಿ ಕಿಸ್ ಕೊಟ್ಟ ಶಾರುಖ್! ವಿಡಿಯೋ ವೈರಲ್
ಸಚಿನ್ ಗುಪ್ತಾ ಎನ್ನುವವರು ಈ ವಿಡಿಯೋ ಶೇರ್ ಮಾಡಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ, ಯುವತಿ ಬೈಕ್ ಹಿಂದೆ ಓಡುವುದನ್ನು ನೋಡಬಹುದು. ಹೇಳಿಕೇಳಿ ಅವರ ದರೋಡೆಕೋರರು. ಬೈಕ್ ಅನ್ನು ಫಾಸ್ಟ್ ಆಗಿ ಓಡಿಸಿದ್ದಾರೆ. ಯುವತಿ ಆಯತಪ್ಪಿ ಬಿದ್ದರೂ ಬೈಕ್ ಅನ್ನು ಹಿಡಿದುಕೊಂಡಿದ್ದಾಳೆ. ಬಹುದೂರದವರೆಗೆ ಆಕೆಯನ್ನು ಅಕ್ಷರಶಃ ಬೈಕ್ನಲ್ಲಿ ಎಳೆದುಕೊಂಡು ಹೋಗಿದ್ದಾರೆ ಪಾಪಿಗಳು. ಎಷ್ಟೇ ಯುವತಿ ಕಿರುಚಾಡಿದರೂ ರಾಕ್ಷಸರ ಕರುಳು ಚುರುಕ್ ಅನ್ನುವುದೆ? ಬಹುದೂರದವರೆಗೆ ಇದೇ ರೀತಿ ರಸ್ತೆಯ ಮೇಲೆ ಎಳೆದುಕೊಂಡೇ ಹೋಗಿದ್ದಾಳೆ ಯುವತಿ. ಅಲ್ಲಿಗೆ ಸಿಸಿಟಿವಿಯ ವ್ಯಾಪ್ತಿ ಮುಗಿದಿರುವ ಕಾರಣ ಮುಂದೆ ಏನಾಯಿತೋ ಕಾಣಿಸುವುದಲ್ಲ. ಆದರೆ ವರದಿಯ ಪ್ರಕಾರ ಯುವತಿ ಅಲ್ಲಿಯೇ ಬಿದ್ದು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಳೆ, ಆದರೆ ಫೋನ್ ಆಕೆಗೆ ಸಿಗಲಿಲ್ಲ ಎನ್ನಲಾಗಿದೆ. ಅಂದ ಹಾಗೆ ಲಕ್ಷ್ಮಿಯ ಅಪ್ಪ-ಅಮ್ಮ ಕೂಲಿ ಮಾಡಿ ಈಕೆಗೆ ಮೊಬೈಲ್ ಫೋನ್ ಕೊಡಿಸಿದ್ದರು ಎನ್ನಲಾಗಿದೆ.
ಇಂಥ ಸಂದರ್ಭಗಳಲ್ಲಿ ಕೊನೆಯ ಪಕ್ಷ ಬೈಕ್ ಅಥವಾ ಇನ್ನಾವುದೋ ವಾಹನಗಳ ನಂಬರ್ ನೋಟ್ ಮಾಡಿಕೊಳ್ಳಿ ಎನ್ನುತ್ತಾರೆ ಪೊಲೀಸರು. ಆದರೆ ಪೊಲೀಸರು ಚಾಪೆ ಕೆಳಗೆ ನುಸುಳಿದರೆ, ಇಂಥ ಚಾಲಾಕಿ, ಖತರ್ನಾಕ್ ಕಳ್ಳರು ರಂಗೋಲಿ ಕೆಳಗೆ ನುಸುಳುವುದು ಇದೆ. ವಾಹನಗಳ ನಂಬರ್ ಬದಲಿಸುವುದು ಅವರಿಗೆ ನೀರು ಕುಡಿದಷ್ಟೇ ಸುಲಭ. ಆದರೆ ಇಂಥ ಸಂದರ್ಭಗಳಲ್ಲಿ ಪ್ರಾಣದ ಜೊತೆ ಹೋರಾಟ ಮಾಡುವ ಬದಲು ವಾಹನಗಳ ನಂಬರ್ ನೋಡಿಕೊಂಡರೆ ಕಳ್ಳರನ್ನು ಹಿಡಿಯುವ ದಾರಿ ಸ್ವಲ್ಪವಾದರೂ ಸಲೀಸಾದೀತು. ಆದರೆ ಇಂಥ ಸಂದರ್ಭಗಳಲ್ಲಿ ಏನಾಯ್ತು ಎಂದು ತಿಳಿಯುವಷ್ಟರಲ್ಲಿಯೇ ಕಳ್ಳರು ಪರಾರಿಯಾಗಿರುತ್ತಾರೆ. ಸಿಸಿಟಿವಿಗಳಲ್ಲಿ ದೃಶ್ಯ ದಾಖಲಾದರೂ ಅವುಗಳ ಕ್ಲಾರಿಟಿ, ಸಾಮಾನ್ಯ ಜನರ ವಿಷಯದಲ್ಲಿ ಪೊಲೀಸರ ತನಿಖೆ ಎಲ್ಲವೂ ಪ್ರಶ್ನಾರ್ಹವಾಗಿಯೇ ಉಳಿಯುವುದು ಇದೆ.
4ನೇ ಕ್ಲಾಸ್ನಲ್ಲಿದ್ದಾಗಲೇ ಯಾರ್ದೋ ಜೊತೆ ಓಡಿ ಹೋಗಿದ್ರಂತೆ ಮೇಘನಾ: ಸೀತಾರಾಮ ಪ್ರಿಯಾಳ ಕಥೆ ಕೇಳಿ!
पंजाब में जालंधर का ये Video कितना खौफनाक है...
12वीं की छात्रा लक्ष्मी से बाइक सवार 3 लुटेरों ने मोबाइल लूट लिया। लक्ष्मी ने एक लुटेरे का हाथ पकड़ लिया। वो दूर तक घिसटती चली गई। कपड़े फट गए, लेकिन मोबाइल नहीं छुड़ा पाई। लुटेरे भाग निकले। इस बिटिया के मां बाप मजदूरी करते हैं। pic.twitter.com/Dp5k6N0KKU