ವಿಶ್ವಸಂಸ್ಥೆಯ ಒಂದು ಟ್ವೀಟ್, ರಾಹುಲ್ ಫ್ಯಾನ್ಸ್ ಫುಲ್ ಖುಷ್: ಕಾರಣವೇನು?

By Suvarna NewsFirst Published Apr 22, 2020, 12:13 PM IST
Highlights

ಕೊರೋನಾ ಆತಂಕ ಬೆನ್ನಲ್ಲೇ ವಿಶ್ವಸಂಸ್ಥೆಯ ಟ್ವೀಟ್| ವಿಶ್ವ ಆರೋಗ್ಯ ಸಂಸ್ಥೆಯ ಟ್ವೀಟ್‌ ಬೆನ್ನಲ್ಲೇ ರಾಹುಲ್ ಅಭಿಮಾನಿಗಳು ಫುಲಲ್‌ ಖುಷ್| ಲಾಕ್‌ಡೌನ್ ಸಂಬಂಧ ಮಾಡಿದ ಟ್ವೀಟ್‌ನಲ್ಲೇನಿದೆ?

ನವದೆಹಲಿ(ಏ.22): ಕೊರೋನಾ ಮಹಾಮಾರಿ ಇಡೀ ವಿಶ್ವವನ್ನೇ ಕಂಗಾಲು ಮಾಡಿದೆ. ಎಲ್ಲಾ ರಾಷ್ಟ್ರಗಳು ತಮ್ಮದೇ ನಿಟ್ಟಿನಲ್ಲಿ ಇದನ್ನು ನಿಯಂತ್ರಿಸಲು ಕ್ರಮ ಕೈಗೊಂಡಿವೆ. ಹೀಗಿರುವಾಗಲೇ ಟ್ವಿಟರ್‌ನಲ್ಲಿ ಮಂಗಳವಾರ #WHO_With_Rahul ಎಂಬುವುದು ಟ್ರೆಂಡ್ ಸೃಷ್ಟಿಸಿತ್ತು. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಬೆಂಬಲಿಗರು ಹಾಗೂ ಕಾಂಗ್ರೆಸ್‌ನ ಎಲ್ಲಾ ನಾಯಕರು ಈ ಟ್ವೀಟ್ ಮೂಲಕ ಕೇಂದ್ರಕ್ಕೆ ತುರುಗೇಟು ನೀಡಲಾರಂಭಿಸಿದ್ದಾರೆ. ಅಲ್ಲದೇ ರಾಹುಲ್ ಗಾಂಧಿ ಮಾಡಿದ್ದ ಹಳೆಯ ಟ್ವೀಟ್ ಒಂದನ್ನು ಶೇರ್ ಮಾಡಲಾರಂಭಿಸಿದ್ದಾರೆ. ಏನಿದು ವಿಚಾರ? ಇಲ್ಲಿದೆ ಮಾಹಿತಿ.

ವಿಶ್ವ ಆರೋಗಗ್ಯ ಸಂಸ್ಥೆ ಟ್ವೀಟ್ ಒಂದನ್ನು ಮಾಡಿದ್ದು ಇದರಲ್ಲಿ ಕಠಿಣ ಲಾಕ್‌ಡೌನ್‌ನಿಂದ ದೇಶವೊಂದಕ್ಕೆ ಕೊರೋನಾದಿಂದ ಕೊಂಚ ಬಿಡುಗಡೆ ಸಿಗಬಹುದು. ಆದರೆ ಇದೇ ಅಂತಿಮವಲ್ಲ, ಇದರಿಂದ ಎಲ್ಲವೂ ಸಾಧ್ಯವಿಲ್ಲ. ಎಲ್ಲಾ ರಾಷ್ಟ್ರಗಳು ಕೊರೋನಾ ಸೋಂಕಿರುವುದನ್ನು ಪತ್ತೆ ಹಚ್ಚಿ, ಪರೀಕ್ಷಿಸಿ, ಸೋಂಕಿತರನ್ನು ಪ್ರತ್ಯೇಕವಾಗಿರಿಸಿ, ಅವರ ಆರೈಕೆ ಹಾಗೂ ಚಿಕಿತ್ಸೆ ನೀಡಿ. ಅವರು ಸಂಪರ್ಕಿಸಿದವರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಬೇಕು  ಇದರಿಂದಷ್ಟೇ ನಿಯಂತ್ರಣ ಸಾಧ್ಯ ಎಂದಿದೆ.

"So-called lockdowns can help to take the heat out of a country’s epidemic, but they cannot end it alone.

Countries must now ensure they can detect, test, isolate and care for every case, and trace every contact"-

— World Health Organization (WHO) (@WHO)

ಈ ಟ್ವೀಟ್‌ಗೂ ರಾಹುಲ್ ಗಾಂಧಿಗೂ ಏನು ಸಂಬಂಧ?

ರಾಹುಲ್ ಗಾಂಧಿ ಏಪ್ರಿಲ್ 16ರಂದು ಸುದ್ದಿಗೋಷ್ಟಿ ನಡೆಸಿದ್ದರು. ಈ ವೇಳೆ ಅವರು ತಾನು ಕಳೆದ ಎರಡು ತಿಂಗಳಲ್ಲಿ ಲವಾರು ತಜ್ಞರೊಂದಿಗೆ ಸಮಾಲೋಚನೆ ನಡೆಸಿದೆ. ಲಾಕ್‌ಡೌನ್‌ ಕೇವಲ ಒಂದು ಅಲ್ಪವಿರಾಮವಷ್ಟೇ. ಲಿದು ಕೊರೋನಾ ಮಹಾಮಾರಿಯನ್ನು ನಿಯಂತ್ರಿಸಲು ಸೂಕ್ತ ಕ್ರಮವಲ್ಲ. ಲಾಕ್‌ಡೌನ್ ಮುಕ್ತಾಯವಾಗುತ್ತಿದ್ದಂತೆಯೇ ಮತ್ತೆ ಪ್ರಕರಣಗಳು ಕಂಡು ಬರಲಾರಂಭಿಸುತ್ತವೆ. ಲಾಕ್‌ಡೌನ್ ಕೇವಲ ಅಗತ್ಯ ತಯಾರಿ ನಡೆಸಲು ಸಮಯ ನೀಡುತ್ತದೆ. ನಾವು ಹೆಚ್ಚಿನ ಪರೀಕ್ಷೆ ನ

Logical and scientific reasoning has always found itself to be resonated.

This pandemic has to be fought on all fronts, lockdown is not a remedy but a means to contain the spread.

Let us fight together. pic.twitter.com/JPK2x9dFxV

— Bhupesh Baghel (@bhupeshbaghel)

ಡೆಸಬೇಕಿದೆ, ಈ ಮೂಲಕ ಕೊರೋನಾ ಎಲ್ಲೆಲ್ಲಿ ಇದೆ ಎಂದು ಪತ್ತೆ ಹಚ್ಚಬೇಕು ಎಂದಿದ್ದರು.

 

ಇನ್ನು ಇದಕ್ಕೂ ಮುನ್ನ ಏಪ್ರಿಲ್ 13 ರಂದು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ ಲಾಕ್‌ಡೌನ್‌ನಿಂದ ಕೃಷಿಕರು, ರೈತರು, ಕಾರ್ಮಿಕರು, ದಿನಗೂಲಿ ನೌಕರರು ಹಾಗೂ ಉದ್ಯೋಗಿಗಳು ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ನಿವಾರಿಸಲು ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆ ನಡೆಸಬೇಕು, ಈ ಮೂಲಕ ಕೊರೋನಾ ವೈರಸ್ ಹಾಟ್‌ಸ್ಪಾಟ್ ಪತ್ತೆ ಹಚ್ಚಿ, ಸೋಂಕಿತರನ್ನು ಐಸೋಲೇಷನ್ ಮಾಡಬಹುದು ಎಂದಿದ್ದರು.

ರಾಹುಲ್ ಬೆಂಬಲಿಗರು ಫುಲ್ ಖುಷ್!

ಇದೀಗ ವಿಶ್ವಸಂಸ್ಥೆ ಮಾಡಿರುವ ಈ ಟ್ವೀಟ್ ರಾಹುಲ್ ಬೆಂಬಲಿಗರನ್ನು ಹಾಗೂ ಕಾಂಗ್ರೆಸ್ ನಾಯಕರನ್ನು ಖುಷಿಗೊಳಿಸಿದೆ. ಕೆಲವರು ಇದು ರಾಹುಲ್ ಗಾಂಧಿಯ ವಿಚಾರಧಾರೆಯನ್ನು ಮುಂದುವರೆಸಬೇಕೆನ್ನುತ್ತಿದ್ದರೆ, ಇನ್ನು ಕೆಲವರು ವಿಶ್ವಸಂಸ್ಥೆಯೂ ರಾಹುಲ್ ಗಾಂಧಿ ಮಾತುಗಳನ್ನು ಒಪ್ಪಿಕೊಂಡಿದೆ ಎಂದಿದ್ದಾರೆ.

click me!