ಹೈಕೋರ್ಟ್‌ನ ಶೇ.75 ರಷ್ಟು ಹುದ್ದೆ ಮೇಲ್ವರ್ಗದ ಪಾಲು : 5 ವರ್ಷದಲ್ಲಿ ಕೇಂದ್ರದ ಕೋರ್ಟ್‌ ವೆಚ್ಚ ಎಷ್ಟು ಕೋಟಿ

Published : Jul 23, 2023, 12:41 PM IST
ಹೈಕೋರ್ಟ್‌ನ ಶೇ.75 ರಷ್ಟು ಹುದ್ದೆ ಮೇಲ್ವರ್ಗದ ಪಾಲು : 5 ವರ್ಷದಲ್ಲಿ ಕೇಂದ್ರದ ಕೋರ್ಟ್‌ ವೆಚ್ಚ ಎಷ್ಟು ಕೋಟಿ

ಸಾರಾಂಶ

ಕಳೆದ 5 ವರ್ಷಗಳಲ್ಲಿ ತಾನು ಪಕ್ಷಗಾರನಾಗಿರುವ ವಿವಿಧ ಪ್ರಕರಣ ಕಾನೂನು ಹೋರಾಟಕ್ಕೆ 272 ಕೋಟಿ ರು.ವೆಚ್ಚ ಮಾಡಿರುವುದಾಗಿ ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ. 

ನವದೆಹಲಿ: ಕಳೆದ 5 ವರ್ಷಗಳಲ್ಲಿ ತಾನು ಪಕ್ಷಗಾರನಾಗಿರುವ ವಿವಿಧ ಪ್ರಕರಣ ಕಾನೂನು ಹೋರಾಟಕ್ಕೆ 272 ಕೋಟಿ ರು.ವೆಚ್ಚ ಮಾಡಿರುವುದಾಗಿ ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ. ಝಾಲಾವರ್‌-ಬರನ್‌ ಕ್ಷೇತ್ರದ ಸದಸ್ಯರ ದುಶ್ಯಂತ್‌ ಸಿಂಗ್‌ ಅವರು ಕೇಳಿದ ಪ್ರಶ್ನೆಗೆ ಮಾಹಿತಿ ನೀಡಿರುವ ಕೇಂದ್ರ ಸರ್ಕಾರ, ‘ಕೇಂದ್ರ ಸರ್ಕಾರವೂ ಪಕ್ಷಗಾರನಾಗಿರುವ 6.36 ಲಕ್ಷ ಕೇಸುಗಳ ವಿವಿಧ ರಾಜ್ಯಗಳಲ್ಲಿ ವಿಚಾರಣೆ ಹಂತದಲ್ಲಿದೆ. ಈ ಪೈಕಿ ಅತಿ ಹೆಚ್ಚು ಪ್ರಕರಣಗಳಲ್ಲಿ ಹಣಕಾಸು ಸಚಿವಾಲಯ (1.79 ಲಕ್ಷ) ಪಕ್ಷಗಾರನಾಗಿದೆ. ನಂತರದ ಸ್ಥಾನಗಳಲ್ಲಿ ಭಾರತೀಯ ರೈಲ್ವೆ (1.10 ಲಕ್ಷ), ರಕ್ಷಣಾ ಸಚಿವಾಲಯ (87543) ಇವೆ. ಒಟ್ಟಾರೆ ಪ್ರಕರಣಗಳ ಕಾನೂನು ಹೋರಾಟಕ್ಕಾಗಿ ಕಳೆದ 5 ವರ್ಷಗಳಲ್ಲಿ 272 ಕೋಟಿ ರು. ವೆಚ್ಚ ಮಾಡಿದೆ ಎಂದು ತಿಳಿಸಿದೆ.

ಹೈಕೋರ್ಟ್‌ಗೆ ಶೇ.75 ರಷ್ಟು ಮೇಲ್ವರ್ಗದವರ ನೇಮಕ

ನವದೆಹಲಿ: 2018ರ ಬಳಿಕ ದೇಶದ ಹೈಕೋರ್ಟ್‌ಗಳಿಗೆ ನೇಮಕವಾದ ಒಟ್ಟಾರೆ ನ್ಯಾಯಾಧೀಶರ ಪೈಕಿ ಶೇ.75ರಷ್ಟು ಜನರು ಮೇಲ್ವರ್ಗದವರು. ಶೇ.12ರಷ್ಟು ಜನರು ಇತರೆ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿದವರು ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.

ಎಂಐಎಂ ಪಕ್ಷದ ಸಂಸದ ಅಸಾಸುದ್ದೀನ್‌ ಒವೈಸಿ ಅವರ ಪ್ರಶ್ನೆಗೆ ಮಾಹಿತಿ ನೀಡಿರುವ ಕೇಂದ್ರ ಕಾನೂನು ಖಾತೆ ಸಚಿವ ಅರ್ಜುನ್‌ ರಾಮ್‌ ಮೇಘ್ವಾಲ್‌, 2018ರಿಂದ ಈ ವರ್ಷದ ಜು.17ರವರೆಗೆ 604 ಹೈಕೋರ್ಟ್ ಜಡ್ಜ್‌ಗಳ ನೇಮಕ ಮಾಡಲಾಗಿದೆ. ಈ ಪೈಕಿ 458 ಜನರು ಸಾಮಾನ್ಯ ವರ್ಗ, 18 ಎಸ್‌ಸಿ, 9 ಎಸ್ಟಿ, 72 ಒಬಿಸಿ, 34 ಜನರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇತರೆ 13 ನ್ಯಾಯಾಧೀಶರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.

Loksabha election 2024: ಎನ್‌ಡಿಎ ಜೊತೆ ಸೇರದೆ ಸ್ವತಂತ್ರವಾಗಿ ಸ್ಪರ್ಧಿಸಲು ದೇವೇಗೌಡ ಇಂಗಿತ

ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ಗಳಿಗೆ ಸಂವಿಧಾನದ 124, 217 ಮತ್ತು 224ನೇ ವಿಧಿ ಅನ್ವಯ ನ್ಯಾಯಾಧೀಶರ ನೇಮಕ ಮಾಡಲಾಗುತ್ತದೆ. ಈ ವಿಧಿಗಳು ನ್ಯಾಯಾಧೀಶರ ನೇಮಕದಲ್ಲಿ ಯಾವುದೇ ಮೀಸಲು ಕಲ್ಪಿಸುವುದಿಲ್ಲ. ಆದರೆ ನೂತನ ನ್ಯಾಯಾಧೀಶರ ನೇಮಕಕ್ಕೆ ಹೆಸರು ಶಿಫಾರಸು ಮಾಡುವಾಗ ಎಸ್‌ಸಿ/ ಎಸ್ಟಿ/ ಒಬಿಸಿ ಸಮುದಾಯಕ್ಕೆ ಸೂಕ್ತ ಆದ್ಯತೆ ನೀಡುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಹೈಕೋರ್ಟ್‌ಗಳಿಗೆ ಮನವಿ ಮಾಡುತ್ತಲೇ ಇದೆ ಎಂದು ತಿಳಿಸಿದ್ದಾರೆ.

ಲೋಕಸಭಾ ಚುನಾವಣೆ: ಬಿಜೆಪಿ ಜತೆ ಮೈತ್ರಿ ಏರ್ಪಟ್ಟರೆ 7 ಕ್ಷೇತ್ರಕ್ಕೆ ಜೆಡಿಎಸ್‌ ಬೇಡಿಕೆ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ