
ನವದೆಹಲಿ: ಇಲ್ಲಿ ನಡೆಯಲಿರುವ ಜಿ-20 ಶೃಂಗಸಭೆಗೆ ಆಗಮಿಸುತ್ತಿರುವ ವಿದೇಶಿ ಗಣ್ಯರಿಗಾಗಿ ರಾಷ್ಟ್ರ ರಾಜಧಾನಿ ವಲಯದಲ್ಲಿ 30ಕ್ಕೂ ಹೆಚ್ಚು ಹೋಟೆಲ್‌ಗಳನ್ನು ಕಾಯ್ದಿರಿಸಲಾಗಿದೆ. ಈ ಸಭೆಯಲ್ಲಿ ಭಾಗಿಯಾಗುತ್ತಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಐಟಿಸಿ ಮೌರ್ಯ ಶರ್ಟನ್ ಹೋಟೆಲಲ್ಲಿ ವಾಸ್ತವ್ಯಕ್ಕೆ ವ್ಯಸಸ್ಥೆ ಮಾಡಲಾಗಿದೆ. ಇದರಲ್ಲಿನ 14ನೇ ಮಹಡಿಯಲ್ಲಿ ಬೈಡೆನ್ ಹಾಗೂ ಉಳಿದ 400 ಕೊಠಡಿಗಳಲ್ಲಿ ಅವರ ಭದ್ರತಾ ಸಿಬ್ಬಂದಿ ಉಳಿದುಕೊಳ್ಳಲಿದ್ದಾರೆ. ಬ್ರಿಟನ್ ಪ್ರಧಾನಿ ರಿಷಿ ಸುನಕ್ ಶಾಂಗ್ರಿಲಾ ಹೋಟೆಲ್‌ನಲ್ಲಿ ಉಳಿದುಕೊಳ್ಳಲಿದ್ದಾರೆ. ಅದೇ ರೀತಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಅವರಿಗೆ ಕ್ಲಾರಿಡ್ಜಸ್ ಹೊಟೇಲ್‌ನಲ್ಲಿ ರೂಮ್ ಬುಕ್ ಮಾಡಲಾಗಿದೆ. ಹಾಗೆಯೇ ಆಸ್ಪ್ರೇಲಿಯಾ ಪ್ರಧಾನಿ ಇಂಪೀರಿಯಲ್ ಹೋಟೆಲ್‌ನಲ್ಲಿ ಉಳಿದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಿ20 ಶೃಂಗಕ್ಕೆ ಬರಲ್ಲ ಪುಟಿನ್
ಮುಂದಿನ ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಜಿ20 ದೇಶಗಳ ಶೃಂಗ ಸಭೆಯಲ್ಲಿ ತಾವು ಬರಲು ಆಗುವುದಿಲ್ಲ. ತಮ್ಮ ಬದಲು ರಷ್ಯಾ ವಿದೇಶಾಂಗ ಸಚಿವ ಸಗೈಋು ಲಾವ್ರೋವ್‌ರನ್ನು ಕಳಿಸಲಾಗುವುದು ಎಂದು ಪುಟಿನ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿ ತಿಳಿಸಿದ್ದಾರೆ.
ಪುಟಿನ್ ವಿರುದ್ಧ ಉಕ್ರೇನ್ ಯುದ್ಧಾಪರಾಧಕ್ಕಾಗಿ ಅಂತಾರಾಷ್ಟ್ರೀಯ ಕೋರ್ಟ್ ವಾರಂಟ್ (international court warrant) ಇದೆ. ರಷ್ಯಾ ಬಿಟ್ಟು ಬೇರೆ ದೇಶಕ್ಕೆ ಹೋದರೆ ಬಂಧನದ ಭೀತಿ ಇದೆ. ಹೀಗಾಗಿ ಪುಟಿನ್ ಹೇಳಿಕೆಗೆ ಮಹತ್ವ ಬಂದಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಪ್ರಧಾನಿ ಕಾರ್ಯಾಲಯ, ‘ಉಭಯ ನಾಯಕರು ಸೋಮವಾರ ದೂರವಾಣಿ ಮಾತುಕತೆ ನಡೆದಿರು. ಈ ವೇಳೆ ದ್ವಿಪಕ್ಷೀಯ ಸಹಕಾರದ ಕುರಿತು ಚರ್ಚಿಸಿದ್ದರ ಜೊತೆಗೆ, ಪರಸ್ಪರರಿಗೆ ಸಂಬಂಧಿತ ಪ್ರಾಂತೀಯ ಮತ್ತು ಜಾಗತಿಕ ವಿಷಯಗಳ ಕುರಿತೂ ಸಮಾಲೋಚಿಸಿದರು. ಈ ವೇಳೆ ಸೆ.9-10ರಂದು ದೆಹಲಿಯಲ್ಲಿ ನಡೆಯಲಲಿರುವ ಜಿ20 ಶೃಂಗ (G20 summit)ಸಭೆಯಲ್ಲಿ ಭಾಗಿಯಾಗಲಾರದ ಕುರಿತು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ರಷ್ಯಾದ ವಿದೇಶಾಂಗ ಸಚಿವರು ರಷ್ಯಾವನ್ನು ಪ್ರತಿನಿಧಿಸಲಿದ್ದಾರೆ ಎಂಬ ಮಾಹಿತಿ ನೀಡಿದರು. ಈ ವೇಳೆ ಭಾರತದ ಜಿ20 ಅಧ್ಯಕ್ಷತೆ ಅವಧಿಯಲ್ಲಿ ಕೈಗೊಂಡ ಕ್ರಮಗಳಿಗೆ ನಿರಂತರ ಬೆಂಬಲ ನೀಡುತ್ತಿರುವುದರ ಬಗ್ಗೆ ರಷ್ಯಾಕ್ಕೆ ಮೋದಿ ಧನ್ಯವಾದ ತಿಳಿಸಿದರು’ ಎಂದು ಮಾಹಿತಿ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ