ಕೇರಳದಲ್ಲಿ ಮಿಕ್ಸ್ಚರ್ ತಿಂದು ಸಾವು ಕಂಡ 5 ವರ್ಷದ ಬಾಲಕ!

By Santosh Naik  |  First Published Dec 27, 2024, 8:52 PM IST

ಮಡತಾರದ ನೆಲ್ಲಿಕುನ್ನು ತಹನ ಮಂಜಿಲ್‌ನ ಜಮೀಲ್‌ ಮತ್ತು ತನ್ಸಿಯಾ ದಂಪತಿಯ ಪುತ್ರ ಮುಹಮ್ಮದ್‌ ಇಶಾನ್‌ ಎನ್ನುವ ಐದು ವರ್ಷದ ಬಾಲಕ ಸಾವು ಕಂಡಿದ್ದಾನೆ.


ತಿರುವನಂತಪುರಂ (ಡಿ.27): ಕ್ರಿಸ್‌ಮಸ್ ದಿನದಂದು ಅಸ್ವಸ್ಥತೆ ಮತ್ತು ವಾಂತಿಯಿಂದ ಬಳಲುತ್ತಿದ್ದ ಐದು ವರ್ಷದ ಬಾಲಕ ಮೃತಪಟ್ಟಿದ್ದಾನೆ. ಮಡತ್ತರ ನೆಲ್ಲಿಕ್ಕುನ್ನ ತಾಹನ ಮನ್ಸಿಲಿನಲ್ಲಿ ಜಮೀಲ ಮತ್ತು ತನ್ಸಿಯಾ ದಂಪತಿಯ ಪುತ್ರ ಮೊಹಮ್ಮದ್ ಇಶಾನ್ (5) ಮೃತಪಟ್ಟ ಬಾಲಕ. ಕುಟುಂಬವು ಕುಮ್ಮಿಲ್ ಕಿಳುನಿಲದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿತ್ತು. ಕುಮ್ಮಿಲ್ ಏಂಜಲ್ ಶಾಲೆಯ ಎಲ್ ಕೆ ಜಿ ವಿದ್ಯಾರ್ಥಿಯಾಗಿದ್ದ ಇಶಾನ್ ಮೃತಪಟ್ಟಿದ್ದಾನೆ. ಬುಧವಾರ ಬೆಳಿಗ್ಗೆ ವಾಂತಿಯಿಂದ ಬಳಲುತ್ತಿದ್ದ ಮಗುವನ್ನು ಕಡಕ್ಕಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟಿದ್ದ. ಹಿಂದಿನ ದಿನ ಬೇಕರಿಯಿಂದ ಖರೀದಿಸಿದ ಮಿಕ್ಸ್ಚರ್ ಸೇವಿಸಿದ ನಂತರ ಮಗುವಿನ ಆರೋಹಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿತು ಎಂದು ಪೋಷಕರು ತಿಳಿಸಿದ್ದಾರೆ. ಮಗು ಸೇವಿಸಿದ ಆಹಾರ ಪದಾರ್ಥಗಳ ಮಾದರಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ. ವಿವರವಾದ ಪರೀಕ್ಷೆಯ ನಂತರವೇ ಕಾರಣ ಏನೆಂದು ತಿಳಿಯುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಅಂತ್ಯಕ್ರಿಯೆ ಮಾಡಲಾಯಿತು. 

ಈ ವರ್ಷದ ಏಪ್ರಿಲ್‌ನಲ್ಲಿ, ಅವಧಿ ಮೀರಿದ ಚಾಕೋಲೆಟ್‌ ಸೇವಿಸಿ ಒಂದೂವರೆ ವರ್ಷದ ಹೆಣ್ಣು ಮಗು ರಕ್ತವಾಂತಿ ಮಾಡಿಕೊಂಡು ಸಾವನ್ನಪ್ಪಿದ ಘಟನೆ ಪಂಜಾಬ್‌ನ ಲುಧಿಯಾನದಲ್ಲಿ ನಡೆದಿತ್ತು. ಬಾಲಕಿ ತನ್ನ ಕುಟುಂಬದ ಜೊತೆಗೆ ಪಟಿಯಾಲದ ಸಂಬಂಧಿಕರ ಮನೆಗೆ ತೆರಳಿದ್ದಳು. ಅಲ್ಲಿಂದ ಹಿಂದಿರುಗುವ ಸಂದರ್ಭದಲ್ಲಿ ಸಂಬಂಧಿಕರು ಆಕೆಗೆ ಚಾಕೋಲೆಟ್ ಸೇರಿದಂತೆ ಇತರ ತಿನಿಸುಗಳನ್ನು ನೀಡಿದ್ದಾರೆ. ಅದನ್ನು ಸೇವಿಸುತ್ತಿದ್ದಂತೆ ಬಾಲಕಿ ರಕ್ತವಾಂತಿ ಮಾಡಿಕೊಂಡಿದ್ದಾಳೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿದೆ. ಅವಧಿ ಮೀರಿದ ಚಾಕೋಲೆಟ್ ಸೇವನೆಯೇ ಇದಕ್ಕೆ ಕಾರಣವೆಂದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢವಾಗಿತ್ತು.

Tap to resize

Latest Videos

undefined

ಸೂರ್ಯನಿಂದ ಬರೀ 6.1 ಮಿಲಿಯನ್‌ ಕಿಲೋಮೀಟರ್‌ ದೂರದಲ್ಲಿ ಸಾಗಿದ ಪಾರ್ಕರ್‌ ನೌಕೆ; ಸೇಫ್‌ ಎಂದ ನಾಸಾ!

ಅದಕ್ಕೂ ಮುನ್ನ ಮಾರ್ಚ್‌ 24 ರಂದು ಪಂಜಾಬ್‌ನ ಪಟಿಯಾಲಾದಲ್ಲಿ ಬೇಕರಿಯಿಂದ ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ್ದ ಚಾಕೋಲೆಟ್‌ ಕೇಕ್‌ ತಿಂದು 10 ವರ್ಷದ ಬಾಲಕಿ  ಮಾನ್ವಿ ಸಾವು ತಲ್ಲಣ ಸೃಷ್ಟಿಸಿತ್ತು. ಕೇಕ್‌ನ ಮಾದರಿಯನ್ನು ಪರೀಕ್ಷೆಗಾಗಿ ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಿದಾಗ ಅದರಲ್ಲಿ, ಹೆಚ್ಚಿನ ಪ್ರಮಾಣದ ಸ್ಯಾಕ್ರರಿನ್, ಕೃತಕ ಸಿಹಿಯಾಗಿ ಬಳಸಿರುವುದು ದೃಢಪಟ್ಟಿದೆ. ಈ ಸಾಕ್ರರಿನ್ ಎಲ್ಲಾ ಬೇಕರಿ ಪದಾರ್ಥಗಳಲ್ಲೂ ಬಳಸುತ್ತಾರೆ, ಆದರೆ ಸಣ್ಣ ಪ್ರಮಾಣದ ಸಾಕ್ರರಿನ್ ನಿಮ್ಮ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ವೇಗವಾಗಿ ಹೆಚ್ಚಿಸಬಹುದು. ಇದು ಸಕ್ಕರೆಗಿಂತ ಹೆಚ್ಚು ಸಿಹಿಯಾಗಿರುತ್ತದೆ. ಅಲ್ಲದೆ ಸಕ್ಕರೆಗಿಂತ ಕಡಿಮೆ ಪ್ರಮಾಣದಲ್ಲಿ ಬಳಸಿದರೆ ಸಾಕಾಗುತ್ತದೆ. ಹೀಗಾಗಿ ಬೇಕರಿಗಳಲ್ಲಿ ಹಾಗೂ ಹೋಟೆಲ್‌ಗಳಲ್ಲಿ ಸಿಹಿಗಾಗಿ ಸಕ್ಕರೆಯ ಬದಲು ಈ ಸಾಕ್ರರಿನ್ ಬಳಸಲಾಗುತ್ತದೆ. ಈ ರೀತಿ ಕೇಕ್ ಸೇವಿಸಿದ್ದ ಬಳಿಕ ಎಲ್ಲರು ಅಸ್ವಸ್ಥರಾಗಿದ್ದಾರೆ. ಆದರೆ ಹುಟ್ಟುಹಬ್ಬವೆಂದು ತುಸು ಹೆಚ್ಚು ಕೇಕ್ ತಿಂದಿದ್ದ ಮಾನ್ವಿ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಗೆ ತಲುಪಿದ್ದಳು. ಆದರೆ ಆಕೆ ಮೃತಪಟ್ಟಿದ್ದಳು.

ಪೇಮೆಂಟ್‌ ಸರಿಯಾಗಿ ಮಾಡ್ತಾ ಇದ್ದರೂ ಕ್ರೆಡಿಟ್‌ ಸ್ಕೋರ್‌ ಏರಿಕೆ ಆಗ್ತಿಲ್ವಾ?

 

click me!