ಬಲವಂತವಾಗಿ 68 ವಿದ್ಯಾರ್ಥಿನಿಯರ ಒಳಉಡುಪು ಬಿಚ್ಚಿಸಿದ ಕಾಲೇಜು

By Suvarna NewsFirst Published Feb 14, 2020, 8:37 PM IST
Highlights

ಋತುಸ್ರಾವ ಪರೀಕ್ಷಿಸಲು 68 ವಿದ್ಯಾರ್ಥಿನಿಯರ ಒಳಉಡುಪು  ತೆಗೆದ ಕಾಲೇಜು/ ಬಲವಂತವಾಗಿ ತೆಗೆಯಲು ಸೂಚನೆ/ ಗುಜರಾತಿನ ಘಟನೆಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ವಿರೋಧ

ರಾಜ್ ಕೋಟ್(ಫೆ. 14)   ಇದನ್ನು ಯಾವ ತೆರೆನಾದ ಸುದ್ದಿ ಎಂದು ಪರಿಗಣಿಸುತ್ತಿರೋ ನಿಮಗೆ ಬಿಟ್ಟಿದ್ದು. ಆದರೆ ಇಲ್ಲಿ ಹೆಣ್ಣು ಮಕ್ಕಳು ಶೋಷಣೆಗೆ ಒಳಗಾರಿರುವುದು ಸತ್ಯ.

ಋತುಸ್ರಾವ ಆಗಿಲ್ಲ ಎಂದು ಖಚಿತ ಮಾಡಲು 68 ವಿದ್ಯಾರ್ಥಿನಿಯರ ಒಳಉಡುಪು ತೆಗೆಯಲು ಹೇಳಲಾಗಿದೆ.  ಗುಜರಾತಿನ ಭೂಜ್ ನಲ್ಲಿ ಶಿಕ್ಷಕರು ಬಲವಂತವಾಗಿ ಒಳುಡುಪು ತೆಗೆಸಿದ್ದಾರೆ.

ಕೆಲ ವಿದ್ಯಾರ್ಥಿನಿಯರು ಋತುಸ್ರಾವದ ವೇಳೆ ಧಾರ್ಮಿಕ ಕಟ್ಟಳೆಗಳನ್ನು ಮೀರುತ್ತಿದ್ದಾರೆ ಎಂದು ಹಾಸ್ಟೇಲ್ ಮುಖ್ಯಸ್ಥರು ದೂರು ನೀಡಿದ ನಂತರ ಕಾಲೇಜು ಆಡಳಿತ ಮಂಡಳಿ ಈ ರೀತಿ ನಡೆದುಕೊಂಡಿದೆ.

ಮೂರುವರೆ ತಿಂಗಳಿನಿಂದ ಪಿರಿಯಡ್ಸ್ ಆಗ್ತಿಲ್ಲ!

ತರಗತಿಯಿಂದ ಹೊರಗೆ ಬಂದು ನಿಲ್ಲಲು ಸೂಚನೆ ನೀಡಲಾಯಿತು. ನಂತರ ನಿಮ್ಮಲ್ಲಿ ಯಾರು ಪಿರಿಯಡ್ಸ್ ನಲ್ಲಿ ಇದ್ದೀರಿ ಎಂದು ಪ್ರಶ್ನೆ ಮಾಡಲಾಯಿತು. ಇಬ್ಬರು ಬದಿಗೆ ಸರಿದು ನಿಂತರು. ಆದರೆ ಇಷ್ಟಕ್ಕೂ ಬಿಡದೆ ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಎಲ್ಲರ ಒಳಉಡುಪು ಪರೀಕ್ಷೆ ಮಾಡಲಾಯಿತು ಎಂದು ವಿದ್ಯಾರ್ಥಿನಿಯೋರ್ವರು ಹೇಳಿದ್ದಾರೆ.

ಮಗಳಿಗೆ ಮಾತ್ರ ಅಲ್ಲ, ಮಗನಿಗೂ ಗೊತ್ತಿರಲಿ ಮುಟ್ಟಿನ ಗುಟ್ಟು

ಯಾರಿಗೂ ನಾವು ಬಲವಂತ ಮಾಡಿಲ್ಲ ಎಲ್ಲರ ಒಪ್ಪಿಗೆ ಪಡೆದುಕೊಂಡೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕಾಲೇಜು ಆಡಳಿತ ಮಂಡಳಿ ಹೇಳಿದೆ. ಆದರೂ ಈ  ಬಗ್ಗೆ ಸೂಕ್ತ ತನಿಖೆ ಮಾಡುತ್ತೇವೆ ಎಂದಿದ್ದಾರೆ.

ಸಹಜಾನಂದ ಮಹಿಳಾ ಕಾಲೇಜಿನಲ್ಲಿ ನಡೆದಿರುವ ಘಟನೆ ದೊಡ್ಡ ಸುದ್ದಿಯಾಗುತ್ತಿದ್ದು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

 

click me!