ವೈದ್ಯರ ಮೇಲೆ ಹಲ್ಲೆ ಮಾಡಿದ್ದ ಐವರಿಗೆ ಕೊರೋನಾ ಸೋಂಕು!

By Kannadaprabha News  |  First Published Apr 22, 2020, 1:40 PM IST

ವೈದ್ಯರ ಮೇಲೆ ಹಲ್ಲೆ ಮಾಡಿದ್ದ ಐವರಿಗೆ ಕೊರೋನಾ ಸೋಂಕು|  ಕಳೆದ ವಾರ ಇಲ್ಲಿನ ನವಾಬ್‌ಪುರದಲ್ಲಿ ಕೊರೋನಾ ಪೀಡಿತ ಕುಟುಂಬವೊಂದರ ಸದಸ್ಯರ ಪರೀಕ್ಷೆಗೆಂದು ಆಗಮಿಸಿದ್ದ ವೈದ್ಯಕೀಯ ಸಿಬ್ಬಂದಿಗಳ ಮೇಲೆ ಹಲ್ಲೆ


ಮೊರಾದಾಬಾದ್(ಏ.22): ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಇತ್ತೀಚೆಗೆ ವೈದ್ಯಕೀಯ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ 17 ಮಂದಿಯ ಪೈಕಿ 5 ಮಂದಿ ಕೊರೋನಾ ವೈರಸ್‌ ಸೋಂಕು ಇರುವುದು ದೃಢವಾಗಿದೆ.

ಕೊರೋನಾ ರೋಗಿಗಳ ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಪ್ರಿ ಪ್ಲಾನ್ ಅಟ್ಯಾಕ್

Tap to resize

Latest Videos

ಕಳೆದ ವಾರ ಇಲ್ಲಿನ ನವಾಬ್‌ಪುರದಲ್ಲಿ ಕೊರೋನಾ ಪೀಡಿತ ಕುಟುಂಬವೊಂದರ ಸದಸ್ಯರ ಪರೀಕ್ಷೆಗೆಂದು ಆಗಮಿಸಿದ್ದ ವೈದ್ಯಕೀಯ ಸಿಬ್ಬಂದಿಗಳ ಮೇಲೆ ಇವರು ಹಲ್ಲೆ ನಡೆಸಿದ ಹಾಗೂ ಆ್ಯಂಬುಲೆನ್ಸ್‌ ಮೇಲೆ ಕಲ್ಲು ತೂರಿದ ಆರೋಪ ಇವರ ಮೇಲೆ ಇದೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದರು.

17 ಜನರನ್ನು ಪರೀಕ್ಷೆ ಒಳಪಡಿಸಲಾಗಿದ್ದು, ಐವರಲ್ಲಿ ಸೋಂಕು ಇರುವುದು ಖಚಿತವಾಗಿದೆ.

click me!