
ಚೆನ್ನೈ(ಜೂ.09): ಇಲ್ಲಿನ ಅರಣ್ಯದಲ್ಲಿ ಹೆಣ್ಣು ಸಿಂಹವೊಂದು ಕೊರೋನಾದಿಂದಾಗಿ ಸಾವಿಗೀಡಾಗಿ ಮತ್ತು ಇತರ 9 ಸಿಂಹಗಳು ಕೋವಿಡ್ಗೆ ತುತ್ತಾಗಿರುವ ಬೆನ್ನಲ್ಲೇ, ಸಮೀಪದ 2 ಉದ್ಯಾನವನಗಳಲ್ಲಿ ಇರುವ 56 ಆನೆಗಳ ಗಂಟಲು ದ್ರವ ಪರೀಕ್ಷೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ನೇತೃತ್ವದ ಸರ್ಕಾರ ಸೂಚಿಸಿದೆ.
ಹೀಗಾಗಿ 56 ಆನೆಗಳ ಗಂಟಲು ದ್ರವವನ್ನು ಸಂಗ್ರಹಿಸಲಾಗಿದ್ದು, ಕೋವಿಡ್ ಪರೀಕ್ಷೆಗಾಗಿ ಉತ್ತರ ಪ್ರದೇಶದ ಇಜ್ಜತ್ನಗರದಲ್ಲಿರುವ ಭಾರತೀಯ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಚೆನ್ನೈನ ವಂದಲೂರು ಎಂಬಲ್ಲಿರುವ ಅರಿಗ್ನಾರ್ ಅಣ್ಣಾ ಪ್ರಾಣಿ ಸಂಗ್ರಹಾಲಯದ ಉದ್ಯಾನದಲ್ಲಿ ಗುರುವಾರವಷ್ಟೇ ಸಿಂಹಿಣಿಯೊಂದು ಕೋವಿಡ್ಗೆ ಬಲಿಯಾಗಿತ್ತು. ಅಲ್ಲದೆ 11 ಸಿಂಹಗಳ ಪೈಕಿ 9 ಸಿಂಹಗಳಲ್ಲಿ ಕೋವಿಡ್ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಅರಣ್ಯ ಸಚಿವ ಕೆ. ರಾಮಚಂದ್ರನ್ ಅವರು ಆನೆಗಳ ಕೋವಿಡ್ ಪರೀಕ್ಷೆಗೆ ಆದೇಶಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ