Monsoon Rain ಈ ವರ್ಷ 103% ಮಳೆ ಸಾಧ್ಯತೆ, ವಾಡಿಕೆಗಿಂತ ಹೆಚ್ಚು ಎಂದ IMD!

Published : Jun 01, 2022, 04:32 AM IST
Monsoon Rain ಈ ವರ್ಷ 103% ಮಳೆ ಸಾಧ್ಯತೆ, ವಾಡಿಕೆಗಿಂತ ಹೆಚ್ಚು ಎಂದ IMD!

ಸಾರಾಂಶ

ಶೇ.99ರಷ್ಟುನೈಋುತ್ಯ ಮುಂಗಾರು ಮಳೆ ಸುರಿಯಲಿದೆ ಸತತ ನಾಲ್ಕನೇ ವರ್ಷ ಬಂಪರ್‌ ಕೃಷಿ ಉತ್ಪಾದನೆಯ ನಿರೀಕ್ಷೆ  ದೇಶದಲ್ಲಿ ವಾಡಿಕೆಯ ಮಳೆ ಅಂದರೆ 87 ಸೆಂ.ಮೀ

ನವದೆಹಲಿ(ಜೂ.01): ಈ ವರ್ಷ ದೇಶದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತನ್ನ ಈ ಹಿಂದಿನ ಮುನ್ಸೂಚನೆಯನ್ನು ಪರಿಷ್ಕರಿಸಿದೆ. ಏಪ್ರಿಲ್‌ ತಿಂಗಳಲ್ಲಿ ಐಎಂಡಿ ಈ ವರ್ಷ ದೇಶದಲ್ಲಿ ವಾಡಿಕೆಯ ಶೇ.99ರಷ್ಟುನೈಋುತ್ಯ ಮುಂಗಾರು ಮಳೆ ಸುರಿಯಲಿದೆ ಎಂದು ಮುನ್ಸೂಚನೆ ನೀಡಿತ್ತು. ಅದನ್ನು ಈಗ ಪರಿಷ್ಕರಿಸಿದ್ದು, ವಾಡಿಕೆಯ ಶೇ.103ರಷ್ಟುಮಳೆ ಸುರಿಯಲಿದೆ ಎಂದು ಮಂಗಳವಾರ ಮುನ್ಸೂಚನೆ ಬಿಡುಗಡೆ ಮಾಡಿದೆ. ಹೀಗಾಗಿ ಸತತ ನಾಲ್ಕನೇ ವರ್ಷ ಬಂಪರ್‌ ಕೃಷಿ ಉತ್ಪಾದನೆಯ ನಿರೀಕ್ಷೆ ಮೂಡಿದೆ.

ದೇಶದಲ್ಲಿ ವಾಡಿಕೆಯ ಮಳೆ ಅಂದರೆ 87 ಸೆಂ.ಮೀ. ಮಳೆ. 1971ರಿಂದ 2020ರ ನಡುವಿನ 50 ವರ್ಷದಲ್ಲಿ ಸುರಿದ ಮಳೆಯನ್ನು ಆಧರಿಸಿ ವಾಡಿಕೆ ಮಳೆಯ ಪ್ರಮಾಣ ಹೇಳಲಾಗುತ್ತದೆ. ಅದರಂತೆ ಈ ವರ್ಷ ದಕ್ಷಿಣ ಭಾರತ ಹಾಗೂ ಕೇಂದ್ರ ಭಾರತದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ. ಈಶಾನ್ಯ ಮತ್ತು ವಾಯವ್ಯ ಭಾರತದಲ್ಲಿ ವಾಡಿಕೆಯಷ್ಟುಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಜೂ.2ರಿಂದ ಭರ್ಜರಿ ಮಳೆ ಸಾಧ್ಯತೆ: ಕರಾವಳಿ, ಪಶ್ಚಿಮ ಘಟ್ಟದಲ್ಲಿ ‘ಯೆಲ್ಲೋ ಅಲರ್ಟ್‌’!

ಈ ವರ್ಷ ವಾಡಿಕೆಯ ಮಳೆಯಾದರೆ ದೇಶದಲ್ಲಿ ಸತತ ನಾಲ್ಕು ವರ್ಷ ವಾಡಿಕೆಯ ಮಳೆಯಾದಂತಾಗುತ್ತದೆ. ಮುಂದಿನ ಕೆಲ ವರ್ಷಗಳ ಕಾಲವೂ ವಾಡಿಕೆಯ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಜ್ಞರು ಹೇಳಿದ್ದಾರೆ.

ರಾಜಧಾನಿಗೆ ಮುಂಗಾರು ಆಗಮನ; ವಾರದ ಬಳಿಕ ಅಬ್ಬರಿಸಿದ ವರುಣ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಕೆಲ ಭಾಗಗಳಲ್ಲಿ ಗುಡುಗು ಸಹಿತ ಭರ್ಜರಿ ಮಳೆಯಾಗಿದ್ದು ಮುಂಗಾರಿನ ಆಗಮನವನ್ನು ಸಾರಿದೆ. ಅಪರಾಹ್ನ 3.30ರ ಸುಮಾರಿಗೆ ಮತ್ತು ಇಳಿ ಸಂಜೆಯ ಹೊತ್ತು ನಗರದಲ್ಲಿ ಮಳೆಯಾಗಿದೆ. ಒಂದು ವಾರದ ಬ್ರೇಕ್‌ ನಂತರ ಸೋಮವಾರ ನಗರದಲ್ಲಿ ಮಳೆಯಾಗಿತ್ತು. ಆದರೆ ಮಂಗಳವಾರ ಮಳೆಯ ತೀವ್ರತೆ ಹೆಚ್ಚಿತ್ತು. ಸಾರಕ್ಕಿ 3 ಸೆಂ.ಮೀ, ಸಂಪಂಗಿರಾಮನಗರ (2) 2.6, ಬಾಣಸವಾಡಿ 2, ಲಕ್ಕಸಂದ್ರ, ಕೋರಮಂಗಲ 1.9, ಬೊಮ್ಮನಹಳ್ಳಿ 1.8, ಚಾಮರಾಜ ಪೇಟೆ, ವಿದ್ಯಾಪೀಠ, ಸಿಂಗಸಂದ್ರ 1.6, ವಿವಿ ಪುರ 1.5, ಹೊಯ್ಸಳನಗರ, ಯಲಹಂಕ ಕೆಎಸ್‌ಎನ್‌ಡಿಎಂಸಿ 1.4, ಬಿಟಿಎಂ ಬಡಾವಣೆ 1.3 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಮೆಜೆಸ್ಟಿಕ್‌, ಶೇಷಾದ್ರಿಪುರ, ಮಲ್ಲೆಶ್ವರ, ರಾಜಾಜಿನಗರ, ವಿಜಯನಗರ, ಹಂಪಿನಗರ, ಶಿವಾಜಿ ನಗರ, ಹಂಪಿನಗರ, ಕುರುಬರಹಳ್ಳಿ, ಆರ್‌ಟಿ ನಗರ, ಬಸವೇಶ್ವರ ನಗರ, ಜೆಪಿ ನಗರ, ಕೆಂಗೇರಿ, ಜಯನಗರ, ಉತ್ತರಹಳ್ಳಿ, ಪದ್ಮನಾಭನಗರ, ಲಗ್ಗೆರೆ, ಪುಲಕೇಶಿ ನಗರ, ಹಲಸೂರು, ನಂದಿನಿ ಲೇ ಔಟ್‌, ಗಾಯತ್ರಿ ನಗರ, ಸುಬ್ರಹ್ಮಣ್ಯ ನಗರ, ಶಾಂತಿ ನಗರ, ವಿಲ್ಸನ್‌ ಗಾರ್ಡನ್‌ ಮುಂತಾದ ಕಡೆ ಮಳೆಯಾಗಿದೆ. ಬುಧವಾರ ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಹೆಚ್ಚಿದೆ.

Delhi Rain ಗುಡುಗು ಸಹಿತ ಭಾರಿ ಮಳೆ, 8 ವಿಮಾನ ಮಾರ್ಗ ಬದಲಿಸಿದ ದೆಹಲಿ!

ಮುಂಗಾರು ಹಂಗಾಮಿನ ಸಿದ್ಧತೆಯಲ್ಲಿ ಅನ್ನದಾತ
ಹಿರೇಕೆರೂರು ತಾಲೂಕಿನಾದ್ಯಾಂತ ಕಳೆದ ವಾರ ಸುರಿದ ಮಳೆಯಿಂದಾಗಿ ಭೂಮಿ ಹಸಿಯಾಗಿದೆ. ಕಳೆದ 8 ದಿನಗಳಿಂದ ಮಳೆ ಬಿಡುವು ನೀಡಿದ ಕಾರಣ ರೈತರು ಹೊಲಗಳನ್ನು ಬಿತ್ತನೆಗಾಗಿ ಹಸನಗೊಳಿಸಲು ಮುಂದಾಗಿದ್ದಾರೆ. ಈಗಾಗಲೆ ಮುಂಗಾರು ಹಂಗಾಮಿಗೆ ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯಲ್ಲಿ ರೈತರಿಗೆ ತೊಂದರೆಯಾಗದಂತೆ ಕೃಷಿ ಇಲಾಖೆ ಸಿದ್ಧತೆ ಮಾಡಿಕೊಂಡಿದ್ದು, ಬೀಜ ವಿತರಣೆ ಮಾಡುತ್ತಿದೆ. ರೈತರು ಬೀಜ ಹಾಗೂ ರಸಗೊಬ್ಬರ ಖರೀದಿಸಲು ಮುಂದಾಗಿದ್ದಾರೆ.

2022-23 ನೇ ಸಾಲಿನಲ್ಲಿ ಒಟ್ಟು 59448 ಹೆಕ್ಟೇರ್‌ ಬಿತ್ತನೆ ಸಾಗುವಳಿ ಕ್ಷೇತ್ರವಿದ್ದು, 45622 ಹೆಕ್ಟೇರ್‌ 760 ಗೋವಿನಜೋಳ ಅವರಿಸಿದ್ದು ಉಳಿದಂತೆ ಭತ್ತ 2500 ಹೆ. ದ್ವಿದಳ ದಾನ್ಯಗಳು 226 ಹೆ. ಎಣ್ಣೆ ಕಾಳು 150 ಹೆ. ಹಾಗೂ ವಾಣಿಜ್ಯ ಬೆಳೆಗಳಾದ ಹತ್ತಿ 7500 ಹೆ. ಮತ್ತು ಕಬ್ಬು 550 ಹೆಕ್ಟೇರ್‌ ಕ್ಷೇತ್ರವಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್
ಗ್ಯಾಸ್ ಸಿಲಿಂಡರ್ ಸ್ಫೋಟ: ಗೋವಾ ಕ್ಲಬ್‌ನಲ್ಲಿ ಅಗ್ನಿ ಅವಘಡ, 23 ಸಾವು