
ನವದೆಹಲಿ: ಈವರೆಗೆ ದೇಶದಲ್ಲಿ ಸಾಮಾನ್ಯಕ್ಕಿಂತ ಶೇ.5ರಷ್ಟುಅಧಿಕ ಮುಂಗಾರು ಮಳೆ ಸುರಿದಿದೆ. ಜೊತೆಗೆ ಮುಂದಿನ ಆಗಸ್ಟ್- ಸೆಪ್ಟೆಂಬರ್ ಅವಧಿಯಲ್ಲೂ ಸಾಮಾನ್ಯ ಮಳೆಯ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಶುಭ ಸುದ್ದಿ ನೀಡಿದೆ. ಈ ಬಾರಿ ಮುಂಗಾರು ವಿಳಂಬವಾಗಿ ದೇಶವನ್ನು ಪ್ರವೇಶಿಸಿತ್ತು. ಆದರೂ ಜೂನ್‌ನಲ್ಲಿ ಶೇ.9ರಷ್ಟುಮಳೆ ಕೊರತೆ ಕಾಣಿಸಿಕೊಂಡಿತ್ತು. ಆದರೆ ಜುಲೈನಲ್ಲಿ ಶೇ.13ರಷ್ಟುಹೆಚ್ಚು ಮಳೆ ಸುರಿದಿದೆ. ಹೀಗಾಗಿ ಜೂನ್- ಜುಲೈ ಅವಧಿಯಲ್ಲಿ ಸುರಿಯಬೇಕಿದ್ದ 445.8 ಮಿ.ಮೀ ಬದಲಿಗೆ 467 ಮಿ.ಮೀನಷ್ಟು ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಜುಲೈ ತಿಂಗಳಲ್ಲಿ ಒಟ್ಟಾರೆ ಶೇ.13ರಷ್ಟುಮಳೆ ದಾಖಲಾಗಿದ್ದರೆ, ಪೂರ್ವ ಮತ್ತು ಈಶಾನ್ಯ ರಾಜ್ಯಗಳಲ್ಲಿ ಅತ್ಯಂತ ಕಡಿಮೆ ಮಳೆ ದಾಖಲಾಗಿದೆ. ಇದು 1901ರ ಬಳಿಕದ ಅತಿ ಕನಿಷ್ಠ ಪ್ರಮಾಣ. ಇನ್ನು ವಾಯುವ್ಯ ಭಾರತದಲ್ಲಿ 258.6 ಮಿ.ಮೀ ಮಳೆಯೊಂದಿಗೆ 2001 ರಿಂದ ಈವರೆಗೆ ಈ ಬಾರಿ ಅಧಿಕ ಮಳೆ ಸುರಿದಿದೆ. ಸದ್ಯ ದೇಶಾದ್ಯಂತ ಹಲವಡೆ ಮಳೆ ಭಾರೀ ಪ್ರಮಾಣದಲ್ಲಿ ಸುರಿಯುತ್ತಿದ್ದು ‘ಜುಲೈನ ಅಧಿಕ ಮಳೆ ಬಳಿಕ ಮಾನ್ಸೂನ್ ಋುತುವಿನ ದ್ವಿತಿಯಾರ್ಧವಾದ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಮಳೆಯು ಸಾಮಾನ್ಯ ಪ್ರಮಾಣದಲ್ಲಿ ಸುರಿಯಲಿದೆ’ಎಂದು ಇಲಾಖೆ ತಿಳಿಸಿದೆ.
ಆದರೆ ಮಧ್ಯ ಭಾರತದ ಪೂರ್ವ ಭಾಗ, ಈಶಾನ್ಯ ಪ್ರದೇಶಗಳು ಸೇರಿದಂತೆ ಹಿಮಾಲಯದ ಉದ್ದಕ್ಕೂ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಮಧ್ಯ ಭಾರತದ ಪಶ್ಚಿಮ ಭಾಗ, ವಾಯುವ್ಯ ಪ್ರದೇಶಗಳು ಮತ್ತು ಪೆನಿನ್ಸುಲಾರ್ ಭಾರತದ ಭಾಗಗಳಲ್ಲಿ ವಾಡಿಕೆಯಂತೆ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಇಲಾಖೆಯ ಮಹಾ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ