ಯುಪಿಎಗಿಂತ ಎನ್‌ಡಿ ಕಾಲದಲ್ಲಿ 5 ಪಟ್ಟು ಅಧಿಕ ಉದ್ಯೋಗ ಸೃಷ್ಟಿ: ಸಿಂಗ್ 2.9 ಕೋಟಿ, ಮೋದಿ 17 ಕೋಟಿ ನೌಕರಿ ಸೃಷ್ಟಿ!

Published : Jan 03, 2025, 10:43 AM IST
ಯುಪಿಎಗಿಂತ ಎನ್‌ಡಿ ಕಾಲದಲ್ಲಿ 5 ಪಟ್ಟು ಅಧಿಕ ಉದ್ಯೋಗ ಸೃಷ್ಟಿ: ಸಿಂಗ್ 2.9 ಕೋಟಿ, ಮೋದಿ 17 ಕೋಟಿ ನೌಕರಿ ಸೃಷ್ಟಿ!

ಸಾರಾಂಶ

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ 10 ವರ್ಷಗಳ ಅವಧಿಯಲ್ಲಿ ಐದು ಪಟ್ಟು ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ. 2014-15ರಲ್ಲಿ ಇದ್ದ ಉದ್ಯೋಗಕ್ಕೆ ಹೋಲಿಸಿದರೆ 2023-24ರಲ್ಲಿ ದೇಶದಲ್ಲಿ ಉದ್ಯೋಗ ಸೃಷ್ಟಿಯ ಪ್ರಮಾಣ ಶೇ.36ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 

ನವದೆಹಲಿ(ಜ.03): ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯ 10 ವರ್ಷಗಳಿಗೆ ಹೋಲಿಸಿದರೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ 10 ವರ್ಷಗಳ ಅವಧಿಯಲ್ಲಿ ಐದು ಪಟ್ಟು ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ. 2014-15ರಲ್ಲಿ ಇದ್ದ ಉದ್ಯೋಗಕ್ಕೆ ಹೋಲಿಸಿದರೆ 2023-24ರಲ್ಲಿ ದೇಶದಲ್ಲಿ ಉದ್ಯೋಗ ಸೃಷ್ಟಿಯ ಪ್ರಮಾಣ ಶೇ.36ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 

ಈ ಕುರಿತು ಮಾಹಿತಿ ನೀಡಿರುವ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ, '2014-15ರಲ್ಲಿ ದೇಶದಲ್ಲಿ 47.15 ಕೋಟಿ ಉದ್ಯೋಗ ಇತ್ತು. ಯುಪಿಎ ಆಡಳಿತದ ಅವಧಿಯಾದ 2004-14ರಲ್ಲಿ ಉದ್ಯೋಗ ಬೆಳವಣಿಗೆ ಕೇವಲ ಶೇ.7ರಷ್ಟಿತ್ತು. ಅಂದರೆ ಕೇವಲ 2.9 ಕೋಟಿ ಹೆಚ್ಚುವರಿ ಉದ್ಯೋಗ ಸೃಷ್ಟಿ ಯಾಗಿತ್ತು. ಆದರೆ 2023-24ರಲ್ಲಿ ದೇಶದಲ್ಲಿ ಉದ್ಯೋಗ ಪ್ರಮಾಣ 64.33 ಕೋಟಿಗೆ ತಲುಪಿದೆ. ಮೋದಿ ಸರ್ಕಾರದ ಅವಧಿಯಾದ 2014-24ರಲ್ಲಿ ಉದ್ಯೋಗ ಬೆಳವಣಿಗೆ ಪ್ರಮಾಣ ಶೇ.36ರಷ್ಟು ದಾಖಲಾಗಿದೆ.

ಮೊಬೈಲ್‌ನಲ್ಲೇ ಓದಿ ಪಿಎಸ್‌ಐ ಆದ ಜೀಪ್‌ ಚಾಲಕ, ಪೇದೆ!

ಈ ಅವಧಿಯಲ್ಲಿ 17.19ಕೋಟಿ ಹೆಚ್ಚುವರಿ ಉದ್ಯೋಗ ಸೃಷ್ಟಿಸಲಾಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲೇ 4.6 ಕೋಟಿ ಉದ್ಯೋಗ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ. 

ಯಾವ್ಯಾವ ಕ್ಷೇತ್ರ ಎಷ್ಟೆಷ್ಟು? 

• ಕೃಷಿ: ಯುಪಿಎ ಅವಧಿಯಲ್ಲಿ ಶೇ.16ರಷ್ಟು ಉದ್ಯೋಗಕಡಿತ.ಎನ್‌ಡಿಎ ಅವಧಿಯಲ್ಲಿ ಶೇ.19ರಷ್ಟು ಹೆಚ್ಚು ಉದ್ಯೋಗ ಸೃಷ್ಟಿ. 
• ಉತ್ಪಾದನೆ: ಯುಪಿಎ ಅವಧಿಯಲ್ಲಿ ಶೇ.6ರಷ್ಟು ಉದ್ಯೋಗ ಹೆಚ್ಚಳ, ಮೋದಿ ಅವಧಿಯಲ್ಲಿ ಶೇ.15ರಷ್ಟು ಹೆಚ್ಚುವರಿ ಉದ್ಯೋಗ ಸೃಷ್ಟಿ. 
• ಸೇವಾ ಕ್ಷೇತ್ರ: ಯುಪಿಎ ಅವಧಿಯಲ್ಲಿ ಶೇ.25ರಷ್ಟು, ಎನ್‌ಡಿಎ ಅವಧಿಯಲ್ಲಿ ಶೇ.36 ರಷ್ಟು ಪ್ರಗತಿ. 
ನಿರುದ್ಯೋಗ ದರ: 2017-18ರಲ್ಲಿ ಶೇ.6ರಷ್ಟು ಇದ್ದ ನಿರುದ್ಯೋಗ ದರ 2023-24ರಲ್ಲಿ ಶೇ.3.2ಕ್ಕೆ ಇಳಿದಿದೆ. 2017-18 ಶೇ. 6. ರಷ್ಟು ಉದ್ಯೋಗ ದರವು 2017-18ರಲ್ಲಿ ಶೇ.58.2ಕ್ಕೆ ಏರಿಕೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಕೆಎಸ್‌ಸಿಎ ಚುನಾವಣೆ - ಅಸ್ತಿತ್ವದಲ್ಲೇ ಇಲ್ಲದ ಕ್ಲಬ್‌ಗಳ ಹೆಸರು ಮತದಾನ ಪಟ್ಟಿಯಲ್ಲಿ ಪತ್ತೆ!
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌