ಮತ್ತೆ ದಾಖಲೆಯ 23010 ಕೇಸು| ಸೋಂಕಿತರ ಸಂಖ್ಯೆ 6.40 ಲಕ್ಷಕ್ಕೆ ಮತ್ತೆ 449 ಜನರ ಸಾವು| ಮಹಾರಾಷ್ಟ್ರ ಸೋಂಕಿತರ ಸಂಖ್ಯೆ 2 ಲಕ್ಷ ಗಡಿಗೆ| 1 ಲಕ್ಷ ಗಡಿದಾಟಿದ ದಕ್ಷಿಣದ ತಮಿಳುನಾಡು
ನವದೆಹಲಿ(ಜು.04): ದೇಶಾದ್ಯಂತ ಹೊಸ ಸೋಂಕು ಬೆಳಕಿಗೆ ಬರುವ ಪ್ರಮಾಣದ ನಾಗಾಲೋಟ ಮುಂದುವರೆದಿದ್ದು, ಶುಕ್ರವಾರ 23010 ಜನರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಇದು ಈವರೆಗಿನ ದೈನಂದಿನ ಗರಿಷ್ಠವಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 640843 ಮುಟ್ಟಿದೆ.
undefined
ಇನ್ನು ನಿನ್ನೆ 449 ಜನರು ವೈರಸ್‌ಗೆ ಬಲಿಯಾಗುವುದರೊಂದಿಗೆ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 18653ಕ್ಕೆ ತಲುಪಿದೆ. ಇದೇ ವೇಳೆ ಈವರೆಗೆ 392403 ಜನರು ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಕೋವಿಡ್‌ನಿಂದ ದುಡ್ಡು ಮಾಡುವ ದಾರಿದ್ರ್ಯ ಬಂದಿಲ್ಲ: ಸಿದ್ದರಾಮಯ್ಯಗೆ ತಿರುಗೇಟು
ಮಹಾರಾಷ್ಟ್ರದಲ್ಲಿ ಶುಕ್ರವಾರ ಒಂದೇ ದಿನ 6364 ಹೊಸ ಕೇಸು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1.92 ಲಕ್ಷಕ್ಕೆ ತಲುಪಿದೆ. ಇನ್ನು 198 ಜನರು ನಿನ್ನೆ ಸಾವನ್ನಪ್ಪುವುದರೊಂದಿಗೆ ರಾಜ್ಯದಲ್ಲಿ ಬಲಿಯಾದವರ ಸಂಖ್ಯೆ 8376ಕ್ಕೆ ತಲುಪಿದೆ.
ಇನ್ನು ತಮಿಳುನಾಡಿನಲ್ಲಿ 4329 ಹೊಸ ಕೇಸು ದಾಖಲಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1.02 ಲಕ್ಷಕ್ಕೆ ತಲುಪಿದೆ. ಜೊತೆಗೆ 64 ಜನರು ಸಾವನ್ನಪ್ಪುವುದರೊಂದಿಗೆ ಈವರೆಗೆ ಬಲಿಯಾದವರ ಸಂಖ್ಯೆ 1385ಕ್ಕೆ ತಲುಪಿದೆ.
ಪತಂಜಲಿಯ ಕೊರೋನಿಲ್ ಮಾರಾಟಕ್ಕೆ ಗ್ರೀನ್ ಸಿಗ್ನಲ್!
ಇನ್ನು ದೆಹಲಿಯಲ್ಲಿ 2520 ಹೊಸ ಕೇಸು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 94000 ಮುಟ್ಟಿದೆ. ಜೊತೆಗೆ 59 ಜನರು ಸಾವನ್ನಪ್ಪಿದ್ದಾರೆ.