Omicron Case: 3 ಮಕ್ಕಳು ಸೇರಿ ಮತ್ತೆ 7 ಮಂದಿಗೆ ಓಮಿಕ್ರಾನ್, ಭಾರತದಲ್ಲಿ 12 ಪ್ರಕರಣ, ಕಠಿಣ ನಿಯಮಕ್ಕೆ ಚಿಂತನೆ!

By Suvarna NewsFirst Published Dec 5, 2021, 7:47 PM IST
Highlights
  • 5 ಓಮಿಕ್ರಾನ್ ಪ್ರಕರಣದಲ್ಲಿದ್ದ ಭಾರತದಲ್ಲೀಗ 12 ಓಮಿಕ್ರಾನ್ ಕೇಸ್
  • ಮಹಾರಾಷ್ಟ್ರದಲ್ಲಿ 7 ಹೊಸ ಓಮಿಕ್ರಾನ್ ಪ್ರಕರಣ ದೃಢ
  • ಪ್ರಕರಣ ಹರಡದಂತೆ ತಡೆಯಲು ಮತ್ತೆ ಕಠಿಣ ನಿಯಮ ಜಾರಿಗೆ ಚಿಂತನೆ

ನವದೆಹಲಿ(ಡಿ.05): ದೇಶದಲ್ಲಿ ಓಮಿಕ್ರಾನ್(Omicron Variant) ಆತಂಕ ಹೆಚ್ಚಾಗುತ್ತಿದೆ. ಮತ್ತೆ ಕಠಿಣ ನಿಯಮ ಜಾರಿಯಾಗು ಸಾಧ್ಯತೆಗಳು ಗೋಚರಿಸುತ್ತಿದೆ. ಕಾರಣ ಒಂದೊಂದೆ ಪ್ರಕರಣಗಳು ವರದಿಯಾಗುತ್ತಿದ್ದ ಭಾರತದಲ್ಲಿ(India) ಇದೀಗ ದಿಢೀರ್ 7 ಪ್ರಕರಣ ಖಚಿತವಾಗಿದೆ. ಇದರಿಂದ ದೇಶದಲ್ಲೀಗ ಓಮಿಕ್ರಾನ್ ವೈರಸ್ ಕೇಸ್ 12ಕ್ಕೆ ಏರಿಕೆಯಾಗಿದೆ. ಇದರಿಂದ ಆತಂಕವೂ ಹೆಚ್ಚಾಗಿದೆ.  ಈಗಲೇ ಕಠಿಣ ನಿಯಮಜಾರಿಗೆ ತಂದು ನಿಯಂತ್ರಣಕ್ಕೆ ಸರ್ಕಾರಗಳು ಮುಂದಾಗಿದೆ.

ಸದ್ಯ 7 ಪ್ರಕರಣಗಳು ಪತ್ತೆಯಾಗಿರುವುದು ಪುಣೆಯಲ್ಲಿ(Pune). ಪಿಂಪಿರಿ ಚಿಂಚಿವಾಡ್ ಕುಟುಂಬದ ಬಹುತೇಕ ಎಲ್ಲಾ ಸದಸ್ಯರಿಗೆ ಓಮಿಕ್ರಾನ್ ಅಂಟಿಕೊಂಡಿದೆ. ಇದರೊಂದಿಗೆ ಮತ್ತೊರ್ವ 47 ವರ್ಷದ ವ್ಯಕ್ತಿಗೂ ಓಮಿಕ್ರಾನ್ ಅಂಟಿಕೊಂಡಿದೆ. ಈ ಮೂಲಕ ಮಹಾರಾಷ್ಟ್ರದಲ್ಲಿ(Maharastra) ಓಮಿಕ್ರಾನ್ ಪ್ರಕರಣ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಇಷ್ಟೇ ಅಲ್ಲ ಗರಿಷ್ಠ ಓಮಿಕ್ರಾನ್ ಪ್ರಕರಣ ಪತ್ತೆಯಾದ ರಾಜ್ಯಗಳ ಪೈಕಿ ಕರ್ನಾಟಕವನ್ನು(Karnataka) ಹಿಂದಿಕ್ಕಿ ಮಹಾರಾಷ್ಟ್ರ ಮೊದಲ ಸ್ಥಾನಕ್ಕೇರಿದೆ.

Omicron Case:ಮುಂಬೈನಲ್ಲಿ ಓಮಿಕ್ರಾನ್ ಕೇಸ್, ಫೆಬ್ರವರಿಯಲ್ಲಿ 3ನೇ ಕೋವಿಡ್ ಅಲೆ ಎಚ್ಚರಿಕೆ!

44 ವರ್ಷದ ಮಹಿಳೆ ನೈಜಿರಿಯಾದ ಲಾವೋಸ್‌ನಿಂದ ಪುಣೆಯ ಪಿಂಪಿರಿ ಚಿಂಚಿವಾಡ್‌ಗೆ ಆಗಮಿಸಿದ್ದಾರೆ. ನವೆಂಬರ್ 24 ರಂದು ತನ್ನ ಇಬ್ಬರು ಪುತ್ರಿಯರೊಂದಿಗೆ ಆಗಮಿಸಿದ ಮಹಿಳೆಗೆ ಕುಟುಂಬ ಸದಸ್ಯರನ್ನು ಭೇಟಿಯಾಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ಇವರ ಮಾದಿರಿಯನ್ನು ಸಂಗ್ರಹಿಸಿ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ವರದಿ ಬಂದಿತ್ತು. ಮಹಿಳೆ, ಇಬ್ಬರು ಪುತ್ರಿಯರು, 45 ವರ್ಷದ ಸಹೋದರ, ಈ ಸಹೋದರನ್ನ ಎರಡೂವರೆ ವರ್ಷದ ಮಗ ಹಾಗೂ 7 ವರ್ಷದ ಮಗಳಿಗೂ ಓಮಿಕ್ರಾನ್ ತಗುಲಿರುವುದು ದೃಢವಾಗಿದೆ.  ಇನ್ನು ಫಿನ್‌ಲ್ಯಾಂಡ್‌ನಿಂದ ಪುಣೆಗೆ ಆಗಮಿಸಿದ 47 ವರ್ಷದ ವ್ಯಕ್ತಿಗೂ ಓಮಿಕ್ರಾನ್ ಅಂಟಿಕೊಂಡಿದೆ.

ಓಮಿಕ್ರಾನ್ ಪತ್ತೆಯಾದ 7 ಮಂದಿ ಪೈಕಿ ನಾಲ್ವರು ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಇನ್ನುಳಿದ ಮೂವರಿಗೆ 18 ವರ್ಷ ಪೂರ್ಣಗೊಂಡಿಲ್ಲ. ಇದೀಗ ಮಕ್ಕಳಲ್ಲಿ ಓಮಿಕ್ರಾನ್ ಕಾಣಿಸಿಕೊಂಡಿರುವುದು ಮಹಾರಾಷ್ಟ್ರ ಮಾತತ್ರವಲ್ಲ, ದೇಶದ ಚಿಂತೆ ಹೆಚ್ಚಿಸಿದೆ.

ಪುಣೆಯಲ್ಲಿ 7 ಪ್ರಕರಣ ವರದಿಯಾಗಿದ್ದರೆ, ಮುಂಬೈನಲ್ಲಿ ಒಂದು ಪ್ರಕರಣ ವರದಿಯಾಗಿದೆ. ಕೊರೋನಾದಲ್ಲಿ ನಿಯಂತ್ರಣ ಕಳೆದುಕೊಂಡಿದ್ದ ಮಹಾರಾಷ್ಟ್ರದಲ್ಲೀಗಕೂಡ ಆತಂಕ ಹೆಚ್ಚಿಸುತ್ತಿದೆ. ಓಮಿಕ್ರಾನ್ ಮೊದಲ ಪ್ರಕರಣ ವರದಿಯಾಗಿದ್ದು ಕರ್ನಾಟಕದಲ್ಲಿ. ಕರ್ನಾಟಕದಲ್ಲಿ ಒಂದೇ ಬಾರಿಗೆ 2 ಪ್ರಕರಣಗಳು ವರದಿಯಾಗಿತ್ತು. ಸೌತ್ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿದ ವ್ಯಕ್ತಿಗೆ ಓಮಿಕ್ರಾನ್ ಅಂಟಿಕೊಂಡಿತ್ತು. ಆದರೆ ಆ ವ್ಯಕ್ತಿ ನೆಗಟೀವ್ ರಿಪೋರ್ಟ್ ಇದ್ದ ಕಾರಣ ಓಮಿಕ್ರಾನ್ ವರದಿ ಬರುವ ಮೊದಲೇ ಬೆಂಗಳೂರಿನಿಂದ ದುಬೈಗೆ ಹಾರಿದ್ದಾರೆ. ಮತ್ತೊರ್ವ 46 ವರ್ಷದ ಸೋಂಕಿತ ವೈದ್ಯ ವಿದೇಶಕ್ಕೂ ಹೋಗಿಲ್ಲ, ವಿದೇಶಿಗರ ಸಂಪರ್ಕಕ್ಕೂ ಬಂದಿಲ್ಲ. ಆದರೂ ಓಮಿಕ್ರಾನ್ ಕಾಣಿಸಿಕೊಂಡಿದೆ.

ಭಾರತದಲ್ಲಿ 3ನೇ ಕೊರೋನಾ ಅಲೆ ಆತಂಕ, ಬಿಜೆಪಿ ಜೆಡಿಎಸ್ ಮೈತ್ರಿ ಮಾತು: ಡಿ.5ರ ಟಾಪ್ 10 ಸುದ್ದಿ!

ವೈದ್ಯರು ಆಸ್ಪತ್ರೆ ದಾಖಲಾದ ಬೆನ್ನಲ್ಲೇ ಇವರ ಸಂಪರ್ಕಿತರನ್ನು ಪರೀಕ್ಷೆ ಮಾಡಲಾಗಿದೆ. ಈ ವೇಳೆ ವೈದ್ಯರ ಪತ್ನಿಗೆ ಕೊರೋನಾ ಪಾಸಿಟೀವ್ ದೃಢಪಟ್ಟಿದೆ. ಇನ್ನು ಇವರ ಸಂಪರ್ಕದಲ್ಲಿದ್ದ ಐವರಿಗೆ ಕೊರೋನಾ ದೃಢಪಟ್ಟಿದೆ. ಹೀಗಾಗಿ ಇವರ ಮಾದರಿಯನ್ನು ಓಮಿಕ್ರಾನ್ ಪತ್ತೆಗಾಗಿ ಜಿನೋಮ್ ಸೀಕ್ವೆನ್ಸ್ ಪರೀಕ್ಷೆಗೆ ಕಳುಹಿಸಲಾಗಿದೆ.

ಕರ್ನಾಟಕದ ಬಳಿಕ ಗುಜರಾತ್‌ನ ಜಾಮಾಗರದಲ್ಲಿ ಓಮಿಕ್ರಾನ್ ಖಚಿತವಾಗಿತ್ತು. ಜಿಂಬಾಬ್ವೆಯಿಂದ ಜಾಮಾನಗರಕ್ಕೆ ಆಗಮಿಸಿದ್ದ ವ್ಯಕ್ತಿಗೆ ಓಮಿಕ್ರಾನ್ ಖಚಿತವಾಗಿತ್ತು. ಗುಜರಾತ್ ಬಳಿಕ ಮುಂಬೈ ಹಾಗೂ ದೆಹಲಿಯಲ್ಲಿ ಕ್ರಮವಾಗಿ ಓಮಿಕ್ರಾನ್ ವೈರಸ್ ಪತ್ತೆಯಾಗಿತ್ತು. ಇದೀಗ ಮತ್ತೆ ಮಹಾರಾಷ್ಟ್ರದಲ್ಲೇ 7 ಪ್ರಕರಣಗಳು ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ ನಿಯಮ ಮತ್ತಷ್ಟ ಕಠಿಣಗಳೊಳಿಸಲು ಸಭೆ ನಡೆಸಲಾಗಿದೆ. ದೇಶದಲ್ಲಿ ಓಮಿಕ್ರಾನ್ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಮತ್ತೆ ಹಳೆ ಕಠಿಣ ನಿಯಮ ಜಾರಿಯಾಗುವ ಸಾಧ್ಯತೆ ಗೋಚರಿಸುತ್ತಿದೆ.
 

click me!