ಹಣ ಕೊಡಲಾಗದ್ದಕ್ಕೆ 80ರ ವೃದ್ಧನ ಕಟ್ಟಿಹಾಕಿದ ಆಸ್ಪತ್ರೆ, ಕಠಿಣ ಕ್ರಮಕ್ಕೆ ಸಿಎಂ ಸೂಚನೆ

By Suvarna NewsFirst Published Jun 7, 2020, 9:40 PM IST
Highlights

ಹೊಟ್ಟೆ ನೋವಿಗೆ ಚಿಕಿತ್ಸೆ ಪಡೆದುಕೊಂಡಿದ್ದ ವೃದ್ಧ/ ಹಣ ನೀಡಲು ಸಾಧ್ಯವಾಗದ್ದಕ್ಕೆ ಮಂಚಕ್ಕೆ ಕಟ್ಟಿಹಾಕಿದ ಆಸ್ಪತ್ರೆ ಸಿಬ್ಬಂದಿ/ ಗಾಯ ಮಾಡಿಕೊಳ್ಳುತ್ತಾರೆ ಎಂದು ಹೀಗೆ ಮಾಕಡಿದ್ದೇವೆ ಎಂಬ ಸಬೂಬು

ಭೋಪಾಲ್ (ಜೂ. 07) ಚಿಕಿತ್ಸೆ ಪಡೆದುಕೊಂಡ  80 ವರ್ಷದ ವೃದ್ಧ ಹಣ  ನೀಡಲು ಸಾಧ್ಯವಾಗದ್ದಕ್ಕೆ ಆತನನ್ನು ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಬೆಡ್ ಮೇಲೆ ಕಟ್ಟಿ ಹಾಕಿ ಹಿಂಸೆ ನೀಡಿದ್ದಾರೆ. ಮಧ್ಯಪ್ರದೇಶದ  ಶಾಜಾಪುರ್‌ನಲ್ಲಿ ಘಟನೆ ನಡೆದಿದೆ.

ವೃದ್ಧನಿಗೆ ಸ್ನಾಯು ಸೆಳೆತ ಉಂಟಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಗಾಯಮಾಡಿಕೊಳ್ಳಬಾರದು ಎನ್ನುವ ಉದ್ದೇಶದಿಂದ ಕಟ್ಟಿ ಹಾಕಿದ್ದೇವೆ ಎಂದು ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿ ಪ್ರಕರಣ ಮುಚ್ಚಿಹಾಕಲು ಸಬೂಬು ನೀಡಿದೆ.

ಶ್ವಾನವನ್ನು ಬೈಕ್ ಗೆ ಕಟ್ಟಿ ಎಳೆದ ದುರುಳರು 

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಗಮನಕ್ಕೂ  ಘಟನೆ ಬಂದಿದ್ದು, ಆಸ್ಪತ್ರೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುವ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಈ ಕುರಿತು ತನಿಖೆ ನಡೆಸಲು ಸೂಚನೆ ನೀಡಿದ್ದಾರೆ.

ಆಸ್ಪತ್ರೆಗೆ ದಾಖಲಾಗುವಾಗ 5,000 ರೂ. ಪಾವತಿಸಿದ್ದೇವು. ಆದರೆ ಚಿಕಿತ್ಸೆ ಫಲಕಾರಿಯಾಗಲು ಬಹಳ ದಿನ ಬೇಕಾಯಿತು. ಹೀಗಾಗಿ ನಾವು ಇನ್ನೂ 11 ಸಾವಿರ ರೂ. ಪಾವತಿಸಬೇಕಾದ ಪರಿಸ್ಥಿತಿ ಎದುರಾಗಿತ್ತು. ನಮ್ಮಿಂದ ಹಣ ಸಿಗುವುದಿಲ್ಲ  ಎಂದಿದ್ದಕ್ಕೆ ಇಂಥ ಕೆಲಸ ಮಾಡಿದ್ದಾರೆ ಎಂದು ವೃದ್ಧನ ಕುಟುಂಬದವರು ಆರೋಪಿಸಿದ್ದಾರೆ.

ವೃದ್ಧ ಹೊಟ್ಟೆ ನೋವಿನ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದ. ಕೊರೋನಾದಂತಹ ಮಹಾಮಾರಿ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ಮಾನವೀಯತೆಗೆ ಹೆಚ್ಚಿನ ಬೆಲೆ ನೀಡಬೇಕು ಎಂದು ಕೇಂದ್ರ ಸರ್ಕಾರ ಕೇಳಿಕೊಂಡಿದ್ದರೂ ಇಂಥ ಘಟನೆಗಳು ಅಲ್ಲಿಲ್ಲಿ ವರದಿಯಾಗುತ್ತಿವೆ.

 

click me!