ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭಾ ಚುನಾವಣೆಗಳು ಮುಕ್ತಾಯಗೊಂಡಿದ್ದು, ಕ್ರಮವಾಗಿ ಶೇ.65 ಹಾಗೂ ಶೇ.68ರಷ್ಟು ಮತದಾನವಾಗಿದೆ. ಮಹಾರಾಷ್ಟ್ರದಲ್ಲಿ ಕಳೆದ ಚುನಾವಣೆಗಿಂತ ಈ ಬಾರಿ ಶೇ.4ರಷ್ಟು ಮತದಾನ ಹೆಚ್ಚಾಗಿದೆ.
ಮುಂಬೈ: ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭೆ ಚುನಾವಣೆ ಬುಧವಾರ ಮುಕ್ತಾಯಗೊಂಡಿದ್ದು, ಕ್ರಮವಾಗಿ ಶೇ.65 ಹಾಗೂಶೇ.68 ಮತದಾನವಾಗಿದೆ. ಇದೇ ವೇಳೆ, 4 ರಾಜ್ಯಗಳ 15 ವಿಧಾನ ಸಭೆಚುನಾವಣೆಯೂ ನಡೆದಿದ್ದು ಒಟ್ಟಾರೆ ಶೇ.50ರಿಂದ ಶೇ.70ರವರೆಗೆ ಹೆಚ್ಚು ಮತದಾನವಾಗಿದೆ. ಎಲ್ಲ ರಾಜ್ಯಗಳಲ್ಲಿ ನ.21ರಂದು ಮತ ಎಣಿಕೆ ನಡೆಯಲಿದೆ. ಈ ಮುನ್ನ ನ.13ರಂದು ನಡೆದ ವಯನಾಡ್ ಹಾಗೂ ಇತರ ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶ ಕೂಡ ಅಂದೇ ಪ್ರಕಟವಾಗಲಿದೆ. ಜಾರ್ಖಂಡ್‌ನಲ್ಲಿ 2ನೇ ಹಂತದಲ್ಲಿ 38 ಕ್ಷೇತ್ರಗಳಿಗೆ ತುರುಸಿನ ಮತದಾನ ನಡೆದಿದೆ.ಕಳೆದ ಸಲ ಇಲ್ಲಿಶೇ.63 ರಷ್ಟು ಮತದಾನ ಆಗಿತ್ತು. ಇನ್ನು ಮಹಾರಾಷ್ಟ್ರದ ನಗರ ಭಾಗಗಳಲ್ಲಿ ಮತದಾನ ಕ್ಷೀಣವಾಗಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಉತ್ಸಾಹದಿಂದ ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಮಹಾರಾಷ್ಟ್ರದಲ್ಲಿ ಕಳೆದ ಚುನಾವಣೆಗಿಂತ ಈ ಸಲ ಶೇ.4ರಷ್ಟು ಮತದಾನ ಹೆಚ್ಚಾಗಿದೆ. ಕಳೆದ ಸಲ ಶೇ.61 ಮತದಾನ ಆಗಿತ್ತು. ಮಹಾರಾಷ್ಟ್ರದಲ್ಲಿ ಮಹಾಯುತಿ ಹಾಗೂ ಮಹಾ ವಿಕಾಸ ಅಘಾಡಿ ಕೂಟಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಜಾರ್ಖಂಡ್‌ನಲ್ಲಿ ಕಾಂಗ್ರೆಸ್-ಜೆಎಂಎಂ ಕೂಟ ಹಾಗೂ ಬಿಜೆಪಿ ನಡುವೆ ಹಣಾಹಣಿ ಇದೆ.
ಇದನ್ನೂ ಓದಿ: Exit Polls: ಮಹಾಯುತಿಗೆ ಮಹಾರಾಷ್ಟ್ರ, ಬಿಜೆಪಿಗೆ ಜಾರ್ಖಂಡ್ ಎಂದ ಚುನಾವಣೋತ್ತರ ಸಮೀಕ್ಷೆ
ತಾರೆಯರು, ಗಣ್ಯರಮತ: ಮುಂಬೈನಲ್ಲಿ ತಾರೆಯರು ಹಾಗೂ ಗಣ್ಯರು ಭಾರಿ ಸಂಖ್ಯೆಯಲ್ಲಿ ಮತ ಹಾಕಿದರು. ನಟ ಸಲ್ಮಾನ್ ಖಾನ್, ಶಾರುಖ್ ಖಾನ್, ಅಕ್ಷಯ್ ಕುಮಾರ್, ರಣಬೀರ್ ಕಪೂರ್, ರಾಜ್‌ಕುಮಾರ್ ರಾವ್, ಫರ್ಹಾನ್ ಅಖರ್, ರೋಯಾ ಅಖರ್, ಸಾಹಿತಿ ಗುಲ್ಬಾರ್, ಕರೀನಾ ಕಪೂರ್, ಸೈಫ್ ಅಲಿ ಖಾನ್, ಶ್ರದ್ದಾ ಕಪೂರ್, ಮಾಧುರಿ ದೀಕ್ಷಿತ್, ಗೋವಿಂದ, ಜಾನ್ ಅಬ್ರಹಾಂ, ಅನನ್ಯಾ ಪಾಂಡೆ, ಅರ್ಜುನ್ ಕಪೂರ್, ಸೊನಾಲಿ ಬೇಂದ್ರೆ, ಅನುಪಮ್ ಖೇರ್, ರಿತೇಶ್ ದೇಶ್ಮುಖ್, ಜೆನಿಲಿಯಾ, ಸೋನು ಸೂದ್, ಸುನಿಲ್ ಶೆಟ್ಟಿ, ಕೈಲಾಶ್ ಖೇರ್ ಮತದಾನ ಮಾಡಿದರು. ಉದ್ಯಮಿಗಳಲ್ಲಿ ಮುಕೇಶ್ ಅಂಬಾನಿ, ಆನಂದ ಮಹೀಂದ್ರಾ, ಮೊದಲಾದವರಿದ್ದರು.
ಇದನ್ನೂ ಓದಿ: ಕರ್ನಾಟಕ ಉಪಚುನಾವಣೆ 2024: ಪಿ-ಮಾರ್ಕ್ ಸಮೀಕ್ಷೆ ಪ್ರಕಾರ ಗೆಲ್ಲುವುದು ಇವರೇ ನೋಡಿ!