ಶಾಸಕರು ಹಾಗೂ ಸಂಸದರ ವಿರುದ್ಧ ವಿಚಾರಣೆಗೆ ಬಾಕಿ ಇರುವ ಕ್ರಿಮಿನಲ್‌ ಪ್ರಕರಣಗಳೆಷ್ಟು ಗೊತ್ತೇ..?

Contributor Asianet   | Asianet News
Published : Feb 04, 2022, 11:02 AM ISTUpdated : Feb 04, 2022, 11:09 AM IST
ಶಾಸಕರು ಹಾಗೂ ಸಂಸದರ ವಿರುದ್ಧ ವಿಚಾರಣೆಗೆ ಬಾಕಿ ಇರುವ ಕ್ರಿಮಿನಲ್‌ ಪ್ರಕರಣಗಳೆಷ್ಟು ಗೊತ್ತೇ..?

ಸಾರಾಂಶ

ಸುಪ್ರೀಂಕೋರ್ಟ್‌ಗೆ ವರದಿ ನೀಡಿದ ಅಮಿಕಸ್ ಕ್ಯೂರಿ ವಿಜಯ್ ಹನ್ಸಾರಿಯಾ ಶಾಸಕರು ಹಾಗೂ ಸಂಸದರ ವಿರುದ್ಧದ 4,984  ಪ್ರಕರಣಗಳ ವಿಚಾರಣೆ ಬಾಕಿ  2,775 ಪ್ರಕರಣಗಳ ವಿಲೇವಾರಿ ನಂತರವೂ ಹೆಚ್ಚಿದ ಪ್ರಕರಣಗಳ ಸಂಖ್ಯೆ

ನವದೆಹಲಿ(ಫೆ.4): ದೇಶದಲ್ಲಿರುವ ಸಂಸದರು ಹಾಗೂ ಶಾಸಕರ ವಿರುದ್ಧ ಇರುವ ಕ್ರಿಮಿನಲ್‌ ಪ್ರಕರಣಗಳ ವಿವರ ಗಾಬರಿ ಮೂಡಿಸುವಂತಿದ್ದು, ಒಟ್ಟು ರಾಜಕಾರಣಿಗಳ ವಿರುದ್ಧ 4,984 ಕ್ರಿಮಿನಲ್ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಹಾಗೇ  2018 ರಿಂದ ಅಂದರೆ ಕಳೆದ ಮೂರು ವರ್ಷಗಳಲ್ಲಿ 862 ಪ್ರಕರಣಗಳು ಹೆಚ್ಚಾಗಿವೆ ಎಂದು ಸುಪ್ರೀಂಕೋರ್ಟ್‌ಗೆ ಅಮಿಕಸ್ ಕ್ಯೂರಿ ವರದಿ ನೀಡಿದೆ. ಡಿಸೆಂಬರ್ 2018 ರಲ್ಲಿ 4,122 ರಷ್ಟಿದ್ದ ರಾಜಕಾರಣಿಗಳ ವಿರುದ್ಧದ ಪ್ರಕರಣ ಡಿಸೆಂಬರ್ 2021 ರ ವೇಳೆ  4,984 ಕ್ಕೆ ಏರಿಕೆಯಾಗಿದೆ. ಮಾಜಿ ಮತ್ತು ಹಾಲಿ ಸಂಸದರು ಹಾಗೂ ವಿಧಾನಸಭೆಯ ಸದಸ್ಯರ ವಿರುದ್ಧ ಒಟ್ಟು 4,984 ಕ್ರಿಮಿನಲ್ ಪ್ರಕರಣಗಳು ದೇಶಾದ್ಯಂತ ವಿವಿಧ ಸೆಷನ್‌ ಕೋರ್ಟ್ ಮತ್ತು ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಕಾಯುತ್ತಿವೆ ಎಂದು ಸುಪ್ರೀಂಕೋರ್ಟ್‌ಗೆ ಅಮಿಕಸ್ ಕ್ಯೂರಿ ತಿಳಿಸಿದ್ದಾರೆ. 

ನ್ಯಾಯಾಲಯದ ಸರಣಿ ನಿರ್ದೇಶನ ಮತ್ತು ನಿರಂತರ ಮೇಲ್ವಿಚಾರಣೆಯ ಹೊರತಾಗಿಯೂ, 4,984 ಪ್ರಕರಣಗಳು ಬಾಕಿ ಉಳಿದಿವೆ. ಅವುಗಳಲ್ಲಿ 1,899 ಪ್ರಕರಣಗಳು 5 ವರ್ಷಕ್ಕಿಂತ ಹಳೆಯವುಗಳಾಗಿವೆ. ಡಿಸೆಂಬರ್ 2018 ರಲ್ಲಿ  4,110 ಪ್ರಕರಣಗಳು ಬಾಕಿ ಇತ್ತು. ಆದರೆ 2,775 ಪ್ರಕರಣಗಳ ವಿಲೇವಾರಿ ನಂತರವೂ, ಸಂಸದರು/ಶಾಸಕರ ವಿರುದ್ಧದ ಪ್ರಕರಣಗಳು ಅಕ್ಟೋಬರ್ 2020 ರ ವೇಳೆಗೆ  4,984 ಕ್ಕೆ ಏರಿದೆ ಎಂದು ವರದಿ ಹೇಳಿದೆ. 4,984 ಪ್ರಕರಣಗಳಲ್ಲಿ 3,322 ಮ್ಯಾಜಿಸ್ಟ್ರೇಟ್ ಪ್ರಕರಣಗಳು ಮತ್ತು 1,651 ಸೆಷನ್ಸ್ ಪ್ರಕರಣಗಳಾಗಿವೆ ಎಂದು ಹಿರಿಯ ವಕೀಲ ಮತ್ತು ಅಮಿಕಸ್ ಕ್ಯೂರಿ ವಿಜಯ್ ಹನ್ಸಾರಿಯಾ (Vijay Hansaria) ಸಲ್ಲಿಸಿದ ವರದಿ ತಿಳಿಸಿದೆ.

ಬಿಜೆಪಿ ಕಾಂಗ್ರೆಸ್‌ ಸೇರಿ ಅಭ್ಯರ್ಥಿಗಳ ಕ್ರಿಮಿನಲ್‌ ಹಿನ್ನೆಲೆ ಬಹಿರಂಗ ಮಾಡದ 9 ಪಕ್ಷಕ್ಕೆ ದಂಡ!

ಅಂತಹ ಬಾಕಿ ಉಳಿದಿರುವ ಪ್ರಕರಣಗಳಲ್ಲಿ 1,899 ಪ್ರಕರಣಗಳು ಐದು ವರ್ಷಕ್ಕಿಂತ ಹಳೆಯದಾಗಿದೆ.  ಹಾಗೆಯೇ 1,475 ಪ್ರಕರಣಗಳು ಎರಡರಿಂದ ಐದು ವರ್ಷಗಳ ಅವಧಿಯಲ್ಲಿ ಬಾಕಿ ಉಳಿದಿವೆ ಎಂದು ವರದಿಯು ಬಹಿರಂಗಪಡಿಸಿದೆ. ಕಾನೂನು ರೂಪಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ವಿಚಾರಣೆ ಮಾಡಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ಕೋರಿ ವಕೀಲ ಮತ್ತು ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಉಪಾಧ್ಯಾಯ (Ashwini Kumar Upadhyay) ಅವರು 2016 ರಲ್ಲಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಈ ಮಾಹಿತಿಯನ್ನು ಒದಗಿಸಲಾಗಿದೆ. ಶಾಸಕಾಂಗ ಮತ್ತು ಕಾರ್ಯಾಂಗದಿಂದ ಶಿಕ್ಷೆಗೊಳಗಾದ ವ್ಯಕ್ತಿಗಳನ್ನು ವಜಾ ಮಾಡುವಂತೆ ಈ ಮನವಿಯಲ್ಲಿ ಕೇಳಲಾಗಿದೆ.

ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಹೆಚ್ಚು ಹೆಚ್ಚು ವ್ಯಕ್ತಿಗಳು ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಸ್ಥಾನಗಳನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ ಎಂದು ಈ ಮಾಹಿತಿ ಬಹಿರಂಗಪಡಿಸಿದೆ. ಆದ್ದರಿಂದ ಬಾಕಿ ಇರುವ ಅಪರಾಧ ಪ್ರಕರಣಗಳ ತ್ವರಿತ ವಿಲೇವಾರಿಗೆ ತುರ್ತು ಮತ್ತು ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ಹಂಸಾರಿಯಾ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.

ವಕೀಲರು ‘ಕೀಳು’ ಪದ ಬಳಸಿದರೆ ಸಸ್ಪೆಂಡ್: ಹೊಸ ನಿಯಮ ಜಾರಿ!

ಈ ಹಿನ್ನೆಯಲ್ಲಿ ಅಮಿಕಸ್ ಕ್ಯೂರಿ ನ್ಯಾಯಾಲಯದಿಂದ ಈ ಕೆಳಗಿನ ನಿರ್ದೇಶನಗಳನ್ನು ಕೋರಿದೆ. 

ಸಂಸದರು, ಶಾಸಕರ ವಿರುದ್ಧದ ಪ್ರಕರಣಗಳನ್ನು ವಿಚಾರಣೆ ನಡೆಸುವ ನ್ಯಾಯಾಲಯಗಳು ಈ ಪ್ರಕರಣಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತವೆ. ಅಂತಹ ಪ್ರಕರಣಗಳ ವಿಚಾರಣೆ ಮುಗಿದ ನಂತರವೇ ಇತರ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗುವುದು. ಸೆಕ್ಷನ್ 309 ಸಿಆರ್‌ಪಿಸಿ ಪ್ರಕಾರ ವಿಚಾರಣೆಯನ್ನು ದಿನಂಪ್ರತಿ ನಡೆಸಲಾಗುವುದು. ಕೆಲಸದ ಅಗತ್ಯ ಹಂಚಿಕೆಯನ್ನು ಎರಡು ವಾರಗಳಲ್ಲಿ ಹೈಕೋರ್ಟ್ ಮತ್ತು/ಅಥವಾ ಪ್ರತಿ ಜಿಲ್ಲೆಯ ಪ್ರಧಾನ ಸೆಷನ್ಸ್ ನ್ಯಾಯಾಧೀಶರು ಮಾಡುತ್ತಾರೆ.

ಪ್ರಾಸಿಕ್ಯೂಷನ್ (prosecution) ಮತ್ತು ಡಿಫೆನ್ಸ್ ಎರಡೂ ಪ್ರಕರಣದ ವಿಚಾರಣೆಯೊಂದಿಗೆ ಸಹಕರಿಸಬೇಕು ಮತ್ತು ಯಾವುದೇ ಮುಂದೂಡಿಕೆಯನ್ನು ನೀಡಬಾರದು. ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು/ಅಥವಾ ಪ್ರಾಸಿಕ್ಯೂಷನ್ ತ್ವರಿತ ವಿಚಾರಣೆಯಲ್ಲಿ ಸಹಕರಿಸಲು ವಿಫಲವಾದಲ್ಲಿ, ವಿಷಯವನ್ನು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ವರದಿ ಮಾಡಬೇಕು ಅವರು ಅಗತ್ಯ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಆರೋಪಿಯು ವಿಚಾರಣೆಯನ್ನು ವಿಳಂಬಗೊಳಿಸಿದರೆ, ಅವನ ಜಾಮೀನನ್ನು ರದ್ದುಗೊಳಿಸಲಾಗುತ್ತದೆ.

ವಿಚಾರಣಾ ನ್ಯಾಯಾಲಯವು ಆಯಾ ಹೈಕೋರ್ಟ್‌ಗಳ ಮುಂದೆ ಐದು ವರ್ಷಗಳಿಗಿಂತ ಹೆಚ್ಚು ಕಾಲ ವಿಚಾರಣೆಗೆ ಬಾಕಿ ಇರುವ ಪ್ರತಿಯೊಂದು ಪ್ರಕರಣಗಳ ಕುರಿತು ವಿಳಂಬ ಆಗಿರುವುದಕ್ಕೆ ಕಾರಣಗಳ ಬಗ್ಗೆ ವರದಿಯನ್ನು ಕಳುಹಿಸಬೇಕು ಮತ್ತು ಪರಿಹಾರ ಕ್ರಮಗಳನ್ನು ಸೂಚಿಸಬೇಕು. 2020 ರ ಸೆಪ್ಟೆಂಬರ್ 16 ರ  ಆದೇಶದ ಪ್ಯಾರಾ 18 ರ ಪರಿಭಾಷೆಯಲ್ಲಿ ನೋಂದಾಯಿಸಲಾದ ಸು ಮೋಟೋ (suo motu) ರಿಟ್ ಅರ್ಜಿಗಳಲ್ಲಿ ನ್ಯಾಯಾಂಗದ ಕಡೆಯಿಂದ ಹೈಕೋರ್ಟ್ ಈ ವರದಿಗಳನ್ನು ಪರಿಗಣಿಸುತ್ತದೆ ಮತ್ತು ವಿಚಾರಣೆಯ ನಿಶ್ಚಲತೆಯನ್ನು ತೆಗೆದುಹಾಕಲು ಸೂಕ್ತ ಆದೇಶಗಳನ್ನು ನೀಡುತ್ತದೆ. 

ಕೇಂದ್ರ ಸರ್ಕಾರವು ವರ್ಚುವಲ್ ಮೋಡ್ (virtual mode) ಮೂಲಕ ಅಂದರೆ ವಿಡಿಯೋ ಕಾನ್ಫರೆನ್ಸ್ ಸೌಲಭ್ಯಗಳ ಲಭ್ಯತೆಯನ್ನು ಸುಲಭಗೊಳಿಸುವ ಮೂಲಕ ನ್ಯಾಯಾಲಯಗಳ ಸುಗಮ ಕಾರ್ಯನಿರ್ವಹಣೆಗಾಗಿ ಹಣವನ್ನು ಒದಗಿಸುತ್ತದೆ. ಹೈಕೋರ್ಟ್‌ಗಳು (High Courts) ಈ ನಿಟ್ಟಿನಲ್ಲಿ ಭಾರತ ಸರ್ಕಾರದ ಕಾನೂನು ಕಾರ್ಯದರ್ಶಿಗೆ ಅಗತ್ಯವಿರುವ ನಿಧಿಯ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಬೇಕು, ಪ್ರಸ್ತಾವನೆಯ ಎರಡು ವಾರಗಳಲ್ಲಿ ಕೇಂದ್ರ ಸರ್ಕಾರದಿಂದ ನಿಧಿ ಲಭ್ಯವಾಗುವಂತೆ ಮಾಡುತ್ತದೆ. ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಹಣವು ಹಂಚಿಕೆಯ ಮಾದರಿಯಂತೆ ರಾಜ್ಯ ಸರ್ಕಾರದೊಂದಿಗೆ (State government) ಅಂತಿಮ ಹೊಂದಾಣಿಕೆಗೆ ಒಳಪಟ್ಟಿರುತ್ತದೆ.

2021 ರ ಆಗಸ್ಟ್ 25ರ  ಆದೇಶದಂತೆ ದಾಖಲೆ ಸಲ್ಲಿಕೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (Enforcement Directorate), ಕೇಂದ್ರೀಯ ತನಿಖಾ ದಳ (Central Bureau of Investigation) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಗಳ (National Investigation Agency) ಮುಂದೆ ಬಾಕಿ ಇರುವ ಪ್ರಕರಣಗಳ ತನಿಖೆಯನ್ನು ಮೇಲ್ವಿಚಾರಣೆ ಮಾಡಲು ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಾಧೀಶರು ಅಥವಾ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿ ಮೇಲ್ವಿಚಾರಣಾ ಸಮಿತಿಯನ್ನು ರಚಿಸಬಹುದು. 

2020 ನವೆಂಬರ್ 4ರ ಆದೇಶದ ಪ್ರಕಾರ, ಸಾಕ್ಷಿಗಳಿಗೆ, '2018ರ ಸಾಕ್ಷಿ ಸಂರಕ್ಷಣಾ ಯೋಜನೆ'ಯ ಪ್ರಯೋಜನವನ್ನು ಲಭ್ಯವಾಗುವಂತೆ ಎಲ್ಲಾ ಬಾಕಿ ಉಳಿದಿರುವ ಪ್ರಕರಣಗಳಲ್ಲಿ ನಿರ್ದಿಷ್ಟ ಆದೇಶವನ್ನು ರವಾನಿಸಲು ವಿಚಾರಣಾ ನ್ಯಾಯಾಲಯಗಳಿಗೆ ನಿರ್ದೇಶಿಸಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!