ಡೆಲಿವರಿ ಬಾಯ್‌ ಮುಸ್ಲಿಂ ಎಂಬ ಕಾರಣಕ್ಕೆ ವಸ್ತು ಬೇಡ ಎಂದವ ಆರೆಸ್ಟ್..!

ಮುಸ್ಲಿಂ ಎಂಬ ಕಾರಣಕ್ಕೆ ಡೆಲಿವರಿ ಬಾಯ್‌ನಿಂದ ಖರೀದಿಸಿದ ವಸ್ತುವನ್ನು ನಿರಾಕರಿಸಿದ ವ್ಯಕ್ತಿ ಕಂಬಿ ಎಣಿಸಿದ ಘಟನೆ ನಡೆದಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Mumbai Man Arrested for refusing to accept delivery from Muslim Boy

ಮುಂಬೈ(ಏ.24): ಇಡೀ ದೇಶವೇ ಕೊರೋನಾ ವೈರಸ್‌ ವಿರುದ್ಧ ಒಗ್ಗಟ್ಟಿನಿಂದ ಹೋರಾಡುತ್ತಿರುವ ಸಂದರ್ಭದಲ್ಲಿ, ಅಗತ್ಯವಸ್ತುಗಳನ್ನು ತಂದ ಡೆಲಿವರಿ ಏಜೆಂಟ್‌ ಮುಸ್ಲಿಂ ಎಂಬ ಕಾರಣಕ್ಕಾಗಿ ವಸ್ತುಗಳನ್ನೇ ನಿರಾಕರಿಸಿದ ಅಮಾನವೀಯ ಘಟನೆ ಮುಂಬೈನಲ್ಲಿ ನಡೆದಿದೆ.  ಘಟನೆ ಸಂಬಂಧ ಡೆಲಿವರಿ ಏಜೆಂಟ್‌ ದೂರು ಆಧರಿಸಿ ಚತುರ್ವೇದಿ (51) ಎಂಬವರನ್ನು ಪೊಲೀಸರು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಆನ್‌ಲೈನ್‌ನಲ್ಲಿ ದಿನಸಿ ವಸ್ತುಗಳನ್ನು ಆರ್ಡರ್‌ ಮಾಡಲಾಗಿತ್ತು.

ಆದರೆ ಡೆಲಿವರಿ ಏಜೆಂಟ್‌ ಅಲ್ಪಸಂಖ್ಯಾತ ಸಮುದಾಯದಕ್ಕೆ ಸೇರಿದವರು ಎಂದು ಅರಿತ ಬಳಿಕ ಆರ್ಡರ್‌ ಮಾಡಿದ್ದ ವ್ಯಕ್ತಿ ವಸ್ತುಗಳನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಮಾಸ್ಕ್‌, ಗ್ಲೌಸ್‌ ಧರಿಸಿದ್ದರೂ ಮುಸ್ಲಿಂ ಎಂಬ ಏಕೈಕ ಕಾರಣಕ್ಕೆ ವಸ್ತುಗಳನ್ನು ಪಡೆಯಲು ನಿರಾಕರಿಸಿದ್ದಾರೆ ಎಂದು ಡೆಲಿವರಿ ಏಜೆಂಟ್‌ ಬರ್ಕತ್‌ ಉಸ್ಮಾನ್‌ ಪಟೇಲ್‌ ದೂರಿದ್ದಾರೆ.

ಮೋದಿ ಜೊತೆ ವಿಡಿಯೋ ಕಾನ್ಫರೆನ್ಸ್‌ಗ ಗೌರಿ ಬಿದನೂರು ವಾಟದಹಳ್ಳಿ ಗ್ರಾಪಂ ಅಧ್ಯಕ್ಷ ಆಯ್ಕೆ

ಇನ್ನು ಕರ್ನಾಟದಲ್ಲೂ ಅನ್ಯ ಕೋಮಿನವರೊಂದಿಗೆ ವ್ಯವಹಾರ ನಡೆಸುವುದಿಲ್ಲ ಎಂಬರ್ಥದ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಎಗ್ಗಿಲ್ಲದೇ ಹರಿದಾಡುತ್ತಿವೆ. ಹೀಗಾಗಿ ಇನ್ನು ಕೆಲವೇ ದಿನಗಳಲ್ಲಿ ಅಂತವರ ಮೇಲೂ ಪೊಲೀಸರು ಕ್ರಮಕೈಗೊಂಡರೂ ಅಚ್ಚರಿಪಡಬೇಕಿಲ್ಲ. 

ಲಾಕ್‌ಡೌನ್‌ ಉಲ್ಲಂಘಿಸಿ ಕ್ರಿಕೆಟ್‌ ಪಂದ್ಯ ನಡೆಸಿದ ಬಿಜೆಪಿಗನ ಮೇಲೆ ಕೇಸ್‌

ಲಖನೌ: ಕೊರೋನಾ ವೈರಸ್‌ ತಡೆಯುವ ಸಲುವಾಗಿ ದೇಶಾದ್ಯಂತ ಲಾಕ್‌ಡೌನ್‌ಗೆ ಖುದ್ದು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದರೂ, ಅವರ ಆದೇಶವನ್ನು ಪಾಲನೆ ಮಾಡದೆ ಅವರದ್ದೇ ಪಕ್ಷದ ನಾಯಕರೊಬ್ಬರು ಉತ್ತರಪ್ರದೇಶದ ಬಾರಾಬಂಕಿಯಲ್ಲಿ ಕ್ರಿಕಟ್‌ ಪಂದ್ಯ ಆಯೋಜಿಸಿದ್ದಾರೆ.

ಈ ಕಾರಣ ಪಂದ್ಯ ಆಯೋಜಿಸಿದ ಬಿಜೆಪಿಗ ಸುಧೀರ್‌ ಸಿಂಗ್‌ ಹಾಗೂ ಇತರ 19 ಮಂದಿಯ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 20ಕ್ಕೂ ಹೆಚ್ಚು ಜನರನ್ನು ಸೇರಿಸಿ ಬಾರಾಬಂಕಿ ಜಿಲ್ಲೆಯ ಪಾನಾಪುರದಲ್ಲಿ ಸುಧೀರ್‌ ಕ್ರಿಕೆಟ್‌ ಪಂದ್ಯ ನಡೆಸುತ್ತಿದ್ದರು. ಈ ಬಗ್ಗೆ ದೂರು ಬಂದ ಕೂಡಲೇ ಪೊಲೀಸರು ಅಲ್ಲಿಗೆ ತೆರಳಿ ಪಂದ್ಯ ನಿಲ್ಲಿಸಿ ಕೇಸು ದಾಖಲಿಸಿದ್ದಾರೆ.

Latest Videos
Follow Us:
Download App:
  • android
  • ios