ವಕ್ಫ್‌ ಕಾಯ್ದೆ ವಿರುದ್ಧ ಪಶ್ಚಿಮ ಬಂಗಾಳ ಧಗಧಗ: 3 ಬಲಿ, ತನಿಖೆಗೆ ಬಿಜೆಪಿ ಪಟ್ಟು

ಪಶ್ಚಿಮ ಬಂಗಾಳದಲ್ಲಿ ವಕ್ಫ್‌ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ 2ನೇ ದಿನವೂ ಹಿಂಸಾಚಾರಕ್ಕೆ ತಿರುಗಿದೆ. ಮುರ್ಷಿದಾಬಾದ್‌ ಶನಿವಾರ ಉದ್ವಿಗ್ನಗೊಂಡಿದ್ದು ಅಲ್ಲಲ್ಲಿ ಕಲ್ಲು ತೂರಾಟ, ಬೆಂಕಿ ಹಚ್ಚುವ ಕೃತ್ಯಗಳು ನಡೆದಿವೆ. 

3 death In Bengal Waqf Protests 5 More Border Force Companies Brought In gvd

ಕೋಲ್ಕತಾ (ಏ.13): ಪಶ್ಚಿಮ ಬಂಗಾಳದಲ್ಲಿ ವಕ್ಫ್‌ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ 2ನೇ ದಿನವೂ ಹಿಂಸಾಚಾರಕ್ಕೆ ತಿರುಗಿದೆ. ಮುರ್ಷಿದಾಬಾದ್‌ ಶನಿವಾರ ಉದ್ವಿಗ್ನಗೊಂಡಿದ್ದು ಅಲ್ಲಲ್ಲಿ ಕಲ್ಲು ತೂರಾಟ, ಬೆಂಕಿ ಹಚ್ಚುವ ಕೃತ್ಯಗಳು ನಡೆದಿವೆ. ಈ ವೇಳೆ 3 ಮಂದಿ ಬಲಿಯಾಗಿದ್ದಾರೆ. ಮುಸ್ಲಿಂ ಬಹುಸಂಖ್ಯಾತ ಜಿಲ್ಲೆ ಮುರ್ಷಿದಾಬಾದ್‌ನ ಸಮ್ಸರ್‌ಗಂಜ್‌ ಧುಲಿಯನ್‌ ಮತ್ತು ಸುಟಿ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಗಲಭೆ ನಡೆದಿದೆ. ಶುಕ್ರವಾರ ಕೂಡ ಅಲ್ಲಿ ಪ್ರತಿಭಟನಾಕಾರರು ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಿ, ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ್ದರು.  ಇದರ ಪರಿಣಾಮ ಹಲವು ಪ್ರಯಾಣಿಕರು ಮತ್ತು ಸಿಬ್ಬಂದಿ ಗಾಯಗೊಂಡಿದ್ದರು. ಶನಿವಾರವೂ ಅಲ್ಲಿ ಹಿಂಸಾಚಾರದ ಮುಂದುವರಿದಿದೆ. 

ಹಿಂದುಗಳ ಆಸ್ತಿಪಾಸ್ತಿಗಳು, ವಾಹನಗಳ ಮೇಲೆ ಒಂದು ನಿರ್ದಿಷ್ಟ ಸಮುದಾಯದ ಜನ ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಘಟನೆ ವೇಳೆ ಇಲ್ಲಿನ ಜಫರಾಬಾದ್ ಎಂಬಲ್ಲಿ ಚಾಕು ಇರಿತದಿಂದ ತಂದೆ-ಮಗ ಸಾವನ್ನಪ್ಪಿದ್ದಾರೆ ಹಾಗೂ ಓರ್ವ ವ್ಯಕ್ತಿ ಗುಂಡಿಗೆ ಬಲಿಯಾಗಿದ್ದಾನೆ. ಈ ಬಗ್ಗೆ ಎಡಿಜಿ ಜಾವೇದ್‌ ಶಮೀಮ್ ಪ್ರತಿಕ್ರಿಯಿಸಿದ್ದು , ‘ಸ್ಥಳೀಯರ ಪೊಲೀಸರರು ಆತನಿಗೆ ಗುಂಡು ಹಾರಿಸಿಲ್ಲ ಎನ್ನಿಸುತ್ತದೆ. ಬಿಎಸ್‌ಎಫ್‌ ಕಡೆಯಿಂದ ಆಗಿರಬಹುದು’ ಎಂದಿದ್ದಾರೆ. ಇನ್ನು ಹಿಂಸಾಚಾರದ ನಂತರ ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಂಡಿರುವ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಎಸ್‌ಎಫ್‌ ಪಡೆಯನ್ನು ನಿಯೋಜಿಸಲಾಗಿದೆ. ಶುಕ್ರವಾರ ನಡೆದ ಗಲಭೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಪೊಲೀಸರು ಸುಮಾರು 118 ಜನರನ್ನು ಬಂಧಿಸಿದ್ದಾರೆ.

Latest Videos

ಎನ್ಐಎ ತನಿಖೆಗೆ ಬಿಜೆಪಿ ಪಟ್ಟು: ಘಟನೆಯ ಎನ್ಐಎ ತನಿಖೆಗೆ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಆಗ್ರಹಿಸಿದ್ದು, ಕಲ್ಕತ್ತಾ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ‘ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರೇ ಹಿಂಸೆ ಪ್ರಚೋದಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ಲೇಡಿ ಅಘೋರಿ ಜೊತೆ ಸಹಜೀವನ.. ನನ್ನ ಗಂಡ ಅಘೋರಿನೇ ಎಂದ ಶ್ರೀವರ್ಷಿಣಿ!

ಭಾರಿ ಹಿಂಸಾಚಾರ: ವಕ್ಫ್‌ ತಿದ್ದುಪಡಿ ಕಾಯ್ದೆ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆಯು ಭಾರಿ ಹಿಂಸಾಚಾರಕ್ಕೆ ತಿರುಗಿದೆ. ಮುರ್ಶಿದಾಬಾದ್‌ನಲ್ಲಿ ಪ್ರತಿಭಟನಾಕಾರರು ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಿ, ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪರಿಣಾಮ ಹಲವು ಪ್ರಯಾಣಿಕರು ಮತ್ತು ಸಿಬ್ಬಂದಿ ಗಾಯಗೊಂಡಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ರಾಜ್ಯಪಾಲ ಸಿ.ವಿ.ಆನಂದಬೋಸ್‌ ಅವರು ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಕರೆ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೂ ಮಾಹಿತಿ ನೀಡಿದ್ದಾರೆ.

vuukle one pixel image
click me!