8 ವರ್ಷದ ಬಾಲಕಿಗೆ ಡ್ರಗ್ಸ್‌ ನೀಡಿ, ಆಕೆಯ ಬ್ಯಾಗ್‌ನಲ್ಲಿಯೇ ಮಾದಕ ವಸ್ತು ಸಾಗಣೆ, ಆರೋಪಿಯ ಬಿಡುಗಡೆ!

Published : Dec 06, 2022, 03:12 PM ISTUpdated : Dec 06, 2022, 04:48 PM IST
8 ವರ್ಷದ ಬಾಲಕಿಗೆ ಡ್ರಗ್ಸ್‌ ನೀಡಿ, ಆಕೆಯ ಬ್ಯಾಗ್‌ನಲ್ಲಿಯೇ ಮಾದಕ ವಸ್ತು ಸಾಗಣೆ, ಆರೋಪಿಯ ಬಿಡುಗಡೆ!

ಸಾರಾಂಶ

ಪೊಲೀಸರು ಅಜಿಯೂರು ಮೂಲದ ಅದ್ನಾನ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದು, ತಕ್ಷಣ ಠಾಣೆಗೆ ಕರೆಸಿದ್ದಾರೆ. ಆದರೆ ಬಾಲಕನ ಹೇಳಿಕೆಯಲ್ಲಿ ಅಸಮಂಜಸತೆ ಇದ್ದ ಕಾರಣ ಪೀನ್ನಿಡು ಪೊಲೀಸರು ಆತನನ್ನು ಬಿಡುಗಡೆ ಮಾಡಿದ್ದಾರೆ.

ಕೋಯಿಕ್ಕೋಡ್‌ (ಡಿ.6): ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಶಾಲಾ ಮಕ್ಕಳ ಬ್ಯಾಗ್‌ನಲ್ಲಿ ಕಾಂಡೋಮ್‌, ಗರ್ಭನಿರೋಧಕ ಮಾತ್ರೆಗಳ, ಡ್ರಗ್ಸ್‌ಗಳನ್ನು ಸಿಕ್ಕಿದ್ದು ಪತ್ತೆಯಾಗಿತ್ತು. ರಾಜ್ಯದಲ್ಲಿ ಮಾತ್ರವಲ್ಲ, ಕೇರಳದಲ್ಲೂ ಕೂಡ ಚಿಕ್ಕ ಮಕ್ಕಳೂ ಕೂಡ ಡ್ರಗ್ಸ್‌ಗೆ ಬಲಿಯಾಗುತ್ತಿದ್ದಾರೆ. ಈ ಕುರಿತಾಗಿ ಏಷ್ಯಾನೆಟ್‌ ನ್ಯೂಸ್‌ ಎಕ್ಸ್‌ಕ್ಲೂಸಿವ್‌ ವರದಿ ಮಾಡಿದ್ದು, 8ನೇ ತರಗತಿಯ ವಿದ್ಯಾರ್ಥಿನಿಗೆ ಡ್ರಗ್ಸ್‌ ನೀಡಿದ್ದಲ್ಲದೆ, ಆಕೆಯ ಶಾಲಾ ಬ್ಯಾಗ್‌ನಲ್ಲಿಯೇ ಡ್ರಗ್ಸ್ಅನ್ನು ಸಾಗಿಸುವ ಮಾಫಿಯಾ ಕೇರಳದ ಕೋಯಿಕ್ಕೋಡ್‌ನ ಅಜಿಯೂರಿನಲ್ಲಿ ನಡೆದಿದೆ. 13 ವರ್ಷದ ಬಾಲಕಿ ಶಾಲಾ ಬ್ಯಾಗ್‌ಗಳಲ್ಲಿ ಡ್ರಗ್ಸ್ ಅನ್ನು ತಲಶ್ಶೇರಿ ಸೇರಿದಂತೆ ವಿವಿಧ ಕೇಂದ್ರಗಳಿಗೆ ತಲುಪಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ. ಪೋಷಕರ ದೂರಿನ ಮೇರೆಗೆ ಚೊಂಪಾಲಾ ಪೊಲೀಸರು ಪೋಕ್ಸೊ ಪ್ರಕರಣ ದಾಖಲಿಸಿಕೊಂಡಿದ್ದು, ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಯನ್ನು ಬಿಡುಗಡೆ ಮಾಡಿದ್ದಾರೆ. ಗೆಳೆಯರು ಮಕ್ಕಳಿಗೆ ಕೊಡುವ ಬಿಸ್ಕೆಟ್ ಕೂಡ ವ್ಯಸನದ ಜಗತ್ತಿಗೆ ದಾರಿಯಾಗಬಹುದನ್ನು ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಅದಕ್ಕೆ ಅಜಿಯೂರಿನ ವಡಕರ ಪ್ರದೇಶ 13 ವರ್ಷದ ಬಾಲಕಿಯ ಅನುಭವವೇ ಸಾಕ್ಷಿಯಾಗಿದೆ. ಸರ್ಕಾರ ಮತ್ತು ಸ್ವಯಂಸೇವಾ ಸಂಸ್ಥೆಗಳು ಡ್ರಗ್ಸ್ ವಿರುದ್ಧ ಹೋರಾಟ ನಡೆಸುತ್ತಿರುವಾಗ ಚಿಕ್ಕ ಮಕ್ಕಳೂ ಡ್ರಗ್ಸ್ ಮಾಫಿಯಾದ ಬಲೆಗೆ ದಂಡಿಯಾಗಿ ಬೀಳುತ್ತಿದ್ದಾರೆ.

ವಡಕರದ ಅಜಿಯೂರಿನ ಪ್ರಮುಖ ಶಾಲೆಯೊಂದರಲ್ಲಿ 8ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯಿಂದ, ಶಾಲಾ ವಿದ್ಯಾರ್ಥಿಯೊಬ್ಬ ಡ್ರಗ್ಸ್‌ ದಾಸನಾಗಿದ್ದ. ಮಿಥುಮ್‌ ಇಡುಕ್ಕಿ, ಶಾಲೆಯ ಎನ್‌ಸಿಸಿ ಹಾಗೂ ಕಬಡ್ಡಿ ತಂಡದ ಸಕ್ರಿಯ ಆಟಗಾರನಾಗಿದ್ದ.  ಆದರೆ ಕಳೆದ ಕೆಲವು ತಿಂಗಳುಗಳಲ್ಲಿ, ಈತನ ಜೀವನವು ದೊಡ್ಡ ಮಟ್ಟದಲ್ಲಿ ಬದಲಾವಣೆ ಆಗಿದೆ.  ತನಗಾದ ಅನುಭವವನ್ನು ಈಗ ಹೇಳಿಕೊಂಡಿದ್ದು,  ಕಬಡ್ಡಿ ಆಡುವಾಗ ನಿರಂಜನ ಎಂಬ ಬಾಲಕಿ ನೀಡಿದ ಬಿಸ್ಕತ್ ಮೂಲಕ ನಶೆಯ ಬಲೆಗೆ ಬಿದ್ದಿದ್ದಾನೆ. 

ಬಿಸ್ಕೆಟ್‌ ತಿಂದ ಬಳಿಕ ನಶೆಯ ಅನುಭವವಾಗುತ್ತದೆ. ಬಳಿಕ ನಿಮ್ಮನ್ನು ಅಜ್ಞಾತ ಸ್ಥಳವೊಂದಕ್ಕೆ ಅವರು ಕರೆದುಕೊಂಡು ಹೋಗುತ್ತಾರೆ. ತಮ್ಮ ತಮ್ಮ ಕೈಗಳನ್ನು ಹಿಡಿದುಕೊಂಡು ಇಂಜೆಕ್ಷನ್‌ ಹಾಕಿಕೊಳ್ಳುತ್ತಾರೆ. ಇನ್ನು ಆ ಬಿಸ್ಕೆಟ್‌ ತಿಂದ ಬಳಿಕ ಮತ್ತೊಮ್ಮೆ ಅದನ್ನು ತಿನ್ನಬೇಕು ಅನಿಸುತ್ತದೆ. ಆದರೆ, ಇಂಜೆಕ್ಷನ್‌ ಹಾಕಿಕೊಂಡ ಬಳಿಕ ನಿಮಗೆ ಏನೂ ನೆನಪು ಇರೋದಿಲ್ಲ ಎಂದು ಹೇಳಿದ್ದಾನೆ. ಮೊದಲಿಗೆ ಬಿಸ್ಕೆಟ್‌ನಿಂದ ಆರಂಭವಾದ ಬಳಿಕ ನಂತರ ಪೌಡರ್‌ ಮಾದರಿಯಲ್ಲಿರುವ ಡ್ರಗ್‌ಅನ್ನು ಮೂಗಿಗೆ ಹಾಕಿಕೊಳ್ಳುತ್ತಾರೆ. 

ಅದ್ನಾನ್‌ ಸೂಚನೆಯ ಮೇರೆಗೆ ಅವರು  ಡ್ರಗ್ಸ್‌ಅನ್ನು ಬ್ಯಾಗ್‌ಗಳಲ್ಲಿ ಇಟ್ಟು ತಲಶ್ಶೇರಿಗೆ ತೆರಳಿದ್ದರು. ಈ ವೇಳೆ ಶಾಲೆಯಲ್ಲಿ ಡ್ರಗ್ಸ್ ಹೊಂದಿರುವ ವ್ಯಕ್ತಿಗಳು ಯಾರು ಎನ್ನುವುದು ಗುರುತಾಗಲು ಅವರ ಕೈಗಳ ಮೇಲೆ ಅದ್ನಾನ್‌ ಎಕ್ಸ್‌ ಎನ್ನುವ ಚಿಹ್ನೆ ಹಾಕುತ್ತಿದ್ದ. ಇನ್ನೂ ಕೆಲವರ ಕೈಗಳ ಮೇಲೆ ಇಮೋಜಿಗಳು ಇರುತ್ತಿದ್ದವು ಎಂದು ಹೇಳಿದ್ದಾರೆ. ನಶೆಯ ಬಲೆಗೆ ಬಿದ್ದ ಮಗುವಿನ ವರ್ತನೆಯಲ್ಲಿ ಕೆಲವು ಅಸಹಜ ಬದಲಾವಣೆಗಳನ್ನು ಕಂಡ ಶಾಲಾ ಅಧಿಕಾರಿಗಳು ಪೋಷಕರಿಗೆ ಮಾಹಿತಿಯನ್ನೂ ನೀಡಿದ್ದಾರೆ.

ಮದ್ಯಪಾನ, ಡ್ರಗ್ಸ್, ಗನ್‌ಗಳನ್ನು ವೈಭವೀಕರಿಸುವ ಹಾಡು ಹಾಕಬೇಡಿ: ಎಫ್‌ಎಂ ಚಾನೆಲ್‌ಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ

ಶಾಲೆಗೆ ಹೋಗಿ ಬಂದು ಬಾತ್‌ರೂಮ್‌ಗೆ ಹೋಗಿದ್ದ ನನ್ನ ಮಗಳು, ಹೊರಗಡೆ ಬಂದಾಗ ಸಂಪೂರ್ಣವಾಗಿ ಬೆವರಿದ್ದಳು. ಆಕೆಯ ಮುಖದಲ್ಲಿ ಬದಲಾವಣೆ ಆಗಿತ್ತು. ಸುಸ್ತಾದವಳಂತೆ ಕಂಡಿದ್ದವು' ಎಂದು ಪೋಷಕರೊಬ್ಬರು ನೆನಪಿಸಿಕೊಂಡಿದ್ದಾರೆ. ಬಳಿಕ ಮನೆಯವರು ಚೋಂಪಾಲಾ ಪೊಲೀಸರಿಗೆ ಇದರ ಮಾಹಿತಿ ನೀಡಿದ್ದಾರೆ. ಯುವತಿ ಹೇಳಿಕೆ ಪಡೆಯಲು ಸಮನ್ಸ್‌ ನೀಡಲಾಗಿದೆ ಎಂಬ ಮಾಹಿತಿ ತಿಳಿದ ಬಳಿಕ ಡ್ರಗ್ಸ್‌ ಮಾಫಿಯಾ  ನಡೆಸುತ್ತಿದ್ದ ವ್ಯಕ್ತಿ ಠಾಣೆಗೆ ಬಂದಿದ್ದಾರೆ.  ಕೊನೆಗೆ ಪೊಲೀಸರು ಅಜಿಯೂರಿನ ಅದ್ನಾನ್ ಎಂಬಾತನ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿ ತಕ್ಷಣ ಠಾಣೆಗೆ ಕರೆ ತಂದಿದ್ದಾರೆ. ಆದರೆ ಬಾಲಕನ ಹೇಳಿಕೆಯಲ್ಲಿ ಅಸಮಂಜಸತೆ ಇದ್ದ ಕಾರಣ ಪೀನ್ನಿಡು ಪೊಲೀಸರು ಆತನನ್ನು ಅಲ್ಲಿಂದ ಕಳುಹಿಸಿದ್ದಾರೆ.

ಶಾಲಾ ಮಕ್ಕಳ ಬ್ಯಾಗ್‌ನಲ್ಲಿ ಕಾಂಡೋಮ್‌, ಗರ್ಭ ನಿರೋಧಕ ಮಾತ್ರೆ ಪತ್ತೆ !


ಈ ಪ್ರಕರಣದಲ್ಲಿ 13 ವರ್ಷದ ಬಾಲಕಿ ನೀಡಿದ ಎಲ್ಲಾ ಮಾಹಿತಿಯ ಹೊರತಾಗಿಯೂ, ಶಂಕಿತ ಆರೋಪಿ ಪೊಲೀಸರಿಂದ ಜಾಮೀನು ಪಡೆದು ಹೊರಬಂದಿದ್ದಾರೆ. ಶಾಲೆಯಲ್ಲಿ ನನ್ನಂತೆ ಹಲವು ಮಕ್ಕಳಿಗೆ ಡ್ರನ್ಸ್ ನೀಡಲಾಗುತ್ತಿದೆ. ಅವರಿಗೂ ಇದೇ ಅನುಭವವಾಗಿದೆ ಎಂದಿದ್ದಾಳೆ. ಮಕ್ಕಳ ಹಿತದೃಷ್ಟಿಯ ಕಾರಣಕ್ಕಾಗಿ ಶಾಲೆಯ ಅಧಿಕಾರಿಗಳು ಪೊಲೀಸರಿಗೆ ಇದರ ಮಾಹಿತಿ ನೀಡಿರಲಿಲ್ಲ ಎನ್ನುವುದೂ ಬೆಳಕಿಗೆ ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​
ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana