ಹೊಸ ಆತಂಕ: ವಿದೇಶಕ್ಕೆ ಹೋಗಿಲ್ಲ, ಸೋಂಕಿತರ ಸಂಪರ್ಕಕ್ಕೆ ಬಂದಿಲ್ಲದವರಿಗೂ ಕೊರೋನಾ!

Published : Mar 22, 2020, 09:53 AM IST
ಹೊಸ ಆತಂಕ: ವಿದೇಶಕ್ಕೆ ಹೋಗಿಲ್ಲ, ಸೋಂಕಿತರ ಸಂಪರ್ಕಕ್ಕೆ ಬಂದಿಲ್ಲದವರಿಗೂ ಕೊರೋನಾ!

ಸಾರಾಂಶ

ಈಗ ಸಾಮುದಾಯಿಕ ಕೊರೋನಾ ಹರಡುವಿಕೆ ಭೀತಿ|  ಚೆನ್ನೈ, ಪುಣೆಯಲ್ಲಿ ತಲಾ ಒಂದು ಪ್ರಕರಣ ಬೆಳಕಿಗೆ| ವಿದೇಶಕ್ಕೆ ಹೋಗಿಲ್ಲ, ಸೋಂಕಿತರ ಸಂಪರ್ಕಕ್ಕೆ ಬಂದಿಲ್ಲ| ಹಾಗಿದ್ದರೂ ಇಬ್ಬರಿಗೆ ಕೊರೋನಾ ಹರಡಿದ್ದು ಹೇಗೆ?| ಸರ್ಕಾರದ ಚಿಂತೆಗೆ ಕಾರಣವಾದ ಈ ಪ್ರಕರಣ

ಚೆನ್ನೈ(ಮಾ.22): ಭಾರತಕ್ಕೆ ವಿದೇಶದಿಂದ ಬಂದವರು ಮತ್ತು ಅವರ ಸಂಪರ್ಕಕ್ಕೆ ಬಂದವರಲ್ಲಿ ಮಾತ್ರ ಕಾಣಿಸುತ್ತಿದ್ದ ಕೊರೋನಾ ಸೋಂಕು, ಇದೇ ಮೊದಲ ಬಾರಿಗೆ ಸಾಮುದಾಯಿಕ ಹರಡುವಿಕೆಯ ಭೀತಿ ಹುಟ್ಟುಹಾಕಿದೆ. ಕಾರಣ, ಈ ಎರಡೂ ಅಂಶಗಳಿಲ್ಲದ ಹೊರತಾಗಿಯೂ ಚೆನ್ನೈ ಮತ್ತು ಪುಣೆಯಲ್ಲಿ ತಲಾ ಒಬ್ಬರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ.

ಬುಧವಾರ ದೆಹಲಿಯಿಂದ ತಮಿಳುನಾಡಿಗೆ ಆಗಮಿಸಿದ್ದ 20 ವರ್ಷದ ದಿಲ್ಲಿ ಯುವಕನೊಬ್ಬನಿಗೆ ಕೊರೋನಾ ವೈರಸ್‌ ದೃಢಪಟ್ಟಿದೆ. ದಿಲ್ಲಿಯಿಂದ ಚೆನ್ನೈಗೆ ರೈಲಿನಲ್ಲಿ ಈತ ಆಗಮಿಸಿದ್ದ. ಆದರೆ ಈ ಮುನ್ನ ಈತ ಕೊರೋನಾ ಹರಡುವಿಕೆಯ ಮೂಲವಾಗಿರುವ ಯಾವುದೇ ವಿದೇಶಕ್ಕೆ ಹೋದವನಲ್ಲ ಅಥವಾ ಕೊರೋನಾ ವೈರಸ್‌ ದೃಢಪಟ್ಟಯಾವುದೇ ವ್ಯಕ್ತಿಯ ಜತೆ ಸಂಪರ್ಕಕ್ಕೆ ಬಂದವನಲ್ಲ. ಹಾಗಿದ್ದರೂ ಈತನಿಗೆ ಕೊರೋನಾ ಹೇಗೆ ಅಂಟಿತು? ಅದರ ಮೂಲ ಯಾವುದು ಎಂಬುದು ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ.

ಕೊರೋನಾ ವೈರಸ್ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಹುಶಃ ರೈಲಲ್ಲಿ ಪ್ರಯಾಣಿಸುವಾಗ ಅಥವಾ ಇನ್ನಾವುದೋ ಸ್ಥಳದಲ್ಲಿ ಕೊರೋನಾ ಅಂಟಿದ ವ್ಯಕ್ತಿಗಳು ಈತನ ಅರಿವಿಗೆ ಬಾರದಂತೆ ಸಂಪರ್ಕಕ್ಕೆ ಬಂದಿರಬಹುದು. ಅವರಿಂದ ಈತನಿಗೂ ಕೊರೋನಾ ಅಂಟಿರಬಹುದು. ಹಾಗಿದ್ದರೆ ಅಂಥ ಕೊರೋನಾ ಸೋಂಕಿತರು ಇನ್ನೂ ಎಷ್ಟುಜನರಿಗೆ ರೋಗ ಅಂಟಿಸಿರಬುಹುದು ಎಂಬುದು ಕಳವಳಕ್ಕೆ ಕಾರಣವಾಗುವ ಅಂಶ.

ಇನ್ನು ಪುಣೆಯಲ್ಲಿ 40 ವರ್ಷದ ಮಹಿಳೆಯೊಬ್ಬರು ಹಂದಿಜ್ವರದ ಶಂಕೆಯ ಮೇಲೆ ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ಅವರಿಗೂ ಕೊರೋನಾ ಸೋಂಕು ತಗುಲಿರುವುದು ಖಚಿತವಾಗಿದೆ. ಈ ಮಹಿಳೆಯ ಕೂಡಾ ವಿದೇಶಕ್ಕೆ ಹೋದ ಹಿನ್ನೆಲೆಯಾಗಲೀ, ಸೋಂಕು ಬಂದವರ ಸಂಪರ್ಕಕ್ಕಾಗಲೀ ಬಂದಿರಲಿಲ್ಲ. ಸದ್ಯ ಮಹಿಳೆ ಆರೋಗ್ಯ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

ಕೊರೋನಾ ಸಾಮುದಾಯಿಕವಾಗಿ ವ್ಯಾಪಿಸುವ ಬಗ್ಗೆ ಯಾವುದೇ ಸಾಕ್ಷ್ಯವಿಲ್ಲ ಎಂದು ಒಂದೆಡೆ ಕೇಂದ್ರ ಆರೋಗ್ಯ ಸಚಿವಾಲಯ ಹೇಳುತ್ತಿದೆ. ಆದಾಗ್ಯೂ ಈತನಿಗೆ ಹೇಗೆ ಕೊರೋನಾ ಅಂಟಿತು ಎಂಬ ಬಗ್ಗೆ ಗಹನ ಅವಲೋಕನ ಆರಂಭಿಸಲಾಗಿದೆ.

ವಿದೇಶದಿಂದ ಬಂದವರಿಗೆ ತಾಗಿದ್ದು ಕೊರೋನಾದ ಮೊದಲ ಹಂತವಾದರೆ, ಆ ರೀತಿ ಬಂದವರಿಂದ ದೇಶದಲ್ಲಿನ ವ್ಯಕ್ತಿಗಳಿಗೆ ಹರಡುವುದು ಎರಡನೇ ಹಂತ. ಆದರೆ ವಿದೇಶದಿಂದ ಬಂದವರಿಂದ ಸೋಂಕಿತರಾಗಿರುವ ವ್ಯಕ್ತಿಗಳಿಂದ 3ನೇ ವ್ಯಕ್ತಿಗೆ ರೋಗ ಅಂಟಿತು ಎಂದರೆ ಅದು ತೃತೀಯ ಹಂತವಾಗಿದ್ದು, ಇದು ಸಾಮುದಾಯಿಕ ಹರಡುವಿಕೆಗೆ ಕಾರಣ ಆಗಬಹುದು ಎಂಬುದು ಸರ್ಕಾರದ ಆತಂಕ. ಈ ಕಾರಣಕ್ಕೇ 2ನೇ ಹಂತದಲ್ಲೇ ಕೊರೋನಾ ಹೊಸಕಿ ಹಾಕಬೇಕು ಎಂದು ಸರ್ಕಾರ ಶ್ರಮಿಸುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!