ಕರ್ನಾಟಕ ಸೇರಿ 6 ರಾಜ್ಯಗಳಲ್ಲಿ ಕೊರೋನಾ ಮತ್ತಷ್ಟು ಹೆಚ್ಚಳ| ಒಟ್ಟು ಕೇಸಿನಲ್ಲಿ ಶೇ.86ರಷ್ಟುಈ 6 ರಾಜ್ಯಗಳದ್ದು| ಭಾನುವಾರದ ಒಟ್ಟು ಕೇಸಲ್ಲಿ ಮಹಾ ಪಾಲು ಶೇ.60
ನವದೆಹಲಿ(ಮಾ.09): ದೇಶದಲ್ಲಿ ಕೊರೋನಾ ಸೋಂಕು ಮತ್ತಷ್ಟುವ್ಯಾಪಕವಾಗಿದ್ದು, ಸೋಮವಾರ ಬೆಳಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ 18599 ಹೊಸ ಪ್ರಕರಣಗಳು ದಾಖಲಾಗಿದ್ದು, 97 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸತತ 3ನೇ ದಿನ 18000ಕ್ಕಿಂತ ಹೆಚ್ಚು ಹೊಸ ಕೇಸು ದಾಖಲಾದಂತೆ ಆಗಿದೆ.
ಇನ್ನೊಂದು ಆತಂಕದ ವಿಷಯವೆಂದರೆ, 18599 ಹೊಸ ಪ್ರಕರಣಗಳ ಪೈಕಿ ಕರ್ನಾಟಕ ಸೇರಿದಂತೆ 6 ರಾಜ್ಯಗಳ ಪಾಲೇ ಶೇ.86.25ರಷ್ಟಿದೆ. ಇನ್ನು 11141 ಕೇಸುಗಳೊಂದಿಗೆ ಒಟ್ಟು ಕೇಸಿನಲ್ಲಿ ಮಹಾರಾಷ್ಟ್ರ ಶೇ.60ರಷ್ಟುಪಾಲು ಹೊಂದಿದೆ.
undefined
ಭಾನುವಾರ ಮಹಾರಾಷ್ಟ್ರದಲ್ಲಿ 11141 (ಒಟ್ಟು ಕೇಸಲ್ಲಿ ಪಾಲು ಶೇ.59.90), ಕೇರಳದಲ್ಲಿ 2100 (ಒಟ್ಟು ಕೇಸಲ್ಲಿ ಪಾಲು ಶೇ.11.29), ಪಂಜಾಬ್‌ನಲ್ಲಿ 1043 (ಒಟ್ಟು ಕೇಸಲ್ಲಿ ಪಾಲು ಶೇ.5.60), ಕರ್ನಾಟಕದಲ್ಲಿ 622 (ಒಟ್ಟು ಕೇಸಲ್ಲಿ ಪಾಲು ಶೇ.3.3), ಗುಜರಾತ್‌ನಲ್ಲಿ 575 (ಒಟ್ಟು ಕೇಸಲ್ಲಿ ಪಾಲು ಶೇ.3.09) ಮತ್ತು ತಮಿಳುನಾಡಲ್ಲಿ 567 (ಒಟ್ಟು ಕೇಸಲ್ಲಿ ಪಾಲು ಶೇ.3.04) ಕೇಸು ದಾಖಲಾಗಿದೆ.
1.12 ಕೋಟಿ:
18599 ಹೊಸ ಸೋಂಕಿತರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1.12 ಕೋಟಿಗೆ ತಲುಪಿದೆ. ಸಕ್ರಿಯ ಸೋಂಕಿತರ ಸಂಖ್ಯೆ 1.88 ಲಕ್ಷ ತಲುಪಿದೆ. ಇನ್ನು ಸಾವಿನ ಸಂಖ್ಯೆ 1.57 ಲಕ್ಷ ಮುಟ್ಟಿದೆ. ಇನ್ನು ಕಳೆದ 24 ಗಂಟೆಗಳಲ್ಲಿ ದೇಶದ 18 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಯಾವುದೇ ಸಾವು ದಾಖಲಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.