ಜಾಲತಾಣದಲ್ಲಿ ಲೈಕ್ ಗಿಟ್ಟಿಸಿಕೊಳ್ಳಲು ಕೋಲ್ಕತಾದ ಮಾಡೆಲ್ ಒಬ್ಬಳು, ದೆಹಲಿಯ ಪ್ರಸಿದ್ಧ ಇಂಡಿಯಾ ಗೇಟ್ ಮುಂದೆ ಬಿಳಿ ಟವೆಲ್ ಸುತ್ತಿಕೊಂಡು ಡಾನ್ಸ್ ಮಾಡಿದ್ದಾಳೆ. ಈ ವಿಡಿಯೋ ವೈರಲ್ ಆಗಿದ್ದು, ಇಂಡಿಯಾ ಗೇಟ್‌ನಂಥ ಸ್ಥಳದಲ್ಲಿ ಹೀಗೆ ಮಾಡಿದ್ದಕ್ಕೆ ನೆಟ್ಟಿಗರು ಆಕೆಯ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ನವದೆಹಲಿ (ನ.21): ಜಾಲತಾಣದಲ್ಲಿ ಲೈಕ್ ಗಿಟ್ಟಿಸಿಕೊಳ್ಳಲು ಕೋಲ್ಕತಾದ ಮಾಡೆಲ್ ಒಬ್ಬಳು, ದೆಹಲಿಯ ಪ್ರಸಿದ್ಧ ಇಂಡಿಯಾ ಗೇಟ್ ಮುಂದೆ ಬಿಳಿ ಟವೆಲ್ ಸುತ್ತಿಕೊಂಡು ಡಾನ್ಸ್ ಮಾಡಿದ್ದಾಳೆ. ಈ ವಿಡಿಯೋ ವೈರಲ್ ಆಗಿದ್ದು, ಇಂಡಿಯಾ ಗೇಟ್‌ನಂಥ ಸ್ಥಳದಲ್ಲಿ ಹೀಗೆ ಮಾಡಿದ್ದಕ್ಕೆ ನೆಟ್ಟಿಗರು ಆಕೆಯ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
2017ರ ಮಿಸ್ ಕೋಲ್ಕತಾ ವಿಜೇತೆ ಸನ್ನತಿ ಮಿತ್ರಾ, ಇಂಡಿಯಾ ಗೇಟ್ ಮುಂದೆ ಟವೆಲ್ ಸುತ್ತಿಕೊಂಡು ವಿಡಿಯೋ ಮಾಡಿ, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡವಳು. ಅಂತಾರಾಷ್ಟ್ರೀಯ ಪುರುಷರ ದಿನದಂದು ಈ ವಿಡಿಯೋ ಹಂಚಿಕೊಂಡು ಶುಭಾಶಯ ಕೋರಿದ್ದಾರೆ.
ದುರ್ಗಾಪೂಜೆಯಲ್ಲಿ ಅರೆ ಬೆತ್ತಲು, ಜಿಮ್ನಲ್ಲಿ ಸೀರೆಯುಟ್ಟು ವರ್ಕ್ಔಟ್: ಮಿಸ್ ಕೋಲ್ಕತಾ ವಿಡಿಯೋ ವೈರಲ್!
ಬರೀ ಟವೆಲ್ ಸುತ್ತಿಕೊಂಡು ಡಾನ್ಸ್ ಮಾಡುತ್ತಾ ಸನ್ನತಿ ಬಾಲಿವುಡ್‌ನ ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ’ಯ ಹಾಡಿಗೆ ಲಿಪ್ ಸಿಂಕ್ ಮಾಡಿದ್ದಾರೆ. ವಿಡಿಯೋ ಹಂಚಿಕೊಂಡ 2 ಗಂಟೆಯಲ್ಲೇ 2 ಲಕ್ಷ ವೀಕ್ಷಣೆ ಕಂಡಿದೆ.
ಇದಕ್ಕೂ ಮುನ್ನ ಸನ್ನತಿ, ತನ್ನಿಬ್ಬರು ಸ್ನೇಹಿತರೊಂದಿಗೆ ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಎದೆಸೀಳು ಕಾಣುವ ಅಸಭ್ಯ ಬಟ್ಟೆ ಧರಿಸಿ ವಿವಾದ ಸೃಷ್ಟಿಸಿದ್ದಳು.