Rahul Gandhi ಕುರಿತ ಹೇಳಿಕೆ: ಅಸ್ಸಾಂ ಸಿಎಂ ಸಮರ್ಥನೆ

By Kannadaprabha News  |  First Published Feb 14, 2022, 1:50 AM IST

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕುರಿತಾಗಿ ತಮ್ಮ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾದರೂ ಅದನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಸಮರ್ಥಿಸಿಕೊಂಡಿದ್ದಾರೆ ಹಾಗೂ ಸೇನಾ ಸಿಬ್ಬಂದಿಯನ್ನು ಪ್ರಶ್ನಿಸುವುದನ್ನು ಇನ್ನು ಮುಂದೆ ಸಹಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.


ಗುವಾಹಟಿ (ಫೆ.14): ಕಾಂಗ್ರೆಸ್‌ (Congress) ನಾಯಕ ರಾಹುಲ್‌ ಗಾಂಧಿ (Rahul Gandhi) ಕುರಿತಾಗಿ ತಮ್ಮ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾದರೂ ಅದನ್ನು ಅಸ್ಸಾಂ ಮುಖ್ಯಮಂತ್ರಿ (Assam) ಹಿಮಂತ ಬಿಸ್ವ ಶರ್ಮ (Himanta Biswa Sarma) ಸಮರ್ಥಿಸಿಕೊಂಡಿದ್ದಾರೆ ಹಾಗೂ ಸೇನಾ ಸಿಬ್ಬಂದಿಯನ್ನು ಪ್ರಶ್ನಿಸುವುದನ್ನು ಇನ್ನು ಮುಂದೆ ಸಹಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. 

ಸರ್ಜಿಕಲ್‌  ಸ್ಟ್ರೈಕ್‌ಗೆ (Surgical Strike) ಸಂಬಂಧಿಸಿದ್ದಕ್ಕೆ ಪುರಾವೆ ಕೇಳಿದ್ದಕ್ಕೆ ರಾಹುಲ್‌ ವಿರುದ್ಧ ಹರಿಹಾಯ್ದಿದ್ದ ಬಿಸ್ವಾ ಶರ್ಮ, ‘ನೀವು ರಾಜೀವ್‌ ಗಾಂಧಿ (Rajeev Gandhi) ಅವರರ ಮಗನಾ ಎಂಬುದಕ್ಕೆ ನಾವು ಎಂದಾದರೂ ಪುರಾವೆ ಕೇಳಿದ್ದೆವಾ?’ ಎಂದಿದ್ದರು. ಇದು ವಿವಾದಕ್ಕೀಡಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಶರ್ಮ, ‘ಭಾರತ ಕೇವಲ ರಾಜ್ಯಗಳ ಒಕ್ಕೂಟವಲ್ಲ. ಅದು ನಮ್ಮ ತಾಯಿಯ ಹಾಗೆ. ಸೈನಿಕರನ್ನು ಪ್ರಶ್ನಿಸುವುದು ತಾಯಿಗೆ ಅವಮಾನ ಮಾಡಿದಂತೆ. 

Tap to resize

Latest Videos

ಸೇನೆಯನ್ನು ಪ್ರಶ್ನಿಸಿದಕ್ಕೆ ನಾನು ಅವರನ್ನು ಪ್ರಶ್ನಿಸಿದೆ. ಅದಕ್ಕಾಗಿ ಕೋಪಗೊಳ್ಳುತ್ತಾರೆ. ಅವರು ನಮ್ಮ ಸೇನೆಯನ್ನು ಪ್ರಶ್ನಿಸಿದರೆ ನಾವು ಸುಮ್ಮನಿರಬೇಕಾ?’ ಎಂದು ಕೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ 2016ರ ಸರ್ಜಿಕಲ್‌ ಸ್ಟ್ರೈಕ್‌ ಮತ್ತು ಬಿಪಿನ್‌ ರಾವತ್‌ (Bipin Rawat) ನೇಮಕಾತಿ ಸಮಯದಲ್ಲಿ ಕಾಂಗ್ರೆಸ್‌ ಮಾಡಿದ್ದ ಟ್ವೀಟ್‌ಗಳ (Tweet) ಫೋಟೋವನ್ನು ಹಂಚಿಕೊಂಡಿದ್ದಾರೆ.

ಸರ್ಕಾರಿ ಸೌಲಭ್ಯ ಪಡೆಯಲು 2 ಮಕ್ಕಳ ನೀತಿ ಜಾರಿಗೊಳಿಸಲು ಮುಂದಾದ ಸರ್ಕಾರ!

ಸಚಿವರು ಇನ್ಮುಂದೆ ಬೇಕಾಬಿಟ್ಟಿ ಘೋಷಣೆ ಮಾಡುವಂತಿಲ್ಲ: ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮ ಸೇರಿದಂತೆ ರಾಜ್ಯದ ಎಲ್ಲಾ ಸಚಿವರುಗಳು ಯಾವುದೇ ಪೂರ್ವ ಅನುಮತಿಯಿಲ್ಲದೆ ಹೊಸ ಯೋಜನೆಗಳನ್ನು ಘೋಷಣೆ ಮಾಡುವಂತಿಲ್ಲ. ರಾಜ್ಯದ ಹಣಕಾಸು ಸ್ಥಿತಿಗತಿಯ ಪರಿಶೀಲನೆಯ ಬಳಿಕವೇ ಹೊಸ ಯೋಜನೆಗಳನ್ನು ಘೋಷಣೆ ಮಾಡಬೇಕು ಎಂದು ಅಸ್ಸಾಂ ಸರ್ಕಾರ ಮಹತ್ವದ ನಿರ್ಧಾರ ಮಾಡಿದೆ. 

ಗುರುವಾರ ನಡೆದ ಸಂಪುಟ ಸಭೆಯಲ್ಲಿ  ಈ ನಿರ್ಧಾರವನ್ನು ಮಾಡಲಾಗಿದೆ.  ಅಸ್ಸಾಂ ವಿಧಾನಸಭೆಯ ಬಜೆಟ್ ಅಧಿವೇಶನವು ಮಾರ್ಚ್ 14 ರಂದು ಪ್ರಾರಂಭವಾಗಲಿದ್ದು, 2022-23ನೇ ಹಣಕಾಸು (2022-23 fiscal)ವರ್ಷದ ರಾಜ್ಯದ ಹಣಕಾಸು ಹೇಳಿಕೆಯನ್ನು ಮಂಡಿಸಲು ಸಂಪುಟ ನಿರ್ಧರಿಸಿದೆ. ಶರ್ಮಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹೊಸ ಯೋಜನೆಗಳನ್ನು ಘೋಷಿಸದಿರುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಅಸ್ಸಾಂನಲ್ಲಿ ಗೋಹತ್ಯೆ ಸಂಪೂರ್ಣ ನಿಷೇಧ ಕುರಿತ ಸೂಚನೆ ನೀಡಿದ ಸಿಎಂ

ಅಧಿಕೃತ ಪ್ರವಾಸಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳ ಸಮಯದಲ್ಲಿ, ಸಚಿವರು ಈಗಾಗಲೇ ಬಜೆಟ್‌ನ ಭಾಗವಾಗಿರುವ ಯೋಜನೆಗಳು ಅಥವಾ ಯಾವುದೇ ಇತರ ಸರ್ಕಾರದ ಘೋಷಣೆಗಳ ಬಗ್ಗೆ ಮಾತ್ರ ಮಾಹಿತಿಯನ್ನು ಒದಗಿಸುತ್ತಾರೆ ಎಂದು ಹಿಮಾಂತ ಬಿಸ್ವಾ ಶರ್ಮ ಅವರು ಟ್ವಿಟರ್ ನ ಮೂಲಕ ತಿಳಿಸಿದ್ದಾರೆ. "ಆರ್ಥಿಕ ವಿವೇಕದ ಹಿತದೃಷ್ಟಿಯಿಂದ, ಸಿಎಂ ಮತ್ತು ಇತರ ಸಚಿವರು ಸಾಕಷ್ಟು ಹಣಕಾಸಿನ ಸಂಪನ್ಮೂಲಗಳ ಲಭ್ಯತೆಯನ್ನು ಪರಿಗಣಿಸದೆ ಯಾವುದೇ ಹೊಸ ಘೋಷಣೆಗಳನ್ನು ಮಾಡಬಾರದು. ಆದಾಗ್ಯೂ, ಇಲಾಖೆಗಳನ್ನು ಸಮಾಲೋಚಿಸಿದ ನಂತರ, ಸಮಾರಂಭದ ಸಮಯದಲ್ಲಿ ಮಾಡಿದ ವಿನಂತಿಯ ಪ್ರಕಾರ ಯೋಜನೆಗಳನ್ನು ತೆಗೆದುಕೊಳ್ಳಬಹುದು" ಎಂದು ಹೇಳಿದ್ದಾರೆ.

click me!