PM Modi interaction with DMs ಯಾದಗಿರಿ, ರಾಯಚೂರು ಬಗ್ಗೆ ಪ್ರಧಾನಿ ಮೋದಿ ಅತೀವ ಮೆಚ್ಚುಗೆ!

By Suvarna News  |  First Published Jan 23, 2022, 4:27 AM IST
  • ಯಾದಗಿರಿ ಡೀಸಿ ರಾಗಪ್ರಿಯಾ ಜತೆ ವಿಡಿಯೋ ಸಂವಾದ
  • ಅಭಿವೃದ್ಧಿ ಕಾರ್ಯಗಳ ಕುರಿತು ಮೋದಿ ಮೆಚ್ಚುಗೆ
  • ಗರ್ಭಿಣಿಯರಿಗೆ ಪೋಷಕಾಂಶ ಕಲ್ಪಿಸುವ ಕಾರ್ಯಕ್ರಮ ಶ್ಲಾಘನೆ

ಯಾದಗಿರಿ(ಜ.23):  ದೇಶದಲ್ಲೇ ಅತಿ ಹೆಚ್ಚು ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿರುವ ಯಾದಗಿರಿ(yadagiri) ಜಿಲ್ಲೆಯ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ(dr ragapriya ias) ಅವರ ಜತೆಗೆ ಶನಿವಾರ ಪ್ರಧಾನಿ ನರೇಂದ್ರ ಮೋದಿ(PM Naredra Modi) ವಿಡಿಯೋ ಸಂವಾದ ನಡೆಸಿದ್ದಾರೆ. ಈ ವೇಳೆ ಯಾದಗಿರಿ ಜಿಲ್ಲೆಯಲ್ಲಿ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ(Development) ಕಾರ್ಯಗಳ ಕುರಿತು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಗರ್ಭಿಣಿಯರಿಗೆ(Pregnant) ಪೋಷಕಾಂಶ ಕಲ್ಪಿಸುವ ಕಾರ್ಯಕ್ರಮದ ವಿಚಾರದಲ್ಲಿ ರಾಯಚೂರು ಜಿಲ್ಲೆಯ ಸಾಧನೆಯ ಕುರಿತೂ ಪ್ರಧಾನಿ ಶ್ಲಾಘಿಸಿದರು.

ಮೋದಿ ಅವರು ದೇಶದ ಐದು ಹಿಂದುಳಿದ ಜಿಲ್ಲೆಗಳ ಜಿಲ್ಲಾಧಿಕಾರಿ(district magistrates) ಜತೆಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತುಕತೆ ನಡೆಸಿದರು. ಈ ವೇಳೆ ಆರೋಗ್ಯ, ಶಿಕ್ಷಣ ಕ್ಷೇತ್ರದ ಸುಧಾರಣೆ ಬಗ್ಗೆ ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದರು. ಈ ಮೊದಲು ಆರೋಗ್ಯ ಕ್ಷೇತ್ರದಲ್ಲಿ(Health Sector) ಯಾದಗಿರಿಯಲ್ಲಿ ರಕ್ತಹೀನತೆಯ ನಿರಂತರ ಸಮಸ್ಯೆಗಳಿದ್ದವು. 13 ವರ್ಷ ಮೇಲ್ಪಟ್ಟಯುವತಿಯರಿಗೆ ಕಬ್ಬಿಣಾಂಶದ ಮಾತ್ರೆ, ಪೂರಕ ಪೋಷಣೆ ಮತ್ತು ಶಕ್ತಿ ಕಿಟ್‌ಗಳನ್ನು ನೀಡಿದ್ದರಿಂದ ರಕ್ತಹೀನತೆಯ ಸಮಸ್ಯೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಇನ್ನು ರಾಜ್ಯ ಸರ್ಕಾರದ ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರಿಗೆ ಪೌಷ್ಟಿಕಾಂಶ ಊಟವನ್ನು ನೀಡಿದ್ದರಿಂದ ಕಡಿಮೆ ತೂಕದ ಶಿಶುಗಳು ಜನಿಸುವುದನ್ನು ಕಡಿಮೆ ಮಾಡಲು ಕಾರಣವಾಯಿತು. ಜಿಲ್ಲೆಯಲ್ಲಿ ಅಪೌಷ್ಟಿಕತೆಯನ್ನು ಶೇ.30 ರಿಂದ 6 ಕ್ಕೆ ಇಳಿಸಿರುವುದನ್ನು ತಿಳಿದು ಪ್ರಧಾನಿ ಶ್ಲಾಘನೆ ವ್ಯಕ್ತಪಡಿಸಿದರು.

Tap to resize

Latest Videos

undefined

PM Modi At Meeting With DM: ಇತರರ ಯಶಸ್ಸಿನಿಂದ ಕಲಿಯಲು ಡಿಸಿಗಳಿಗೆ ಪಿಎಂ ಸಲಹೆ!

 ಈ ಕಾರ್ಯಕ್ರಮ ಅತಿ ಹಿಂದುಳಿದ ಜಿಲ್ಲೆಗಳ ಪ್ರಗತಿಗಾಗಿ 2018ರಲ್ಲಿ ಜಾರಿಗೆ ಬಂದಿದ್ದು, ದೇಶಾದ್ಯಂತ 112 ಜಿಲ್ಲೆಗಳನ್ನು ಗುರುತಿಸಲಾಗಿದೆ. ಹಿಂದುಳಿದ ಜಿಲ್ಲೆಗಳು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರಗತಿ ಕಾಣಬೇಕೆಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮ ಕೈಗೊಳ್ಳಲಾಗಿದೆ. ರಾಜ್ಯದಿಂದ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳು ಪಟ್ಟಿಯಲ್ಲಿವೆ.

ಪ್ರಧಾನಮಂತ್ರಿ ಮೋದಿ ಶನಿವಾರ ಯಾದಗಿರಿ ಜಿಲ್ಲಾ​ಧಿಕಾರಿ ಡಾ.ಆರ್‌.ರಾಗಪ್ರಿಯಾ ಸೇರಿ ವಿವಿಧ ಡೀಸಿಗಳ ಜೊತೆ ವಿಡಿಯೋ ಸಂವಾದ ನಡೆಸಿ, ಜಿಲ್ಲೆಗಳಲ್ಲಿನ ಅಭಿವೃದ್ಧಿ ಕುರಿತು ಮಾಹಿತಿ ಪಡೆದರು. ಮಹತ್ವಾಕಾಂಕ್ಷೆ ಜಿಲ್ಲೆಯ ಕಾರ್ಯಕ್ರಮವು ಇತರ ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕಿಂತ ಹೇಗೆ ಭಿನ್ನವಾಗಿದೆ ಎಂದು ಪ್ರಧಾನಿ ಮೋದಿ ಕೇಳಿದಾಗ, ಈ ಯೋಜನೆಯು ಅಂತರ ಇಲಾಖೆಯ ಸಮನ್ವಯಕ್ಕೆ ಕಾರಣವಾಗಿದೆ. ಇದು ಹೆಚ್ಚು ಕೇಂದ್ರಿಕೃತವಾಗಿದ್ದು, ವಿವಿಧ ಸೂಚ್ಯಂಕಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತದೆ ಎಂದು ತಿಳಿಸಿದರು. ಅಲ್ಲದೆ ಯಾದಗಿರಿ ಜಿಲ್ಲೆಯು ಅಭಿವೃದ್ಧಿಯತ್ತ ಬಲವಾದ ಮತ್ತು ಮಹತ್ವದ ಹೆಜ್ಜೆಗಳನ್ನು ಇಟ್ಟಿದೆ ಎಂದು ತಿಳಿಸಿದರು.

Pariksha Pe Charcha 2022: ವಿದ್ಯಾರ್ಥಿಗಳ ನೋಂದಣಿ ಜನವರಿ 27ರವರೆಗೆ ವಿಸ್ತರಣೆ

ರಾಯಚೂರಿಗೂ ಮೆಚ್ಚುಗೆ:
ಗರ್ಭಿಣಿಯರಿಗೆ ಪೌಷ್ಟಿಕಾಂಶ ಒದಗಿಸುವ ನಿಟ್ಟಿನಲ್ಲಿ ನೆರೆಯ ರಾಯಚೂರು ಜಿಲ್ಲೆ ಮಾಡಿದ ಕೆಲಸದ ಕುರಿತೂ ಮೋದಿ ಅವರು ಸಂವಾದದ ವೇಳೆ ಪ್ರಸ್ತಾಪಿಸಿದರು. ಗರ್ಭಿಣಿಯರಿಗೆ ನಿಯಮಿತವಾಗಿ ಪೋಷಕಾಂಶಯುಕ್ತ ಆಹಾರ ಒದಗಿಸುವ ಮೂಲಕ ರಾಯಚೂರು ಜಿಲ್ಲೆಯಲ್ಲಿ ನಿಯಮಿತವಾಗಿ ಪೋಷಕಾಂಶ ಪಡೆಯುತ್ತಿರುವ ಗರ್ಭಿಣಿಯರ ಪ್ರಮಾಣ ಶೇ.70ರಿಂದ ಶೇ.97ಕ್ಕೇರಿದೆ ಎಂದರು.

* ರಕ್ತಹೀನತೆ ಮಟ್ಟದಲ್ಲಿ ಗಮನಾರ್ಹ ಕುಸಿತ:
ಈ ಮೊದಲು ಆರೋಗ್ಯ ಕ್ಷೇತ್ರದಲ್ಲಿ ಯಾದಗಿರಿಯಲ್ಲಿ ರಕ್ತಹೀನತೆಯ ನಿರಂತರ ಸಮಸ್ಯೆಗಳಿದ್ದವು. ಹೀಗಾಗಿ, ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಡ್ಡಾಯವಾಗಿ ಹೀಮೋಗ್ಲೋಬಿನ್‌ ಪರೀಕ್ಷೆ ಮಾಡಲು ಎಲ್ಲ ಆಶಾ ಕಾರ್ಯಕರ್ತೆಯರು ಮತ್ತು ಎ.ಎನ್‌.ಎಂ.ಗಳಿಗೆ ತರಬೇತಿ ಮೂಲಕ ನಿಭಾಯಿಸಲಾಯಿತು ಎಂದು ಪ್ರಧಾನಿಗೆ ತಿಳಿಸಿದ ಡಾ. ರಾಗಪ್ರಿಯಾ, 13 ವರ್ಷ ಮೇಲ್ಪಟ್ಟಮಹಿಳೆಯರನ್ನು ಪರೀಕ್ಷಿಸಿ ಅವರಲ್ಲಿ ರಕ್ತಹೀನತೆ ಕಂಡಬಂದಾಗ ಅವರಿಗೆ ಕಬ್ಬಿಣಾಂಶದ ಮಾತ್ರೆಗಳನ್ನು ಹಾಗೂ ಪೂರಕ ಪೋಷಣೆ ಮತ್ತು ಶಕ್ತಿ ಕಿಟ್‌ ಗಳನ್ನು ನೀಡಲಾಯಿತು. ಇದರ ಮೂಲಕ ರಕ್ತಹೀನತೆಯ ಮಟ್ಟದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಅಡಿಯಲ್ಲಿ ಮಾತೃಪೂರ್ಣ ಯೋಜನೆ ಗರ್ಭಿಣಿಯರಿಗೆ ಬೇಯಿಸಿದ ಪೌಷ್ಟಿಕಾಂಶದ ಊಟವನ್ನು ನೀಡಲಾಯಿತು. ಇದು ಕಡಿಮೆ ತೂಕದ ಶಿಶುಗಳನ್ನು ಕಡಿಮೆ ಮಾಡಲು ಕಾರಣವಾಯಿತು. ಅಂಗನವಾಡಿಯಲ್ಲಿ ಹಾಲು ಮತ್ತು ಮೊಟ್ಟೆಯನ್ನು ಮಕ್ಕಳಿಗೆ ವಾರದಲ್ಲಿ 5 ದಿನಗಳನ್ನು ನಿಖರವಾಗಿ ಮೇಲ್ವಿಚಾರಣೆ ಮಾಡುವ ಮೂಲಕ ನೀಡಲಾಯಿತು. ಇದು ಪೌಷ್ಟಿಕತೆಯನ್ನು ಶೇಕಡಾವಾರು 30 ರಿಂದ 6 ಕ್ಕೆ ಇಳಿಸುವುದನ್ನು ಖಾತ್ರಿಪಡಿಸಿತು ಎಂದು ಡಾ. ರಾಗಪ್ರಿಯಾ ವಿವರಿಸಿದರು.

Subhash Chandra Bose Statue : ಇಂಡಿಯಾ ಗೇಟ್ ನಲ್ಲಿ ಸ್ಥಾಪನೆಯಾಗಲಿದೆ ನೇತಾಜಿ ಪ್ರತಿಮೆ

ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ :
ಶಿಕ್ಷಣ ಕ್ಷೇತ್ರದಲ್ಲಿ ಯಾದಗಿರಿ ಜಿಲ್ಲೆ ಸುಧಾರಣೆ ಕಂಡಿದೆ ಎಂದು ಪ್ರಧಾನಿಗಳೆದುರು ಸಂವಾದದಲ್ಲಿ ಹೇಳಿದ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ, ಎಲ್ಲ 122 ಪ್ರೌಢಶಾಲೆಗಳಲ್ಲಿ ಸಮಾಜ ವಿಜ್ಞಾನ, ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಪ್ರೀ ಲೋಡೆಡ್‌ ಪಠ್ಯಕ್ರಮ ಆಡಿಯೋ ಮತ್ತು ವೀಡಿಯೋ ಮಾದರಿಯಲ್ಲಿ ಸ್ಮಾರ್ಟ್‌ ಪರದೆಗಳನ್ನು ಒದಗಿಸುವ ಮೂಲಕ ಇಂಟರ್ಯಾಕ್ಟಿವ್‌ ಅನ್ನು ಪ್ರೋತ್ಸಾಹಿಸುವ ಸ್ಮಾರ್ಟ್‌ ತರಗತಿಗಳನ್ನು ಸ್ಥಾಪಿಸಲಾಗಿದೆ ಎಂದರು.

ತರಗತಿಗಳಲ್ಲಿ ಕಲಿಕೆ ಮತ್ತು ಹೀಗೆ ಸುಧಾರಿತ ಕಲಿಕೆ ಮತ್ತು ಪರಿಕಲ್ಪನೆಗಳನ್ನು ಹೆಚ್ಚು ಸುಲಭವಾಗಿ ಗ್ರಹಿಸುವುದು ಈ ಸುಧಾರಣೆ ಒಲವಿನ ಫಲಿತಾಂಶ ತಂದಿದೆ ಎಂದರು.

ಅಂತರ ಇಲಾಖೆ ಸಮನ್ವಯಕ್ಕೆ ಕಾರಣ :
ಮಹತ್ವಾಕಾಂಕ್ಷೆ ಜಿಲ್ಲೆಯ ಕಾರ್ಯಕ್ರಮವು ಇತರ ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕಿಂತ ಹೇಗೆ ಭಿನ್ನವಾಗಿದೆ ಎಂದು ಪ್ರಧಾನಿ ಮೋದಿ ಅವರು ಕೇಳಿದಾಗ, ಮಹತ್ವಾಕಾಂಕ್ಷೆ ಜಿಲ್ಲೆಯ ಯೋಜನೆಯು ಅಂತರ ಇಲಾಖೆಯ ಸಮನ್ವಯಕ್ಕೆ ಕಾರಣವಾಗಿದೆ. ಇದು ಹೆಚ್ಚು ಕೇಂದ್ರಿಕೃತವಾಗಿದ್ದು, ವಿವಿಧ ಸೂಚ್ಯಂಕಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತದೆ ಎಂದು ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ತಿಳಿಸಿದರು.

ಭೌತಿಕ ಮತ್ತು ಆರ್ಥಿಕ ಗುರಿಗಳೊಂದಿಗೆ ಪ್ರತಿ ಸೂಚ್ಯಂಕವು ಕಾರ್ಯಕ್ರಮದ ವಿತರಣೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಮೇಲೆ ಕೇಂದ್ರಿಕರಿಸುತ್ತದೆ. ಈ ಕಾರ್ಯಕ್ರಮದ ಮೂಲಕ ವಿವಿಧ ಇಲಾಖೆಗಳು ಉತ್ತಮ ಸಮನ್ವಯ ಸಾಧಿ​ಸಲು ಮತ್ತು ಉತ್ತಮ ವಿತರಣೆ ಹಾಗೂ ಉತ್ತಮ ಫಲಿತಾಂಶಗಳನ್ನು ಸಾ​ಸಲು ಪರಿಣಾಮಕಾರಿಯಾಗಿದೆ ಅಲ್ಲದೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕ್ಷೇತ್ರ ಮಟ್ಟದ ಸಿಬ್ಬಂದಿಗಳು ಜಿಲ್ಲಾ ಮಟ್ಟದಲ್ಲಿ ಶ್ಲಾಘನೆಗೆ ಪಡೆದಿದ್ದಾರೆ. ವಿವಿಧ ಯೋಜನೆಗಳ ಉತ್ತಮ ಅನುಷ್ಠಾನಕ್ಕೆ ಕಾರಣವಾಗಿದೆ ಎಂದು ಡಾ. ರಾಗಪ್ರಿಯಾ ಉತ್ತರಿಸಿದರು.

ಕರ್ನಾಟಕದಲ್ಲಿ ಚಿಕ್ಕ ಜಿಲ್ಲೆಗಳಲ್ಲೊಂದು :
ಯಾದಗಿರಿ ಜಿಲ್ಲೆಯು ಕರ್ನಾಟಕದ ಈಶಾನ್ಯದಲ್ಲಿ 14 ಲಕ್ಷ ಜನಸಂಖ್ಯೆ ಮತ್ತು 6 ತಾಲೂಕಗಳನ್ನು ಹೊಂದಿರುವ, ಕರ್ನಾಟಕದ ಚಿಕ್ಕ ಜಿಲ್ಲೆಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ಅವರಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ, ಇದು ಫಲವತ್ತಾದ ಕಪ್ಪು ಮಣ್ಣನ್ನು ಹೊಂದಿದ್ದು, ಇಲ್ಲಿ ಭತ್ತ, ಹತ್ತಿ, ಕಡಲೆಕಾಯಿ ಮತ್ತು ತೊಗರಿ ಬೆಳೆ ಬೆಳೆಯಲಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಎರಡು ಪ್ರಮುಖ ನದಿಗಳಾದ ಕೃಷ್ಣಾ ಮತ್ತು ಭೀಮಾ ನದಿಗಳಿಂದ ಆಶೀರ್ವದಿಸಿದ್ದೇವೆ. ಇಲ್ಲಿ ಸಣ್ಣ ರೈತರನ್ನು ಉಪ್ಪು ಪೀಡಿತ ಪ್ರದೇಶಗಳಲ್ಲಿ ಒಳನಾಡು ಮೀನುಗಾರಿಕೆಯನ್ನು ಕೈಗೊಳ್ಳಲು ಪ್ರೋತ್ರಾಹಿಸಿದ್ದೇವೆ. ಈ ವರ್ಷ 7416 ಮೆಟ್ರಿಕ್‌ ಟನ್‌ ಮೀನು ಮತ್ತು ಸೀಗಡಿಗಳನ್ನು ಉತ್ಪಾದಿಸಿದ್ದೇವೆ. ವಾರ್ಷಿಕ 180 ಕೋಟಿ ರುಪಾಯಿಗಳ ವಹಿವಾಟು ನಡೆಸಿದ್ದೇವೆ. ಇದು ಹಿಂದಿನ ವರ್ಷಗಳಿಗಿಂತ ಶೇಕಡಾವಾರು 50 ರಷ್ಟುಹೆಚ್ಚಾಗಿದೆ. ಹೀಗಾಗಿ ಸಣ್ಣ ರೈತರ ಆದಾಯ ವೃದ್ಧಿಸುತ್ತದೆ ಎಂದು ಮಾಹಿತಿ ನೀಡಿದರು.

ಯಾದಗಿರಿ ಜಿಲ್ಲೆಯನ್ನು ಮಹತ್ವಾಕಾಂಕ್ಷೆ ಜಿಲ್ಲೆಯ (ಆ್ಯಸ್ಪಿರೇಶನಲ್‌ ಡಿಸ್ಟ್ರಿಕ್ಟ್) ಯೋಜನೆಯಡಿ ಆಯ್ಕೆ ಮಾಡಿದ್ದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮತ್ತು ಅಭಿವೃದ್ಧಿ ಗುರಿಗಳನ್ನು ಸಾಧಿ​ಸಲು ನಿರಂತರ ಬೆಂಬಲ ಮತ್ತು ಪ್ರೇರಣೆಯನ್ನು ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಧನ್ಯವಾದಗಳನ್ನು ಅರ್ಪಿಸಿದರಲ್ಲದೆ, ಯಾದಗಿರಿಯು ಅಭಿವೃದ್ಧಿಯತ್ತ ಬಲವಾದ ಮತ್ತು ಮಹತ್ವದ ಹೆಜ್ಜೆಗಳನ್ನು ಇಟ್ಟಿದೆ ಮತ್ತು ಈ ಅದ್ಭುತ ಅವಕಾಶಕ್ಕಾಗಿ ಮತ್ತೊಮ್ಮೆ ಪ್ರಧಾನ ಮಂತ್ರಿಗಳಿಗೆ ಧನ್ಯವಾದಗಳನ್ನು ಹೇಳುತ್ತೇನೆ ಎಂದು ನುಡಿದರು.

ಏನಿದು ಆ್ಯಸ್ಪಿರೇಶನಲ್‌ ಡಿಸ್ಟ್ರಿಕ್ಟ್ ?
ಪ್ರಧಾನಮಂತ್ರಿಗಳ ವಿಶೇಷ ಕಾರ್ಯಕ್ರಮಗಳಲ್ಲಿ ಒಂದಾದ ಮಹತ್ವಾಕಾಂಕ್ಷೆ ಜಿಲ್ಲೆಗಳ (ಆ್ಯಸ್ಪಿರೇಶನಲ್‌ ಡಿಸ್ಟ್ರಿಕ್ಟ್) ಕಾರ್ಯಕ್ರಮ 2018 ರಲ್ಲಿ ಜಾರಿಗೆ ಬಂದಿದೆ. ಈ ಕಾರ್ಯಕ್ರಮಗಳಲ್ಲಿ ಒಳಗೊಂಡ ಜಿಲ್ಲೆಗಳು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರಗತಿಯನ್ನು ಕಾಣಬೇಕೆಂಬ ನಿಟ್ಟಿನಲ್ಲಿ ಕಾರ್ಯಕ್ರಮಗಳ ಕೈಗೊಳ್ಳಲಾಗಿದೆ. ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳು ರಾಜ್ಯದಿಂದ ಆಯ್ಕೆಯಾಗಿವೆ. ದೇಶದಾದ್ಯಂತ ಕೈಗೊಂಡಿರುವ ಈ ಕಾರ್ಯಕ್ರಮಗಳು ಎಲ್ಲಾ ಮೂಲೆಗೂ ತಲುಪುವಂತೆ ನೋಡಿಕೊಳ್ಳಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯಕ್ರಮ ಒಟ್ಟುಗೂಡಿಸಿ ಕೇಂದ್ರ ಮತ್ತು ರಾಜ್ಯ ಪ್ರಭಾರಿ ಅ​ಧಿಕಾರಿಗಳು ಮತ್ತು ಜಿಲ್ಲಾ​ಧಿಕಾರಿಗಳ ಮೂಲಕ ಪ್ರತಿ ಹಂತಕ್ಕೂ ತಲುಪುವ ನೋಟ ಹೊಂದಿರುವ ಕಾರ್ಯಕ್ರಮ ಇದಾಗಿದೆ.

‘ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌’ ಈ ಧ್ಯೇಯಮಂತ್ರದ ಮೂಲಕ ಕಾರ್ಯ ನಿರ್ವಹಿಸುವದು. ಈ ಕಾರ್ಯಕ್ರಮ 112 ಅತಿ ಹಿಂದುಳಿದ ಜಿಲ್ಲೆಗಳ ಕಡಮೆ ಪ್ರಗತಿ ತೋರಿಸುವ ಸೂಚ್ಯಂಕಗಳ ಮೂಲಕ ಸಾಮಾಜಿಕ ಫಲಿತಾಂಶ ಹೊಂದುವಲ್ಲಿ ನೆರವಾಗುವದು. ಜಿಲ್ಲೆಗಳು ಸೂಚ್ಯಂಕಗಳ ಮೂಲಕ ಸ್ಪ​ರ್ಧಿಸಿ ರಾಜ್ಯ ಮತ್ತು ಕೇಂದ್ರದ ಮಟ್ಟದಲ್ಲಿ ತಮ್ಮ ಸ್ಥಾನ ಹೊಂದುವದು. ಜನತೆಯ ಆರೋಗ್ಯ ಮತ್ತು ಪೌಷ್ಟಿಕ , ಕೃಷಿ ಮತ್ತು ಜಲ ಸಂಪನ್ಮೂಲ , ಶಿಕ್ಷಣ, ಆರ್ಥಿಕ ಸೇರ್ಪಡೆ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಮೂಲಭೂತ ಸೌಕರ್ಯ ಈ ಎಲ್ಲಾ ವಲಯಗಳಲ್ಲಿ ಭಾಗವಹಿಸುವರು. 49 ಸೂಚ್ಯಂಕಗಳನ್ನು ಗುರುತಿಸಲ್ಪಟ್ಟು 5 ವಲಯಗಳನ್ನಾಗಿ ನೇಮಿಸಲಾಗಿದೆ.

ಈ ನಿಟ್ಟಿನಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಯ್ದ 5 ಜಿಲ್ಲೆಗಳ ಪೈಕಿ, ಯಾದಗಿರಿ ಜಿಲ್ಲೆಯ ಜಿಲ್ಲಾ​ಧಿಕಾರಿ ಡಾ. ಆರ್‌. ರಾಗಪ್ರಿಯಾ ಅವರ ಜೊತೆ ವೀಡಿಯೋ ಸಂವಾದದ ಮೂಲಕ ಚರ್ಚಿಸಿ, ಜಿಲ್ಲೆಯಲ್ಲಿನ ಅಭಿವೃದ್ಧಿ ಕುರಿತು ಮಾಹಿತಿ ಪಡೆದರು.

click me!