ತೆಲಂಗಾಣದಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಖಚಿತ, ಬೃಹತ್ ರ್‍ಯಾಲಿಯಲ್ಲಿ ಮೋದಿ ಭಾಷಣ!

By Suvarna NewsFirst Published Jul 3, 2022, 7:38 PM IST
Highlights
  • ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಜನಸಾಗರ
  • ತೆಲಂಗಾಣದಲ್ಲಿ ಚುನಾವಣೆ ರಣಕಹಳೆ ಊದಿದ ಬಿಜೆಪಿ
  • ತೆಲಂಗಾಣ ಜನತೆಗೆ ವಿಶೇಷ ಧನ್ಯವಾದ ಹೇಳಿದ ಮೋದಿ

ಹೈದರಾಬಾದ್(ಜು.03) ತೆಲಂಗಾಣದಲ್ಲಿ ಬಿಜೆಪಿ ನೇತೃತ್ವದ ಡಬಲ್ ಎಂಜಿನ್ ಸರ್ಕಾರ ರಚನೆಯಾಗಲಿದೆ. ನಿಮ್ಮಲ್ಲೆರ ಉತ್ಸಾಹ ಇದಕ್ಕೆ ಸಾಕ್ಷಿಯಾಗುತ್ತಿದೆ. ಡಬಲ್ ಎಂಜಿನ್ ಸರ್ಕಾರದಿಂದ ತೆಲಂಗಾಣದ ಅಭಿವೃದ್ಧಿಗೆ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ  ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ಬಿಜೆಪಿ ಕಾರ್ಯಕಾರಣಿ ಸಭೆಯ ಬಳಿಕ ಹೈದರಾಬಾದ್‌ನಲ್ಲಿ ಆಯೋಜಿಸಿದ ಪ್ರಧಾನಿ ನರೇಂದ್ರ ಮೋದಿ ರ್‍ಯಾಲಿಯಲ್ಲಿ ಮಾಡಿದ ಭಾಷಣ ತೆಲಂಗಾಣ ಬಿಜೆಪಿ ಆತ್ಮವಿಶ್ವಾಸ ಹೆಚ್ಚಿಸಿದೆ. ಮೋದಿ ರ್‍ಯಾಲಿಗೆ ಜನಸಾಗರವೇ ಹರಿದುಬಂದಿತ್ತು. ತೆಲಂಗಾಣ ಪ್ರಾಚೀನತೆ ಹಾಗೂ ಪರಾಕ್ರಮತೆಯ ಸ್ಥಳವಾಗಿದೆ. ಆಲಂಪುರ, ವರಾಂಗಲ್ ಭದ್ರಕಾಳಿ ಸೇರಿದಂತೆ ಹಲವು ಪವಿತ್ರ ಕ್ಷೇತ್ರ ಸ್ಥಳವಾಗಿದೆ. ವಿಶ್ವಪ್ರಸಿದ್ಧ ರಾಮಪ್ಪ ಮಂದಿರದ ಶಿಲ್ಪಕಲೆ ತೆಲಂಗಾಣದ ನಿಪುಣತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮುಂದಿನ 30 ರಿಂದ 40 ವರ್ಷ ಬಿಜೆಪಿ ಯುಗ, ಅಮಿತ್ ಶಾ ವಿಶ್ವಾಸ!

ತೆಲಂಗಾಣ ವಿಕಾಸಕ್ಕೆ ಬಿಜೆಪಿ ಬದ್ಧವಾಗಿದೆ. ತೆಲಂಗಾಣದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನಿರಂತರ ಕೆಲಸ ಮಾಡುತ್ತಿದೆ. ಕಳೆದ 8 ವರ್ಷದಲ್ಲಿ ಭಾರತೀಯ ಜೀವನದಲ್ಲಿ ಸಕರಾತ್ಮ ಪರಿವರ್ತನೆ ಮಾಡಲು ಶ್ರಮಿಸಿದ್ದೇವೆ.  ಪ್ರತಿಯೊಬ್ಬರನ್ನು ಭಾರತೀಯ ವಿಕಾಸದಲ್ಲಿ ಭಾಗಿದಾರರನ್ನಾಗಿ ಮಾಡಲಾಗಿದೆ. ಎಲ್ಲಾ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ.

ದೇಶಹ ಮಹಿಳೆಯರು, ಮಕ್ಕಳಿಗೆ ಹಲವು ಯೋಜನೆಗಳನ್ನು ಕೈಗೆಟುವಂತೆ ಮಾಡಲಾಗಿದೆ. ಇದರಿಂದ ಅಸಂಖ್ಯಾತ ಮಹಿಳೆಯರು ಬಿಜೆಪಿ ಸರ್ಕಾರದ ಜೊತೆ ಕೈಜೋಡಿಸಿದ್ದಾರೆ. ತೆಲಂಗಾಣದ ಪ್ರತಿ ಬಡವರು, ಮಧ್ಯಮ ವರ್ಗದ ಜನರು, ಆದಿವಾಸಿ ಸೇರಿದಂತೆ ಎಲ್ಲರಿಗೂ ಕೇಂದ್ರದ ಸೌಲಭ್ಯಗಳು ಕೈಗೆಟುಕುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಇಲ್ಲಿ ಸೇರಿರುವ ಜನಸ್ತೋಮ, ನಿಮ್ಮ ಪ್ರೀತಿ ನನ್ನ ಉತ್ಸಾಹ ಹೆಚ್ಚಿಸುತ್ತಿದೆ. ನನಗೆ ಯುವ ಸಮೂಹವೇ ಕಾಣುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ತೆಲಂಗಾಣ ಜನರು ಬಿಜೆಪಿಗೆ ಅಭೂತಪೂರ್ವ ಬೆಂಬಲ ನೀಡಿದ್ದೀರಿ. ಗ್ರೇಡರ್ ಹೈದರಾಬಾದ್ ಸ್ಥಳೀಯ ಚುನಾವಣೆಯಲ್ಲೂ ತೆಲಂಗಾಣ ಜನರು ಬಿಜೆಪಿ ಮೇಲೆ ವಿಶ್ವಾಸವಿಟ್ಟು ಬೆಂಬಲ ನೀಡಿದ್ದೀರಿ. ಇದೀಗ ತೆಲಂಗಾಣ ಜನರು ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ. ಈ ಜನಸ್ತೋಮದಲ್ಲಿ ಉತ್ಸಾಹವನ್ನು ನಾನು ಗಮನಿಸುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.

ಕೆಸಿಆರ್‌ಗೆ ಮೋದಿ ಕಂಡ್ರೆ ಯಾಕಷ್ಟು ಕೋಪ? ಹೈದರಾಬಾದ್‌ಗೆ ಬಂದ ಪ್ರಧಾನಿ ಸ್ವಾಗತಿಸಲು ಗೈರು!

ಕೇಂದ್ರದ ಉಜ್ವಲ ಯೋಜನೆಯಿಂದ ತೆಲಂಗಾಣದ ಮಹಿಳೆಯರ ಜೀವನ ಸುಲಭವಾಗಿದೆ. ಮಹಿಳೆಯರು ಹಾಗೂ ಮಕ್ಕಳಿಗಾಗಿ ವಿಶೇಷ ಯೋಜನೆಯಿಂದ ಅವರ ಜೀವನ ಮಟ್ಟ ಸುಧಾರಣೆಯಾಗಿದೆ. ನಾರಿ ಶಕ್ತಿಯನ್ನು ರಾಷ್ಟ್ರ ಶಕ್ತಿಯನ್ನಾಗಿ ರೂಪಿಸುವಲ್ಲಿ ಬಿಜೆಪಿ ಅವಿರತ ಶ್ರಮಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಮಹಿಳೆಯರ ಆರ್ಥಿಕ, ಆದಾಯ ಹೆಚ್ಚಿದೆ. ಮಹಿಳೆಯನ್ನು ಸ್ವಾಲಂಬಿ ಮಾಡುವಲ್ಲಿ ಬಿಜೆಪಿ ನಿರಂತರ ಶ್ರಮಿಸುತ್ತಿದೆ. ಇದರ ನಡುವೆ ಮೋದಿ ಮೋದಿ ಘೋಷಣೆ ಹೆಚ್ಚಾಯಿತು. ಮೋದಿ ಮಾತಿಗಿಂತ ಮೋದಿ ಮೋದಿ ಘೋಷಣೆ ಹೆಚ್ಚಾಗಿ ಕೇಳಿಬಂದಿತು. ಈ ವೇಳೆ ಮೋದಿ, ನಿಮ್ಮ ಪ್ರೀತಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದ ನಸು ನಕ್ಕರು.

ಹೈದರಾಬಾದ್‌ನಲ್ಲಿ ಆಧುನಿಕ ಸೈನ್ಸ್ ಸಿಟಿ, ಬಯೋ ಮೆಡಿಕಲ್ ರಿಸರ್ಚ್ ಸೇರಿದಂತೆ ಹಲವು ಯೋಜನೆಗಳು ಬಿಜೆಪಿ ಜಾರಿ ಮಾಡಿದೆ. ನೂತನ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಯಲ್ಲಿ ನೀಡಲಾಗುತ್ತದೆ. ತೆಲುಗು ಭಾಷೆಯಲ್ಲಿ ಇಲ್ಲಿನ ಮಕ್ಕಳಿಗೆ ಟೆಕ್ನಾಲಜಿ ಹಾಗೂ ಉನ್ನತ ವ್ಯಾಸಾಂಗ ಸಿಗಲಿದೆ ಎಂದು ಮೋದಿ ಹೇಳಿದ್ದಾರೆ.

ತೆಲಂಗಾಣ ಕೃಷಿ ಹಾಗೂ ರೈತರ ಜೀವನ ಸುಧಾರಣೆಗೆ ಕೇಂದ್ರ ಈಗಾಗಲೇ ಹಲವು ಯೋಜನೆ ಜಾರಿಗೊಳಿಸಿದೆ. ಧಾನ್ಯ ಖರೀದಿ, ರೈತರಿಗೆ ಬೆಂಬಲ ಬೆಲೆಗೆ ಈಗಾಗಲೇ ತೆಲಂಗಾಣ ಸರ್ಕಾರಕ್ಕೆ ಹಣ ಬಿಡುಗಡೆ ಮಾಡಲಾಗಿದೆ. ಹೈದರಾಬಾದ್‌ನಲ್ಲಿ 5 ಫ್ಲೈ ಓವರ್ ನಿರ್ಮಾಣಕ್ಕೆ ಕೇಂದ್ರ ಅನುಮೋದನೆ ನೀಡಿದೆ. ಇಷ್ಟೇ ಅಲ್ಲ ರಿಂಗ್ ರೋಡ್ ಕಾಮಕಾರಿ ಕೂಡ ಆರಂಭಿಸಲಾಗಿದೆ. 

ತೆಲಂಗಾಣದ ಹಳ್ಳಿ ಹಳ್ಳಿಗೂ ಸಂಪರ್ಕ ಕಲ್ಪಿಸಲು ಕೇಂದ್ರ ಸರ್ಕಾರ ಅವಿರತ ಪ್ರಯತ್ನ ಮಾಡುತ್ತಿದೆ. ಇದೀಗ 5,000 ಉದ್ದನೇಯ ರಾಷ್ಟ್ರೀಯ ಹೆದ್ದಾರಿಯನ್ನು ಕೇಂದ್ರ ಸರ್ಕಾರ ನಿರ್ಮಾಣ ಮಾಡಿದೆ. 
 

click me!