ಒಂದು ಕಡೆ ಚೀನಾ ಅಟ್ಟಹಾಸ ಮೆರೆಯುತ್ತಿದೆ, ಇದರ ಬೆನ್ನಲ್ಲೇ ಹೊಂಚುಹಾಕಿ ಕುಳಿತಿದ್ದ ಇಬ್ಬರು ಉಗ್ರರನ್ನು ಸದೆಬಡಿಯುವಲ್ಲಿ ಭಾರತ ಯಶಸ್ವಿಯಾಗಿದೆ.ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶ್ರೀನಗರ(ಜೂ.19): ಜಮ್ಮು-ಕಾಶ್ಮೀರದ ಪುಲ್ವಾಮಾ ಮತ್ತು ಶೋಪಿಯಾನ್‌ನಲ್ಲಿ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಇಬ್ಬರು ಭಯೋತ್ಪಾದಕರನ್ನು ಸೇನೆ ಹತ್ಯೆಗೈದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಗ್ರರು ಅಡಗಿ ಕುಳಿತ ಖಚಿತ ಮಾಹಿತಿಯಾಧಾರದ ಮೇಲೆ ಪುಲ್ವಾಮಾದಲ್ಲಿ ಬೆಳಿಗ್ಗೆ ಕಾರಾರಯಚರಣೆ ಆರಂಭಿಸಿ ಭದ್ರತಾ ಪಡೆಗಳು ಓರ್ವ ಉಗ್ರನನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದು, ಕಾರಾರಯಚರಣೆ ಇನ್ನೂ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ. ಇನ್ನೊಂದೆಡೆ ಶೋಪಿಯಾನ್ ಪ್ರದೇಶದಲ್ಲಿ ಇನ್ನೊಬ್ಬ ಉಗ್ರನನ್ನು ಭದ್ರತಾಪಡೆಗಳು ಹತ್ಯೆಗೈದಿವೆ.
ಗಲ್ವಾನ್ ನದಿ ತಿರುಗಿಸಲು ಚೀನಾ ಕಸರತ್ತು?
ನಮ್ಮ ಯೋಧರ ಬಳಿ ಶಸ್ತ್ರಾಸ್ತ್ರ ಇತ್ತು: ಕೇಂದ್ರ
ನವದೆಹಲಿ: ಲಡಾಖ್‌ನಲ್ಲಿ ಚೀನಾ ಯೋಧರ ಜೊತೆ ಮುಖಾಮುಖಿ ನಡೆದ ಘಟನೆ ವೇಳೆ ಭಾರತೀಯ ಯೋಧರು ನಿಶ್ಶಸ್ತ್ರರಾಗಿ ಇರಲಿಲ್ಲ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಸ್ಪಷ್ಟನೆ ನೀಡಿದ್ದಾರೆ.
‘ಭಾರತೀಯ ಯೋಧರನ್ನೇಕೆ ಹುತಾತ್ಮರಾಗಿಸಲು ನಿಶ್ಶಸ್ತ್ರರಾಗಿ ಕಳುಹಿಸಲಾಗಿತ್ತು’ ಎಂಬ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಜೈಶಂಕರ್, ಶಿಷ್ಟಾಚಾರದ ಅನ್ವಯ, ಪ್ರತಿಬಾರಿ ಯೋಧರು ತಮ್ಮ ನೆಲೆಗಳಿಂದ ತೆರಳುವಾಗ ಶಸ್ತ್ರ ಸಜ್ಜಿತರಾಗಿಯೇ ಹೋಗಿರುತ್ತಾರೆ. ಜೂ.15-16ರಂದು ದುರ್ಘಟನೆ ನಡೆದ ವೇಳೆಯೂ ಭಾರತೀಯ ಯೋಧರು ಶಸ್ತ್ರ ಸಜ್ಜಿತರಾಗಿದ್ದರು. ಆದರೆ ಉಭಯ ದೇಶಗಳ ನಡುವಿನ ಒಪ್ಪಂದ ಹಿನ್ನೆಲೆಯಲ್ಲಿ, ದಾಳಿ ವೇಳೆ ಭಾರತೀಯ ಯೋಧರು ಶಸ್ತ್ರಾಸ್ತ್ರ ಬಳಸಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.