
ಹೈದರಾಬಾದ್(ಜೂ.01): ಬಿಹಾರದ ದರ್‌ಭಂಗಾದಲ್ಲಿ ರೈಲ್ವೇ ನಿಲ್ದಾಣದ ಬಳಿ ಜೂ. 17 ರಂದು ಸಂಭವಿಸಿದ್ದ ಪಾರ್ಸೆಲ್ ಬ್ಲಾಸ್ಟ್ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಬಹುದೊಡ್ಡ ಯಶಸ್ಸು ಸಿಕ್ಕಿದೆ. ಅಧಿಕಾರಿಗಳು ಹೈದರಾಬಾದ್‌ನಲ್ಲಿ ಅಡಗಿದ್ದ ಲಷ್ಕರ್-ಏ-ತೊಯ್ಬಾದ ಇಬ್ಬರು ಉಗ್ರರನ್ನು ಬಂಧಿಸಿದೆ. ಈ ಉಗ್ರರು ಭಾರತದ ಅನೇಕ ಕಡೆ ಸ್ಫೋಟ ನಡೆಸಲು ಸಂಚು ರೂಪಿಸುತ್ತಿದ್ದರು.
ಹೈದರಾಬಾದ್‌ನಿಂದ ಪಾರ್ಸೆಲ್ ರವಾನೆ
ದರ್‌ಭಂಗಾದಲ್ಲಿ ನಡೆದಿದ್ದ ಈ ಸ್ಫೋಟ ರೈಲಿನ ಅಂಗಡಿಗೆ ಬಟ್ಟೆಗಳ ಸ್ಟಾಕ್ ಸಾಗಿಸುತ್ತಿದ್ದ ಸಂದರ್ಭದಲ್ಲಿ ಸಂಭವಿಸಿತ್ತು. ಅದೃಷ್ಟವಶಾತ್ ಈ ವೇಳೆ ಯಾರಿಗೂ ಯಾವುದೇ ಪ್ರಾಣ ಹಾನಿಯಾಗಿರಲಿಲ್ಲ. ಈ ಪಾರ್ಸೆಲ್ ಸಿಖಂದರಾಬಾದ್‌ನಿಂದ ರೈಲಿನಲ್ಲಿ ದರ್‌ಭಂಗಾವರೆಗೆ ತರಲಾಗಿತ್ತು. ಇದನ್ನು ಹೈದರಾಬಾದ್ ನಿವಾಸಿ ಸೂಫಿಯಾನ್ ಹೆಸರಿನ ವ್ಯಕ್ತಿ ಕಳುಹಿಸಿದ್ದ. ಆದರೆ ತನಿಖೆಯಲ್ಲಿ ಇದು ನಕಲಿ ಎಂದು ಪತ್ತೆಯಾಗಿತ್ತು.
ಪಾಕ್ ಜೊತೆ ಸಂಪರ್ಕ:
ಎನ್‌ಐಎ ಅಧಿಕಾರಿಗಳ ತನಿಖೆಯಲ್ಲಿ ದರ್‌ಭಂಗಾ ಸ್ಫೋಟದ ಹಿಂದೆ ಪಾಕ್‌ನ ಲಷ್ಕರ್-ಏ-ತೊಯ್ಬಾ ಉಗ್ರ ಸಂಘಟನೆ ಇತ್ತೆಂಬ ಮಾಹಿತಿ ಹೊರ ಬಿದ್ದಿದೆ. ಇದಾಧ ಬಳಿಕ ತನಿಖೆಗೆ ಮತ್ತಷ್ಟು ವೇಗ ನೀಡಲಾಗಿದ್ದು, ಆರೋಪಿಗಳಾದ ಮೊಹಮ್ಮದ್ ನಾಸಿರ್ ಹಾಗೂ ಆತನ ಸಹೋದರ ಇಮ್ರಾನ್ ಮಲಿಕ್‌ರನ್ನು ಬಂಧಿಸಲಾಗಿದೆ. ಇವರಿಬ್ಬರೂ ಐಐಡಿ ಬಾಂಬ್ ತಾವೇ ತಯಾರಿಸಿದ್ದೆಂಬುವುದನ್ನು ಒಪ್ಪಿಕೊಂಡಿದ್ದಾರೆ. ಈ ಬಾಂಬ್‌ನ್ನು ಬಟ್ಟೆಗಳ ಪಾರ್ಸೆಲ್‌ನಲ್ಲಿ ಪ್ಯಾಕ್ ಮಾಡಿ ದರ್‌ಭಂಗಾ ರೈಲಿನಲ್ಲಿಡಲಾಗಿತ್ತು.
ಇನ್ನು ಆರೋಪಿ ನಾಸಿರ್ 2012ರಲ್ಲಿ ಪಾಖಿಸ್ತಾನಕ್ಕೆ ಭೇಟಿ ನೀಡಿದ್ದ. ಅಲ್ಲೇ ಆತ ಕೆಮಿಕಲ್ ಬಾಂಬ್ ತಯಾರಿಸುವುದನ್ನು ಕಲಿತಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ