ದೆಹಲಿಯ ವಿಜಯ್ ಪಾರ್ಕ್ ಪ್ರದೇಶದಲ್ಲಿ ಐದು ಅಂತಸ್ತಿನ ಕಟ್ಟಡ ನೋಡು ನೋಡುತ್ತಲೇ ಕುಸಿದು ಬಿದ್ದಿದೆ. ಸ್ಥಳೀಯರು ಇದರ ವಿಡಿಯೋ ಮಾಡಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನವದೆಹಲಿ (ಮಾ.8): ದೆಹಲಿಯ ವಿಜಯ್ ಪಾರ್ಕ್ ಪ್ರದೇಶದಲ್ಲಿ, ಐದು ಅಂತಸ್ತಿನ ಕಟ್ಟಡವು ಗಿರಾ ರಸ್ತೆಯ ಬಳಿಕಯಲ್ಲಿ ಕುಸಿದಿದೆ. ಈ ಅವಘಡದಲ್ಲಿ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಅಪಘಾತದ ಮಾಹಿತಿ ತಿಳಿದ ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿದ್ದಾರೆ. ಘಟನೆ ನಡೆದ ಸ್ಥಳದ ಸುತ್ತಲಿನ ರಸ್ತೆಯನ್ನು ನಿರ್ಬಂಧಿಸಲಾಗಿದ್ದು, ಅಲ್ಲಿಂದ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಸದ್ಯ ಕಟ್ಟಡದ ಅವಶೇಷಗಳನ್ನು ತೆಗೆಯುವ ಕಾರ್ಯ ಭರದಿಂದ ನಡೆಯುತ್ತಿದೆ. ಮನೆ ಕುಸಿತವಾಗಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಒಟ್ಟು 49 ಸೆಕೆಂಡ್‌ಗಳ ವಿಡಿಯೋ ಇದಾಗಿದ್ದು, ಐದು ಅಂತಸ್ತಿನ ಕಟ್ಟಡ ಕೇವಲ ನಾಲ್ಕನೇ ಸೆಕೆಂಡ್‌ನಲ್ಲಿ ಕುಸಿದು ಬೀಳೋದು ಇದರಲ್ಲಿ ದಾಖಲಾಗಿದೆ. ಮನೆ ಕುಸಿದು ಬಿದ್ದ ತಕ್ಷಣ ಸ್ಥಳದಲ್ಲಿದ್ದ ಜನರು ಪ್ರಾಣ ಉಳಿಸಿಕೊಳ್ಳಲು ಅಕ್ಕಪಕ್ಕ ಓಡತೊಡಗುತ್ತಾರೆ. ಸಮೀಪದ ಮನೆಗಳು ಮತ್ತು ಅಂಗಡಿಗಳು ಹಾಗೂ ಕೆಲವು ವಾಹನಗಳಿಗೂ ಕೂಡ ಈ ಕುಸಿತದಿಂದ ಹಾನಿಯಾಗಿದೆ. . ಆದರೆ, ಈ ಅಪಘಾತದಿಂದ ಉಂಟಾದ ಹಾನಿಯ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಲಾಗಿಲ್ಲ.
A building collapsed in Vijay Park, Bhajanpura Delhi, Rescue operation underway pic.twitter.com/3WxbeCV4Xm
— Gagandeep Singh (@Gagan4344)
ಏಕಾಏಕಿ ಕುಸಿದ ಕಟ್ಟಡ, ಇಬ್ಬರು ಸಾವು: ಸಂತಾಪ ಸೂಚಿಸಿದ ಪಿಎಂ ಮೋದಿ!
ಮತ್ತೊಂದೆಡೆ, ಸ್ಥಳಕ್ಕೆ ಆಗಮಿಸಿದ ಪೊಲೀಸ್ ಪಡೆ ಜನರನ್ನು ಜನಸಂದಣಿಯಿಂದ ದೂರವಿರುವಂತೆ ಕೇಳಿಕೊಳ್ಳುತ್ತಿರುವುದನ್ನು 2ನೇ ವಿಡಿಯೋದಲ್ಲಿ ಕಾಣಬಹುದಾಗಿದೆ. ಮಾಹಿತಿಯ ಪ್ರಕಾರ, ಈ ಪ್ರದೇಶದಲ್ಲಿನ ಅವಶೇಷಗಳನ್ನು ತೆಗೆಯಲು ಇನ್ನೂ ಹೆಚ್ಚಿನ ಸಮಯ ಬೇಕಾಗುತ್ತದೆ. ಇದೇ ವೇಳೆ ಮನೆ ಕುಸಿತಕ್ಕೆ ಕಾರಣವೇನು ಅನ್ನೋದನ್ನೂ ಪತ್ತೆ ಹಚ್ಚಲಾಗುತ್ತಿದೆ.
ದಸರಾ ಆಚರಣೆಗೆ ಬಂದವರು ಮಸಣ ಸೇರಿದರು: ದಸರಾ ಆಚರಿಸುತ್ತಿದ್ದವರ ಮೇಲೆ ಕುಸಿದ ಕಟ್ಟಡ