60000 ಗಡಿಗೆ ಕೊರೋನಾ ಸೋಂಕಿತರು| ನಿನ್ನೆ 2709 ಜನರಲ್ಲಿ ಹೊಸದಾಗಿ ಸೋಂಕು, 93 ಜನರ ಸಾವು| ಮಹಾರಾಷ್ಟ್ರ, ಗುಜರಾತ್, ದೆಹಲಿ, ತಮಿಳ್ನಾಡಲ್ಲಿ ಭಾರೀ ಏರಿಕೆ
ನವದೆಹಲಿ(ಮೇ.09): ಶುಕ್ರವಾರ ದೇಶಾದ್ಯಂತ 2709 ಕೊರೋನಾ ಪ್ರಕರಣ ಬೆಳಕಿಗೆ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 59100ಕ್ಕೆ ತಲುಪಿದೆ. ಈ ಮೂಲಕ ಮೇ 1 ರಿಂದ ನಿತ್ಯವೂ ಕನಿಷ್ಠ 2000ಕ್ಕಿಂತ ಹೆಚ್ಚು ಸೋಂಕು ದಾಖಲಾಗುವ ಬೆಳವಣಿಗೆ ಮುಂದುವರೆದಿದೆ. ಇನ್ನು ಶುಕ್ರವಾರ 93 ಜನ ಸಾವನ್ನಪ್ಪಿದ್ದು, ಈವರೆಗೆ ವೈರಸ್‌ಗೆ ಬಲಿಯಾದವರ ಸಂಖ್ಯೆ 1904ಕ್ಕೆ ತಲುಪಿದೆ.
10 ವರ್ಷದೊಳಗಿನ 34 ಮಕ್ಕಳಿಗೆ ಸೋಂಕು!
ದೇಶದಲ್ಲೇ ಅತಿ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿರುವ ಮಹಾರಾಷ್ಟ್ರದಲ್ಲಿ ಶುಕ್ರವಾರ 1080 ಹೊಸ ಪ್ರಕರಣ, 37 ಸಾವು ದಾಖಲಾಗಿದೆ. ಉಳಿದಂತೆ ತಮಿಳುನಾಡಲ್ಲಿ 600 ಸೋಂಕು, 3 ಸಾವು, ಗುಜರಾತ್‌ನಲ್ಲಿ 390 ಸೋಂಕು, 24 ಸಾವು, ಮಧ್ಯಪ್ರದೇಶದಲ್ಲಿ 89 ಸೋಂಕು, 2 ಸಾವು, ರಾಜಸ್ಥಾನದಲ್ಲಿ 62 ಸೋಂಕು, 1 ಸಾವು ದಾಖಲಾಗಿದೆ.
ಮಹಾ ಸ್ಫೋಟ: ಈ ನಡುವೆ ದೇಶದ ಮಹಾನಗರಗಳಲ್ಲಿ ಹೆಚ್ಚು ಸೋಂಕು ದಾಖಲಾಗುವ ಬೆಳವಣಿಗೆಯೂ ಮುಂದುವರೆದೆ. ಶುಕ್ರವಾರ ಮುಂಬೈನಲ್ಲಿ 748, ಅಹಮದಾಬಾದ್‌ನಲ್ಲಿ 269, ಪುಣೆಯಲ್ಲಿ 48, ಜೈಪುರದಲ್ಲಿ 26 ಹೊಸ ಸೋಂಕಿನ ಪ್ರಕರಣ ಬೆಳಕಿಗೆ ಬಂದಿದೆ.