ದೆಹಲಿ(ಜು.27): ಎರಡು ಈಶಾನ್ಯ ರಾಜ್ಯಗಳ ನಡುವಿನ ಸುದೀರ್ಘ ಗಡಿ ಜಗಳ ಹಿಂಸಾತ್ಮಕ ರೂಪ ತಾಳಿದ್ದು ಐದು ಅಸ್ಸಾಂ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಗಡಿ ಪಟ್ಟಣವಾದ ವೈರೆಂಗ್ಟೆಯಲ್ಲಿ ನಡೆದ ಘರ್ಷಣೆಯಲ್ಲಿ ಅಸ್ಸಾಂನ ಕನಿಷ್ಠ 60 ಜನರು ಗಾಯಗೊಂಡಿದ್ದಾರೆ.
ರಾಜ್ಯ ಗಡಿ ವಿವಾದಗಳನ್ನು ಬಗೆಹರಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈಶಾನ್ಯ ಮುಖ್ಯಮಂತ್ರಿಗಳೊಂದಿಗೆ ಮೇಘಾಲಯ ರಾಜಧಾನಿ ಶಿಲ್ಲಾಂಗ್‌ನಲ್ಲಿ ಸಭೆ ನಡೆಸಿದ ಎರಡು ದಿನಗಳ ನಂತರ ಈ ಘಟನೆ ನಡೆದಿದೆ.
undefined
ಮೋದಿ, ವಿಪಕ್ಷ ನಾಯಕರ ಭೇಟಿಗೆ ದಿಲ್ಲಿಗೆ ದೀದಿ ಆಗಮನ!
ಗಾಯಗೊಂಡವರಲ್ಲಿ ಅಸ್ಸಾಂನ ಕ್ಯಾಚರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಂಬಲ್ಕರ್ ವೈಭವ್ ಚಂದ್ರಕಾಂತ್ ಮತ್ತು ಜಿಲ್ಲೆಯ ಧೋಲೈ ಪೊಲೀಸ್ ಠಾಣೆಯ ಉಸ್ತುವಾರಿ ಸೇರಿದ್ದಾರೆ. ಸೊಂಟದಲ್ಲಿ ಗುಂಡಿನ ಗಾಯದಿಂದ ತೀವ್ರ ನಿಗಾ ಘಟಕದಲ್ಲಿರುವ ಎಸ್‌ಪಿ ಅವರನ್ನು ಮುಂಬೈಗೆ ವಿಮಾನದಲ್ಲಿ ಸಾಗಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಲ್ಲಲ್ಪಟ್ಟವರಲ್ಲಿ ಅವರ ವೈಯಕ್ತಿಕ ಭದ್ರತಾ ಅಧಿಕಾರಿ ಲಿಟಾನ್ ಸುಕ್ಲಾಬೈದ್ಯ ಕೂಡ ಸೇರಿದ್ದಾರೆ.
ಅಸ್ಸಾಂ-ಮಿಜೋರಾಂ ಗಡಿಯಲ್ಲಿ ನಮ್ಮ ರಾಜ್ಯದ ಸಾಂವಿಧಾನಿಕ ಗಡಿಯನ್ನು ರಕ್ಷಿಸುವಾಗ ಅಸ್ಸಾಂಪೊಲಿಸ್‌ನ ಸಿಬ್ಬಂದಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ತಿಳಿಸಲು ನನಗೆ ತುಂಬಾ ನೋವಾಗಿದೆ. ದುಃಖಿತ ಕುಟುಂಬಗಳಿಗೆ ನನ್ನ ಸಂತಾಪ, ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದಾರೆ.
ಸಿಆರ್‌ಪಿಎಫ್ ಪೋಸ್ಟ್ ದಾಳಿ:
ಬೆಳಗ್ಗೆ 11.30 ಕ್ಕೆ ಘಟನೆ ನಡೆದಿತ್ತು. ಸುಮಾರು 200 ಅಸ್ಸಾಂ ಪೊಲೀಸ್ ಸಿಬ್ಬಂದಿಗಳು ವೈರೆಂಗ್ಟೆ ಆಟೋರಿಕ್ಷಾ ಸ್ಟ್ಯಾಂಡ್‌ಗೆ ಬಂದು ಬಲವಂತವಾಗಿ ಕೇಂದ್ರ ಮೀಸಲು ಪೊಲೀಸ್ ಪಡೆಯ ಡ್ಯೂಟಿ ಪೋಸ್ಟ್ ಮುಚ್ಚಿದರು ಎಂದು ಮಿಝೋರಾಮ್ ಗೃಹಸಚಿವ ಲಾಲ್‌ಚಮ್ಲಿಯಾನಾ ತಿಳಿಸಿದ್ದಾರೆ. ಸಿಆರ್ಪಿಎಫ್ ಅನ್ನು 164.6 ಕಿ.ಮೀ ಅಸ್ಸಾಂ-ಮಿಜೋರಾಂ ಗಡಿಯಲ್ಲಿ ವಿವಾದಿತ ವಿಸ್ತಾರಗಳಲ್ಲಿ ತಟಸ್ಥ ಶಕ್ತಿಯಾಗಿ ನಿಯೋಜಿಸಲ್ಪಟ್ಟಿದೆ.
ಅಸ್ಸಾಂ ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಿಜೋರಾಂನಿಂದ ಹೊರಟ ಕೆಲವು ವಾಹನಗಳನ್ನು ಹಾನಿಗೊಳಿಸಿದ್ದಾರೆ. ಕೆಲವು ವಾಹನಕ್ಕೆ ಬೆಂಕಿ ಇಟ್ಟಿದ್ದಾರೆ. ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿದ ನಮ್ಮ ಅಧಿಕಾರಿಗಳ ಮಾತು ಅವರು ಕೇಳಲಿಲ್ಲ. ಅಶ್ರುವಾಯು ಮತ್ತು ಗ್ರೆನೇಡ್‌ಗಳನ್ನು ಹಾರಿಸಿದ್ದಾರೆ. ಸಂಜೆ 4.30 ರ ಸುಮಾರಿಗೆ ಗುಂಡು ಹಾರಿಸಲಾರಂಭಿಸಿದ್ದಾರೆ ಎಂದು ಲಾಲ್ಚಮ್ಲಿಯಾನಾ ಹೇಳಿದ್ದಾರೆ.
ಅಸ್ಸಾಂನ ಬರಾಕ್ ಕಣಿವೆಯಲ್ಲಿ ತಮ್ಮ ಮಿಜೋರಾಂ ಜೊತೆ ನಡೆದ ಘರ್ಷಣೆಯಲ್ಲಿ ಆರು ಪೊಲೀಸರು ಸಾವನ್ನಪ್ಪಿದ ಘಟನೆ ದೇಶವನ್ನೇ ಬೆಚ್ಚಿಬೀಳಿಸಿದೆ. 36 ವರ್ಷಗಳ ಹಿಂದೆ ಮೆರಪಾನಿಯಲ್ಲಿ ಅಸ್ಸಾಂ-ನಾಗಾಲ್ಯಾಂಡ್ ಗಡಿಯಲ್ಲಿ ಇದೇ ರೀತಿಯ ಘರ್ಷಣೆಯಲ್ಲಿ 28 ಪೊಲೀಸರು ಸಾವನ್ನಪ್ಪಿದ್ದರು.