ಕತ್ತಲಲ್ಲಿ ನಡೆದ ತಪ್ಪಿನಿಂದ 21ರ ಹರೆಯದ ಯುವಕನ ಪ್ರಾಣಪಕ್ಷಿ ಹಾರಿ ಹೋಯ್ತು !

By Mahmad Rafik  |  First Published Jul 11, 2024, 12:48 PM IST

ಗೆಳೆಯನ ಮನೆಯ ಕಾರ್ಯಕ್ರಮಕ್ಕೆ ಬಂದಿದ್ದ 21 ವರ್ಷದ ಯುವಕ ಬೆಳಗಾಗುವಷ್ಟರಲ್ಲಿಯೇ ಸಾವನ್ನಪ್ಪಿದ್ದಾನೆ. ಇತ್ತ ವಿಷಯ ತಿಳಿಯತ್ತಲೇ ಯುವಕನ ತಾಯಿ ಪ್ರಜ್ಞೆ ಕಳೆದುಕೊಂಡಿದ್ದಾರೆ.


ಜೈಪುರ: ರಾತ್ರಿ ಕತ್ತಲಲ್ಲಿ ನಡೆದ ತಪ್ಪಿನಿಂದಾಗಿ 21 ವರ್ಷದ ಯುವಕ ಪ್ರಾಣ ಕಳೆದುಕೊಂಡಿದ್ದಾನೆ. ಕುಟುಂಬಸ್ಥರು ಎಷ್ಟೇ ಪ್ರಯತ್ನಿಸಿದರೂ ಯುವಕನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ವಯಸ್ಸಿಗೆ ಬಂದ ಮಗನನ್ನು ಕಳೆದುಕೊಂಡು ಕುಟುಂಬ ದಿಕ್ಕು ತೋಚದ ಸ್ಥಿತಿಯಲ್ಲಿದೆ. ರಾಜಸ್ಥಾನದ ಜುಂಜುನ ಜಿಲ್ಲೆಯ ಜಾಕ್ಲಾ ಗ್ರಾಮದಲ್ಲಿ ಈ ದುರಂತ ನಡೆದಿದೆ. 21 ವರ್ಷದ ಮುಕೇಶ್ ಮೃತ ಯುವಕ. 

ಬಟ್ಟೆ ಒಣಗಲು ಹಾಕುತ್ತಿರುವ ಸಂದರ್ಭದಲ್ಲಿ ವಿದ್ಯುತ ಸ್ಪರ್ಶಿಸಿ ಮುಕೇಶ್ ಸಾವನ್ನಪ್ಪಿದ್ದಾನೆ. ಬಟ್ಟೆ ಹಾಕಲು ಕಬ್ಬಿಣದ ತಂತಿಯೊಂದನ್ನು ಹಾಕಲಾಗಿದೆ. ಇದರ ಪಕ್ಕದಲ್ಲಿಯೇ ವಿದ್ಯುತ್ ತಂತಿ ಹಾದು ಹೋಗಿದೆ. ರಾತ್ರಿ ಬಟ್ಟೆ ತೊಳೆದ ಮುಕೇಶ್ ಹಸಿಯಾದ ಶರ್ಟ್ ತಂತಿ ಮೇಲೆ ಹಾಕಿದ್ದಾನೆ. ಈ ವೇಳೆ ವಿದ್ಯುತ್ ತಂತಿ ತಾಗಿದ್ದರಿಂದ ಮುಕೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸುಮಾರು ಒಂದು ಗಂಟೆ ಕಾಲ ಮುಕೇಶ್ ತಂತಿಗೆ ತಾಗಿಕೊಂಡು ನೇತಾಡುತ್ತಿತ್ತು. ಮುಕೇಶ್ ಗೆಳೆಯ ಹಲವು ಬಾರಿ ವಿದ್ಯುತ್ ಪ್ರಸರಣ ಕೇಂದ್ರಕ್ಕೆ ಫೋನ್ ಮಾಡಿದ್ರೂ ಅಧಿಕಾರಿಗಳು ಸ್ಪಂದಿಸಿಲ್ಲ. ಕೊನೆಗೆ ಕೋಲಿನ ಸಹಾಯದಿಂದ ಶವವನ್ನು ತಳ್ಳಲಾಗಿದೆ ಎಂದು ವರದಿಯಾಗಿದೆ. 

Latest Videos

undefined

ಗೆಳೆಯನ ಮನೆಯಲ್ಲಿಯೇ ಉಳಿದುಕೊಂಡಿದ್ದ ಮುಕೇಶ್!

ಮಾಲ್ಸರ ಗ್ರಾಮದ ನಿವಾಸಿಯಾಗಿರುವ ಮುಕೇಶ್ ಗೆಳೆಯನ ಮನೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಜಾಕ್ಲಾ ಗ್ರಾಮಕ್ಕೆ ತೆರಳಿದ್ದನು. ಹಿಂದಿರುಗುವ ವೇಳೆಗೆ ತಡರಾತ್ರಿಯಾಗಿದ್ದರಿಂದ ಗೆಳೆಯನ ಮನೆಯಲ್ಲಿಯೇ ಮುಕೇಶ್ ಉಳಿದುಕೊಂಡಿದ್ದನು. ರಾತ್ರಿ ಸುಮಾರು 3 ಗಂಟೆಗೆ ಮುಕೇಶ್ ಬಟ್ಟೆ ತೊಳೆದಿದ್ದಾನೆ. ಬಟ್ಟೆ ಒಣಗಲು ಹಾಕುವ ಸಂದರ್ಭದಲ್ಲಿ ವಿದ್ಯುತ್ ಶಾಕ್‌ನಿಂದ ಮುಕೇಶ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

8 ಹುಡುಗಿಯರ ಜೊತೆ 3 ಹುಡುಗರ ಸರಸ ಸಲ್ಲಾಪ; ಬಾಗಿಲು ತರೆದವರಿಗೆ ಕಂಡಿದ್ದು ಬೆತ್ತಲೆ ಲೋಕ!

ಕತ್ತಲಿನಲ್ಲಿ ಕಾಣಲಿಲ್ಲ ವಿದ್ಯುತ್ ತಂತಿ!

ಶಾಕ್ ಬಳಿಕ ಮುಕೇಶ್ ವಿದ್ಯುತ್ ತಂತಿಗೆ ತಗುಲಿಕೊಂಡು ಒಂದು ಗಂಟೆಗೂ ಅಧಿಕ ಕಾಲ ನೇತಾಡಿದೆ. ನಂತರ ಮುಕೇಶ್‌ ನನ್ನು ತಂತಿಯಿಂದ ಬೇರ್ಪಡಿಸಿ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪರೀಕ್ಷೆ ನಡೆಸಿದ ವೈದ್ಯರು ಮುಕೇಶ್ ಸಾವನ್ನಪ್ಪಿರೋದನ್ನು ದೃಢೀಕರಿಸಿದರು. ಬಟ್ಟೆ ಹಾಕಲು ಹಾಕಿರುವ ತಂತಿಯ ಪಕ್ಕದಲ್ಲಿಯೇ ಎಲೆಕ್ಟ್ರಿಕ್ ವೈರ್ ಹಾದು ಹೋಗಿದೆ. ಅದು ಕತ್ತಲಿನಲ್ಲಿ ಕಾಣಿಸಲ್ಲ. ಹಾಗಾಗಿ ಮುಕೇಶ್‌ಗೆ ವಿದ್ಯುತ್ ತಂತಿ ಕಾಣಿಸದ ಕಾರಣ ತೊಳೆದಿರುವ ಬಟ್ಟೆ  ಹಾಕಿದ್ದಾನೆ. ಇದರಿಂದ ಆತನ ಸಾವು ಆಗಿದೆ ಎಂದು ಮುಕೇಶ್ ಗೆಳೆಯ ಹೇಳಿದ್ದಾರೆ. 

ವಿದ್ಯುತ್ ಶಾಕ್ ತಗುಲಿದ ಬಳಿಕ ಮುಕೇಶ್ ಕುಟುಂಬಸ್ಥರಿಗೆ ವಿಷಯ ತಿಳಿಸಲಾಗಿತ್ತು. ಮಗನ ಶವ ನೀಡುತ್ತಿದ್ದಂತೆ ಮುಕೇಶ್ ತಾಯಿ ಪ್ರಜ್ಞೆ ಕಳೆದುಕೊಂಡರು. ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಯ್ತು. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಫಸ್ಟ್ ನೈಟ್‌ಗೂ ಮೊದಲೇ  ಆಸ್ಪತ್ರೆಗೆ  ದಾಖಲಾದ ವಧು; ಗಂಡನ ನಡೆ ಕಂಡು ಮೂಕವಿಸ್ಮಿತರಾದ ಕುಟುಂಬಸ್ಥರು

click me!