ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ರಾಷ್ಟ್ರಪತಿ ವಿಶಿಷ್ಠ ಸೇವಾ ಪದಕ ಘೋಷಿಸಲಾಗಿದೆ.
ನವದೆಹಲಿ(ಜ.25): ಗಣರಾಜ್ಯೋತ್ಸವ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗಳಿಗೆ ರಾಷ್ಟ್ರಪತಿ ವಿಶಿಷ್ಠ ಸೇವಾ ಪದಕ ಘೋಷಿಸಲಾಗಿದೆ. ಕರ್ನಾಟಕದ 20 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ಘೋಷಿಸಲಾಗಿದೆ. ಬೆಂಗಳೂರು ಸಿಐಡಿಯ ಎಡಿಜಿಪಿ , ನಗರ ಸಿಟಿ ಕಂಟ್ರೋಲ್ ರೂಂ ಸಿಹೆಚ್‌ಸಿ ಸೇರಿದಂತೆ 20 ಸಾಧಕರ ಹೆಸರನ್ನು ಘೋಷಿಸಲಾಗಿದೆ. ಗಣರಾಜ್ಯೋತ್ಸವ ದಿನ ಪದಕ ಪ್ರಧಾನ ಮಾಡಲಾಗುತ್ತದೆ.
ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ಪ್ರಶಸ್ತಿಗೆ ಬೆಂಗಳೂರಿನ ಸಿಐಡಿ ವಿಭಾಗದ ಎಡಿಜಿಪಿ ಕೆವಿ ಶರತ್ ಚಂದ್ರ ಆಯ್ಕೆಯಾಗಿದ್ದಾರೆ. ಇನ್ನು ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕಕ್ಕೆ ರಾಜ್ಯದ 19 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಆಯ್ಕೆಯಾಗಿದ್ದಾರೆ.
103 ಇನ್ಸ್‌ಪೆಕ್ಟರ್ 23 ಡಿವೈಎಸ್‌ಪಿ ವರ್ಗಾವಣೆ ಮಾಡಿದ ಸರ್ಕಾರ!
ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ ಪುರಸ್ಕೃತರ ಪಟ್ಟಿ ಇಂತಿದೆ.
ಗುಪ್ತದಳದ ಹೆಚ್ಚುವರಿ ನಿರ್ದೇಶಕ ಲಾಭುರಾಮ್
ಪ್ರಧಾನ ಕಚೇರಿ ಬೆಂಗಳೂರಿನ ಡಿವೈಎಸ್‌ಪಿ ನಾಗರಾಜು
ಬೆಂಗಳೂರು ಕೆಎಲ್ಎ, ಡಿವೈಎಸ್‌ಪಿ ವಿರೇಂದ್ರ ಕುಮಾರ್
ಬೆಂಗಳೂರು ಕೆಎಲ್ಎ, ಡಿವೈಎಸ್‌ಪಿ ಬಿ ಪ್ರಮೋದ್ ಕುಮಾರ್
ಕರ್ನಾಟಕ ಲೋಕಾಯುಕ್ತ ಕಲಬುರಗಿ, ಡಿವೈಎಸ್‌ಪಿ ಸಿದ್ದಲಿಂಗಪ್ಪ ಗೌಡ ಆರ್ ಪಾಟೀಲ್
ಬೆಂಗಳೂರು ಎಸ್‌ಟಿಎಪ್ ಎನ್‌ಕ್ರೋಚ್‌ಮೆಂಟ್ ಡಿವೈಎಸ್‌ಪಿ ಸಿವಿ ದೀಪಕ್
ಬೆಂಗಳೂರು ನಗರ ವಿಶೇಷ ವಿಭಾಗದ ಡಿವೈಎಸ್‌ಪಿ ಹೆಚ್ ವಿಜಯ್
ಮಾದನಾಯಕನಹಳ್ಳಿ ಠಾಣೆ ಇನ್ಸ್‌ಪೆಕ್ಟರ್ ಬಿಎಸ್ ಮಂಜುನಾಥ್
ದಾವಣೆಗೆರೆ ಸರ್ಕಲ್ ಇನ್ಸ್‌ಪೆಕ್ಟರ್, ಆರ್ ಪಿ ಅನೀಲ್
ಬೆಂಗಳೂರು ಅಶೋಕ ನಗರ ಸಂಚಾರ ಠಾಣೆ, ಇನ್ಸ್‌ಪೆಕ್ಟಕ್, ರಾವ್ ಗಣೇಶ್ ಜನಾರ್ಧನ್
ಬೆಂಗಳೂರು ಸಂಚಾರ ಮತ್ತು ಯೋಜನೆ, ಇನ್ಸ್‌ಪೆಕ್ಟರ್ ಮನೋಜ್ ಎನ್ ಹೋವಳೆ
ಕೆಎಸ್ಆರ್‍ಪಿ ಮೂರನೇ ಪಡೆಯ ವಿಶೇಷ ಆರ್‌ಪಿಐ, ಟಿಎ ನಾರಾಯಣ್ ರಾವ್
ಕೆಎಸ್ಆರ್‍ಪಿ ನಾಲ್ಕನೇ ಪಡೆಯ ವಿಶೇಷ ಆರ್‌ಪಿಐ, ಎಸ್ ಎಸ್ ವೆಂಕಟರಮಣ
ಕೆಎಸ್ಆರ್‍ಪಿ 9ನೇ ಪಡೆಯ ವಿಶೇಷ ಆರ್‌ಪಿಐ, ಎಸ್ ಎಂ ಪಾಟೀಲ
ಸಿಐಡಿ ಹೆಡ್‌ಕಾನ್ಸ್‌ಸ್ಟೇಬಲ್, ಕೆ ಪ್ರಸನ್ನಕುಮಾರ್
ತುಮಕೂರು ಪಶ್ಚಿಮ ಠಾಣೆ ಹೆಡ್‌ಕಾನ್ಸ್‌ಸ್ಟೇಬಲ್, ಹೆಚ್ ಪ್ರಭಾಕರ್
ಎಸ್‌ಸಿಆರ್‌ಬಿ, ಹೆಡ್‌ಕಾನ್ಸ್‌ಸ್ಟೇಬಲ್, ಡಿ ಸುಧಾ
ಬೆಂಗಳೂರು ನಿಯಂತ್ರಣ ಕೊಠಡಿ ಹೆಡ್‌ಕಾನ್ಸ್‌ಸ್ಟೇಬಲ್, ಟಿಆರ್ ರವಿಕುಮಾರ್
ಬೆಂಗಳೂರು: 57 ಲಕ್ಷ ಮೌಲ್ಯದ ವಾಚ್‌ಗಳನ್ನು ದೋಚಿದ್ದವರು ಬಲೆಗೆ
ಪೊಲೀಸ್ ಗಸ್ತು ಸುಧಾರಣೆಗೆ ತಂತ್ರಜ್ಞಾನ ತರಬೇತಿ: ಮೋದಿ ಕರೆ
ಪೊಲೀಸ್ ಪಡೆಗಳನ್ನು ಮತ್ತಷ್ಟುಸಂವೇದನಾಶೀಲಗೊಳಿಸಬೇಕು. ಸಾಂಪ್ರಾದಾಯಿಕ ಪೊಲೀಸ್ ಕಾರ್ಯವಿಧಾನವಾದ ಗಸ್ತನ್ನು ಮತ್ತಷ್ಟುಬಲಪಡಿಸಲು ತಂತ್ರಜ್ಞಾನಗಳಲ್ಲಿ ಹೆಚ್ಚಿನ ತರಬೇತಿ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕರೆ ನೀಡಿದ್ದಾರೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರ 57ನೇ ಅಖಿಲ ಭಾರತ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, ಸಾಮರ್ಥ್ಯ ಹಾಗೂ ಉತ್ತಮ ಅಭ್ಯಾಸಗಳನ್ನು ಪರಸ್ಪರ ಹಂಚಿಕೊಳ್ಳಲು ರಾಜ್ಯ ಪೊಲೀಸ್ ಮತ್ತು ಕೇಂದ್ರದ ಏಜೆನ್ಸಿಗಳ ನಡುವಿನ ಸಹಕಾರವನ್ನು ಒತ್ತಿ ಹೇಳಿದರು.
ಇದೇ ವೇಳೆ ಬಳಕೆಯಲ್ಲಿಲ್ಲದ ಕ್ರಿಮಿನಲ್ ಕಾನೂನುಗಳನ್ನು ರದ್ದುಗೊಳಿಸಲು ಮತ್ತು ರಾಜ್ಯಾದ್ಯಂತ ಪೊಲೀಸ್ ಇಲಾಖೆಗಳಿಗೆ ಮಾನದಂಡ ರೂಪಿಸಬೇಕು.ಜೈಲು ನಿರ್ವಹಣಾ ವ್ಯವಸ್ಥೆ ಸುಧಾರಿಸಬೇಕು ಎಂದು ಕರೆ ನೀಡಿದರು.