Coronavirus: ದೆಹಲಿ ಸೇರಿದಂತೆ ಮತ್ತಷ್ಟು ರಾಜ್ಯಗಳಲ್ಲಿ ಕೋವಿಡ್‌ ಅಬ್ಬರ

By Kannadaprabha News  |  First Published Jan 8, 2022, 8:47 AM IST

ರಾಷ್ಟ್ರರಾಜಧಾನಿ ದೆಹಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಶುಕ್ರವಾರವೂ ಕೊರೋನಾ ಮಹಾ ಸ್ಫೋಟವಾಗಿದೆ. ಮುಂಬೈನಲ್ಲಿ ಶುಕ್ರವಾರ ಒಂದೇ ದಿನ 20,971 ಸೇರಿದಂತೆ ಮಹಾರಾಷ್ಟ್ರದಲ್ಲಿ 40925 ಕೊರೋನಾ ಕೇಸ್‌ಗಳು ದೃಢಪಟ್ಟಿದೆ.


ನವದೆಹಲಿ (ಜ. 08): ರಾಷ್ಟ್ರರಾಜಧಾನಿ ದೆಹಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಶುಕ್ರವಾರವೂ ಕೊರೋನಾ (Corona Virus) ಮಹಾ ಸ್ಫೋಟವಾಗಿದೆ. ಮುಂಬೈನಲ್ಲಿ ಶುಕ್ರವಾರ ಒಂದೇ ದಿನ 20,971 ಸೇರಿದಂತೆ ಮಹಾರಾಷ್ಟ್ರದಲ್ಲಿ 40925 ಕೊರೋನಾ ಕೇಸ್‌ಗಳು ದೃಢಪಟ್ಟಿದ್ದು, ದೇಶದಲ್ಲಿ ಕೊರೋನಾ ಹಾವಳಿ ಆರಂಭವಾದಾಗಿನಿಂದ ಈವರೆಗಿನ ಸಾರ್ವಕಾಲಿಕ ಗರಿಷ್ಠ ಪ್ರಕರಣವಿದು. ಇದರೊಂದಿಗೆ ಹೊಸ ವರ್ಷದ ಮೊದಲ ದಿನವಾದ ಜ.1ರಿಂದ ಈವರೆಗೆ 230.40ರಷ್ಟು ಪ್ರಮಾಣದ ಕೊರೋನಾ ಪ್ರಕರಣಗಳು ದಾಖಲಾದಂತಾಗಿದೆ. ಇದರೊಂದಿಗೆ ವಾಣಿಜ್ಯ ರಾಜಧಾನಿಯಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 8,74,780ಕ್ಕೆ ಜಿಗಿದಿದೆ.

ಮತ್ತೆ 1.41 ಲಕ್ಷ ಕೇಸ್‌ ಪತ್ತೆ: ಭಾರತದಲ್ಲಿ ಕೋವಿಡ್‌ ಸ್ಫೋಟ ಮುಂದುವರೆದಿದ್ದು, ಶುಕ್ರವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ಮತ್ತೆ 1,40,021 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದು ಕಳೆದ 214 ದಿನಗಳ (7 ತಿಂಗಳ) ಗರಿಷ್ಠ ಸಂಖ್ಯೆಯಾಗಿದೆ. ಅಲ್ಲದೆ ಗುರುವಾರ ವರದಿಯಾಗಿದ್ದ ಪ್ರಕರಣಗಳಿಗಿಂತ ಶೇ.28ರಷ್ಟು ಅಧಿಕ. ಇದೇ ಅವಧಿಯಲ್ಲಿ 302 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಹೊಸ ಸೋಂಕಿತರೂ ಸೇರಿ ಸಕ್ರಿಯ ಸೋಂಕಿನ ಪ್ರಮಾಣ 3.71 ಲಕ್ಷಕ್ಕೆ ಹೆಚ್ಚಿದೆ. ಚೇತರಿಕೆ ಪ್ರಮಾಣ ಶೇ.97.57ಕ್ಕೆ ಕುಸಿದಿದೆ. ದೈನಂದಿನ ಸೋಂಕಿನ ದರ ಶೇ.7.74ಕ್ಕೆ ಏರಿಕೆಯಾಗಿದೆ.

Tap to resize

Latest Videos

Lockdown ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಆಗುತ್ತಾ? ಸ್ಪಷ್ಟನೆ ಕೊಟ್ಟ ಸಚಿವ ಸುಧಾಕರ್

ಹೊಸ ಕೇಸುಗಳೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3.52 ಕೋಟಿಗೆ ಏರಿಕೆಯಾಗಿದೆ. ಒಟ್ಟು ಸಾವಿಗೀಡಾದವರ ಸಂಖ್ಯೆ 4,83,187ಕ್ಕೆ ತಲುಪಿದೆ. ಒಟ್ಟು ಸೋಂಕಿತರ ಪೈಕಿ 3.43 ಕೋಟಿ ಮಂದಿ ಗುಣಮುಖರಾಗಿದ್ದಾರೆ. ಈ ನಡುವೆ 149.6 ಕೋಟಿ ಡೋಸ್‌ ಲಸಿಕೆ (Vaccine) ವಿತರಣೆ ಮಾಡಲಾಗಿದೆ.

3000 ದಾಟಿದ ಒಮಿಕ್ರೋನ್‌: ದೇಶದಲ್ಲಿ ಶುಕ್ರವಾರ ಒಂದೇ ದಿನ 377 ಒಮಿಕ್ರೋನ್‌(Omicron) ರೂಪಾಂತರಿ ವೈರಸ್‌ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಒಟ್ಟು ಒಮಿಕ್ರೋನ್‌ ಸೋಂಕಿತರ ಸಂಖ್ಯೆ 3007ಕ್ಕೆ ಏರಿಕೆಯಾಗಿದೆ. ಈ ಪೈಕಿ ಮಹಾರಾಷ್ಟ್ರದಲ್ಲಿ 896, ದೆಹಲಿಯಲ್ಲಿ 465, ಕರ್ನಾಟಕದಲ್ಲಿ 333, ರಾಜಸ್ಥಾನದಲ್ಲಿ 291, ಕೇರಳದಲ್ಲಿ 284 ಮತ್ತು ಗುಜರಾತಲ್ಲಿ 204 ಕೇಸ್‌ ಪತ್ತೆಯಾಗಿದೆ. ಒಟ್ಟು ಸೋಂಕಿತರ ಪೈಕಿ 1,199 ಮಂದಿ ಗುಣಮುಖರಾಗಿದ್ದಾರೆ.

Vaccination 150 Cr: ದೇಶದಲ್ಲಿ 150 ಕೋಟಿ ಡೋಸ್, ಇದು ಭಾರತದ ಸಾಧನೆ ಎಂದ ಪ್ರಧಾನಿ ಮೋದಿ

ಬೂಸ್ಟರ್‌ ಡೋಸ್‌ಗೆ ಇಂದಿನಿಂದ ನೋಂದಣಿ ಆರಂಭ: ಕೋರೋನಾ ವಾರಿಯರ್‌ಗಳು ಮತ್ತು 60 ವರ್ಷ ದಾಟಿದ ಕಾಯಿಲೆ ಪೀಡಿತರಿಗೆ ಬೂಸ್ಟರ್‌ ಡೋಸ್‌ (Booster Dose) (ಮುಂಜಾಗ್ರತಾ ಡೋಸ್‌) ಲಸಿಕೆ ನೋಂದಣಿ ಶನಿವಾರ ಸಂಜೆಯಿಂದ ಆರಂಭವಾಗಲಿದೆ. ಸ್ಥಳದಲ್ಲೇ ನೋಂದಣಿ ಕಾರ್ಯ ಜ.10ರಿಂದ ಆರಂಭವಾಗಲಿದೆ. ಈಗಾಗಲೇ 2 ಡೋಸ್‌ ಪಡೆದಿರುವುದರಿಂದ ನೇರವಾಗಿ ಲಸಿಕಾ ಕೇಂದ್ರಗಳಿಗೆ ಹೋಗಿಯೂ ಲಸಿಕೆ ಪಡೆದುಕೊಳ್ಳಬಹುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ. ಜನರಿಗೆ ಜ.10ರಿಂದ ಲಸಿಕಾ ಅಭಿಯಾನ (Vaccinde Drive) ಆರಂಭವಾಗಲಿದೆ.

ರಾಜ್ಯ ಕೇಸ್‌ ಏರಿಕೆ
ಮಹಾರಾಷ್ಟ್ರ 40925 ಶೇ.12.84
ದೆಹಲಿ 17,335 ಶೇ.17.73
ಪ. ಬಂಗಾಳ 18,213 ಶೇ.11
ಕೇರಳ 5296 ಶೇ.14

click me!