Republic Day Celebration ಗಣರಾಜ್ಯೋತ್ಸವ ಪರೇಡ್‌ನಲ್ಲಿ ಈ ಸಲ 25 ಸ್ತಬ್ಧಚಿತ್ರ!

By Suvarna NewsFirst Published Jan 23, 2022, 5:30 AM IST
Highlights
  • 16 ಕವಾಯತು ತಂಡ, 17 ಬ್ಯಾಂಡ್‌ ಕೂಡ ಭಾಗಿ ಭಾಗಿ
  • ಕರ್ನಾಟಕದಿಂದ ಒಂದಲ್ಲ, ಎರಡು ಸ್ತಬ್ಧಚಿತ್ರ
  •  ಬೆಳಿಗ್ಗೆ 10:30 ಯಿಂದ ಆರಂಭವಾಗಲಿದ್ದು 12 ಕ್ಕೆ ಮುಕ್ತಾಯ

ನವದೆಹಲಿ(ಜ.23): ಈ ವರ್ಷದ ಗಣರಾಜ್ಯೋತ್ಸವ ಪಥಸಂಚಲನ(Republic Day Parade) ಕಾರ್ಯಕ್ರಮದಲ್ಲಿ 16 ಕವಾಯತು ತಂಡಗಳು, 17 ಮಿಲಿಟರಿ ಬ್ಯಾಂಡ್‌ಗಳು ಹಾಗೂ ವಿವಿಧ ರಾಜ್ಯ, ಇಲಾಖೆ ಹಾಗೂ ಸಶಸ್ತ್ರ ಪಡೆಗಳಿಂದ 25 ಸ್ಥಬ್ದಚಿತ್ರಗಳನ್ನು(tableaux) ಪ್ರದರ್ಶಿಸಲಾಗುವುದು ಎಂದು ಭಾರತೀಯ ಸೇನೆ(Indian Army) ಶನಿವಾರ ತಿಳಿಸಿದೆ.

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಆಶ್ವದಳದ ಮೌಂಟೆಡ್‌ ಕಾಲಂ, 14 ಯಾಂತ್ರೀಕೃತ ಕಾಲಂ, 6 ಕವಾಯತು ತಂಡಗಳು, ವಾಯುಪಡೆಯ ಸುಧಾರಿತ ಲಘು ಹೆಲಿಕಾಪ್ಟರ್‌ಗಳು ಭಾರತೀಯ ಸೇನೆಯನ್ನು ಪ್ರತಿನಿಧಿಸಲಿವೆ. ಯಾಂತ್ರೀಕೃತ ಕಾಲಂನಲ್ಲಿ ಪಿಟಿ-76 ಟ್ಯಾಂಕ್‌, ಸೆಂಚುರಿಯನ್‌ ಟ್ಯಾಂಕ್‌, ಎರಡು ಎಂಬಿಟಿ ಅರ್ಜುನ್‌ ಎಂಕೆ-1 ಟ್ಯಾಂಕ್‌, ಎಪಿಸಿ ಟೋಪಸ್‌ ಶಸ್ತ್ರಸಜ್ಜಿತ ಸಿಬ್ಬಂದಿ ವಾಹನ, ಬಿಎಂಪಿ-1 ಹಾಗೂ ಬಿಎಂಪಿ-2 ಭೂಪಡೆಗಳ ಹೋರಾಟ ವಾಹನವನ್ನು ಪ್ರದರ್ಶಿಸಲಾಗುವುದು.

Threat To PM Modi: ಮೋದಿಗೆ ಗಣರಾಜ್ಯ ದಿನದ ವೇಳೆ ಉಗ್ರ ಬೆದರಿಕೆ: ಹೈ ಅಲರ್ಟ್‌

2022ರ ಗಣರಾಜ್ಯೋತ್ಸವ ಪರೇಡ್ ಸ್ತಬ್ಧ ಚಿತ್ರಗಳ ವಿವರ

75/24 ಪ್ಯಾಕ್‌ ಹೊವಿಟ್ಜರ್‌, ಎರಡು ಧನುಷ್‌ ಹೊವಿಟ್ಜರ್‌ಗಳು, ಎಚ್‌ಟಿ-16 ಎಲೆಕ್ಟ್ರಾನಿಕ್‌ ಸಮರ ಸಿಸ್ಟಂ, ಎರಡು ತರಣ್‌ ಶಕ್ತಿ ಎಲೆಕ್ಟ್ರಾನಿಕ್‌ ಸಮರ ವ್ಯವಸ್ಥೆ, ಟೈಗರ್‌ ಕ್ಯಾಟ್‌ ಕ್ಷಿಪಣಿ ವ್ಯವಸ್ಥೆ ಮತ್ತು ಎರಡು ಆಕಾಶ್‌ ಕ್ಷಿಪಣಿ ವ್ಯವಸ್ಥೆಗಳು ಯಾಂತ್ರೀಕೃತ ಕಾಲಂಗಳ ಭಾಗವಾಗಿರಲಿದೆ. ರಾಜಪುತ್‌ ರೆಜಿಮೆಂಟ್‌, ಅಸ್ಸಾಮ್‌ ರೆಜಿಮೆಂಟ್‌, ಜಮ್ಮು ಮತ್ತು ಕಾಶ್ಮೀರ ಕಾಲಾಳುಪಡೆ, ಆರ್ಮಿ ಆರ್ಡಿನೆನ್ಸ್‌ ಕಾಫ್ಸ್‌ರ್‍ ರೆಜಿಮೆಂಟ್‌ ಹಾಗೂ ಪ್ಯಾರಾಚ್ಯೂಟ್‌ ರೆಜಿಮೆಂಟ್‌ ಕವಾಯತು ನಡೆಸಲಿವೆ. ನೌಕಾಪಡೆ ಹಾಗೂ ವಾಯುಪಡೆಯ ಕವಾಯತು ಪಡೆಗಳು, ಕೇಂದ್ರಿಯ ಮೀಸಲು ಪೊಲೀಸ್‌ ಪಡೆ, ಕೇಂದ್ರ ಕೈಗಾರಿಕಾ ಪೊಲೀಸ್‌ ಪಡೆ, ಸಶಸ್ತ್ರ ಸೀಮಾ ಬಲ, ಭಾರತೀಯ ತಟರಕ್ಷಣಾ ಪಡೆ, ಗಡಿ ಭದ್ರತಾ ಪಡೆ, ಕೇಂದ್ರಿಯ ಅರೆಸೇನಾ ಪಡೆ, ದೆಹಲಿ ಪೊಲೀಸ್‌, ಎನ್‌ಸಿಸಿ ಹಾಗೂ ರಾಷ್ಟೀಯ ಸೇವಾ ಯೋಜನೆಯ ಕವಾಯತು ಪಡೆಗಳು ಭಾಗವಹಿಸಲಿವೆ ಎಂದು ತಿಳಿಸಲಾಗಿದೆ. ಇಂಡೋ ಟಿಬೇಟಿಯನ್‌ ಬಾರ್ಡರ್‌ ಪೊಲೀಸ್‌ ಹಾಗೂ ಬಿಎಸ್‌ಎಫ್‌ ತಂಡ ಮೋಟಾರ್‌ಸೈಕಲ್‌ ಪ್ರದರ್ಶನ ಮಾಡಲಿದ್ದಾರೆ. ಎರಡು ಪರಮ ವೀರ ಚಕ್ರ ಹಾಗೂ ಅಶೋಕ ಚಕ್ರ ಪುರಸ್ಕೃತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Republic Day 2022 ಸ್ತಬ್ಧಚಿತ್ರ ತಿರಸ್ಕಾರ ವಿವಾದ, ಅನಗತ್ಯ ಗೊಂದಲ ಸೃಷ್ಟಿಸುತ್ತಿರುವ ರಾಜ್ಯಗಳಿಗೆ ಕೇಂದ್ರದ ಸ್ಪಷ್ಟನೆ

ಗಣರಾಜ್ಯೋತ್ಸವ ಪರೇಡ್‌ಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಿದ್ದಾರೆ. ದೆಹಲಿ ವಲಯದ ಕಮಾಂಡಿಂಗ್‌ ಜನರಲ್ ಅಧಿಕಾರಿ ಲೆಫ್ಟಿನೆಂಟ್‌ ಜನರಲ… ವಿಜಯ… ಕುಮಾರ ಮಿಶ್ರಾ ಅವರು ಪರೇಡ್‌ ಕಮಾಂಡರ್‌ ಆಗಿ ನೇತೃತ್ವ ವಹಿಸಲಿದ್ದಾರೆ.ಕಾರ್ಯಕ್ರಮ ಬೆಳಿಗ್ಗೆ 10:30 ಯಿಂದ ಆರಂಭವಾಗಲಿದ್ದು 12 ಕ್ಕೆ ಮುಕ್ತಾಯವಾಗಲಿದೆ.

 ಕರ್ನಾಟಕದ ಎರಡು ಸ್ತಬ್ಧಚಿತ್ರ:
ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಕರ್ನಾಟಕದಿಂದ ಒಂದಲ್ಲ, ಎರಡು ಸ್ತಬ್ಧಚಿತ್ರ ಭಾಗವಹಿಸಲಿವೆ. ವಾರ್ತಾ ಇಲಾಖೆಯ ಕರಕುಶಲ ವಸ್ತುಗಳ ಟ್ಯಾಬ್ಲೋ ಒಂದಾದರೆ, ಬೆಂಗಳೂರಿನ ವಿಜ್ಞಾನಿಗಳೇ ನಿರ್ಮಾಣ ಮಾಡಿರುವ ಮತ್ತೊಂದು ಸ್ತಬ್ಧಚಿತ್ರ ಜ.26ರಂದು ರಾಜಪಥದಲ್ಲಿ ಸಂಚರಿಸಲಿದೆ. ಬೆಂಗಳೂರಲ್ಲೇ ತಯಾರಾದ ತೇಜಸ್‌ ಲಘು ಯುದ್ಧ ವಿಮಾನದಲ್ಲಿ ಬಳಸುವ ರಾಡಾರ್‌, ಸೆನ್ಸರ್‌, ಕ್ಷಿಪಣಿ, ಬಾಂಬ್‌ಗಳನ್ನು ಬಿಂಬಿಸುವ ಡಿಆರ್‌ಡಿಒ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ)ದ ಸ್ತಬ್ಧಚಿತ್ರ ಇದಾಗಿದೆ.

ಬೆಂಗಳೂರಲ್ಲೇ ತಯಾರಾದ ಡಿಆರ್‌ಡಿಒ ಸ್ತಬ್ಧಚಿತ್ರ

ನವದೆಹಲಿಯಲ್ಲಿ ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಲಿರುವ ಡಿಆರ್‌ಡಿಒ(ಡಿಫೆನ್ಸ್‌ ರಿಸಚ್‌ರ್‍ ಆ್ಯಂಡ್‌ ಡೆಲವಪ್‌ಮೆಂಟ್‌ ಆರ್ಗನೈಸೇಶನ್‌)ದ ಟ್ಯಾಬ್ಲೋದಲ್ಲಿ ಬೆಂಗಳೂರಿನ ಕೇಂದ್ರದಲ್ಲಿ ತೇಜಸ್‌ ಲಘು ಯುದ್ಧವಿಮಾನದಲ್ಲಿ ಬಳಸುವ ಸಲುವಾಗಿ ಅಭಿವೃದ್ಧಿಪಡಿಸಿರುವ ರಾಡಾರ್‌, ಸೆನ್ಸಾರ್‌, ಕ್ಷಿಪಣಿ, ಬಾಂಬ್‌ಗಳ ಪ್ರದರ್ಶನವಾಗಲಿದೆ. ಬೆಂಗಳೂರು ಕೇಂದ್ರದ ವಿಜ್ಞಾನಿಗಳೇ ಟ್ಯಾಬ್ಲೋ ನಿರ್ಮಾಣ ಮಾಡಿರುವುದಾಗಿ ಕೇಂದ್ರದ ವಿಜ್ಞಾನಿ ಮಹೇಶ್‌ಬಾಬು ತಿಳಿಸಿದ್ದಾರೆ.
 

click me!