ಚೀನಾಕ್ಕೀಗ ಎಲೆಕ್ಟ್ರಿಕ್ ಶಾಕ್| ಚೀನಾ ಮತ್ತು ಪಾಕಿಸ್ತಾನದಿಂದ ಇನ್ನು ಯಾವುದೇ ಇಂಧನ ಸಂಬಂಧಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದಿಲ್ಲ
ನವದೆಹಲಿ(ಜು.04): ಚೀನಾ ಮತ್ತು ಪಾಕಿಸ್ತಾನದಿಂದ ಇನ್ನು ಯಾವುದೇ ಇಂಧನ ಸಂಬಂಧಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದಿಲ್ಲ ಎಂದು ಕೇಂದ್ರ ಇಂಧನ ಖಾತೆ ಸಚಿವ ಆರ್.ಕೆ.ಸಿಂಗ್ ಹೇಳಿದ್ದಾರೆ.
ಶುಕ್ರವಾರ ಎಲ್ಲಾ ರಾಜ್ಯಗಳ ಇಂಧನ ಖಾತೆ ಸಚಿವರ ಜೊತೆಗಿನ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ನಾವು ಚೀನಾದಿಂದ 21000 ಕೋಟಿ ರು. ಸೇರಿ ಒಟ್ಟು 71000 ಕೋಟಿ ಮೊತ್ತದ ಇಂಧನ ಉತ್ಪನ್ನ ಆಮದು ಮಾಡಿಕೊಂಡಿದ್ದೆವು. ಆದರೆ ಇದೀಗ ಎಲ್ಲವನ್ನೂ ಇಲ್ಲೇ ಉತ್ಪಾದಿಸಲಾಗುತ್ತಿದೆ. ಹೀಗಾಗಿ ರಾಜ್ಯಗಳು ಕೂಡ ಚೀನಾ ಉತ್ಪನ್ನಗಳ ಆಮದಿಗೆ ಬೇಡಿಕೆ ಸಲ್ಲಿಸಬಾರದು ಎಂದು ಮನವಿ ಮಾಡಿದರು.
undefined
11 ಸಾವಿರ ಅಡಿ ಎತ್ತರದಲ್ಲಿರುವ ನೀಮು: ಕಾರ್ಗಿಲ್ ಯುದ್ಧ ವೇಳೆ ಪ್ರಮುಖ ಪಾತ್ರ ವಹಿಸಿದ್ದ ತಾಣ!
ಚೀನಾದ ಗಡಿ ಕ್ಯಾತೆ ಬಳಿಕ ಆ ದೇಶದ ಯಾವುದೇ ಒಪ್ಪಂದ ಅಥವಾ ಉಪಕರಣ ಆಮದು ಮಾಡಿಕೊಳ್ಳದೇ ಇರಲು ಬಿಎಸ್‌ಎನ್‌ಎಲ್, ರೈಲ್ವೆ, ರಸ್ತೆ ಸಾರಿಗೆ ಸಚಿವಾಲಯ, ಕೈಗಾರಿಕಾ ಸಚಿವಾಲಯಗಳು ನಿರ್ಧರಿಸಿದ್ದವು.