
ನವದೆಹಲಿ(ಜೂ.13): ದೇಶಾದ್ಯಂತ ಭಾರೀ ಪ್ರಮಾಣದಲ್ಲಿ ಕೊರೋನಾಕ್ಕೆ ಬಲಿಯಾಗುವ ಪ್ರಮಾಣ ಮುಂದುವರೆದಿದ್ದು, ಶುಕ್ರವಾರ ಒಂದೇ ದಿನ 258 ಜನ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಇವರೆಗೆ ಬಲಿಯಾದವರ ಸಂಖ್ಯೆ 8743ಕ್ಕೆ ತಲುಪಿದೆ. ಈ ಪೈಕಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ 127 ಜನರು ಸಾವನ್ನಪ್ಪಿದ್ದಾರೆ.
ಉಳಿದಂತೆ ಶುಕ್ರವಾರ ದೇಶಾದ್ಯಂತ 9651 ಹೊಸ ಕೇಸು ಪತ್ತೆಯಾಗುವುದರೊಂದಿಗೆ, ಒಟ್ಟು ಸೋಂಕಿತರ ಸಂಖ್ಯೆ 2,98,382ಕ್ಕೆ ತಲುಪಿದೆ. ಇನ್ನು ಒಟ್ಟು ಗುಣಮುಖರಾದವರ ಸಂಖ್ಯೆ 1.52 ಲಕ್ಷಕ್ಕೆ ತಲುಪಿದೆ.
ಸಾವಿನ ಸುನಾಮಿ: ಮಹಾರಾಷ್ಟ್ರದಲ್ಲಿ ಶುಕ್ರವಾರ ಒಂದೇ ದಿನ ಕೊರೋನಾ ವೈರಸ್‌ನ ರಣಕೇಕೆಗೆ 127 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಈ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 3717ಕ್ಕೆ ತಲುಪಿದೆ. ಇನ್ನು ತಮಿಳುನಾಡಿನಲ್ಲಿ 18 (ಒಟ್ಟು 367) ಗುಜರಾತ್‌ನಲ್ಲಿ 31(ಒಟ್ಟು 1416), ಉತ್ತರ ಪ್ರದೇಶ 20(365), ದೆಹಲಿ71(1214), ತಮಿಳುನಾಡು 18(367), ಪಶ್ಚಿಮ ಬಂಗಾಳದಲ್ಲಿ 9(451), ರಾಜಸ್ಥಾನ 4(269), ಮಂದಿ ಕೊರೋನಾ ವ್ಯಾಧಿಯಿಂದ ಸಾವನ್ನಪ್ಪಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ