56 ವರ್ಷದ ವ್ಯಕ್ತಿಗೆ ಕೊರೊನಾಗೆ ಬಲಿ| ಮಹಾರಾಷ್ಟ್ರದಲ್ಲಿ 10 ಮಂದಿಗೆ ಸೋಂಕು ದೃಢ| ಭಾರತದಲ್ಲಿ ಒಟ್ಟು 335 ಮಂದಿಗೆ ಸೋಂಕು ದೃಢ
ಮಹಾರಾಷ್ಟ್ರ(ಮಾ.22): ಕೊರೋನಾ ವೈರಸ್ ಅಟ್ಟಹಾಸ ದಿನೇ ದಿನೇ ಹೆಚ್ಚುತ್ತಿದ್ದು, ಸೋಂಕಿತರ ಸಂಖ್ಯೆ ಹಾಗೂ ಮೃತರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಸರ್ಕಾರಗಳು ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ಬೆನ್ನಲ್ಲೇ ದೇಶದಲಲ್ಲಿ ಕೊರೋನಾ ವೈರಸ್ ಗೆ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದಾರೆ.
ಕೊರೋನಾ ವೈರಸ್ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮುಂಬೈನಲ್ಲಿ 56 ವರ್ಷದ ವ್ಯಕ್ತಿ ಕೊರೋನಾ ವೈರಸ್‌ಗೆ ಬಲಿಯಾಗಿರುವುದು ಧೃಡವಾಗಿದೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಸಾವಿನ ಸಂಖ್ಯೆ ಎರಡಕ್ಕೇರಿದೆ.
Number of Coronavirus cases in India rises to 324: Ministry of Health and Family Welfare pic.twitter.com/l4mS0CefAP
— ANI (@ANI)ಮಹಾರಾಷ್ಟ್ರದಲ್ಲಿ ಇಂದು, ಭಾನುವಾರ ಒಂದೇ ದಿನ 10 ಮಂದಿಗೆ ಸೋಂಕು ದೃಢವಾಗಿದ್ದು, ಭಾರತದಲ್ಲಿ ಒಟ್ಟು 335 ಮಂದಿಗೆ ಸೋಂಕು ದೃಢವಾಗಿದೆ.