Covid-19: ದೇಶದಲ್ಲಿ 2.55 ಲಕ್ಷ ಕೇಸ್‌, ಒಂದೇ ದಿನ 50,000 ಇಳಿಕೆ..!

By Kannadaprabha News  |  First Published Jan 26, 2022, 4:34 AM IST

*  5 ದಿನ ಬಳಿಕ 3 ಲಕ್ಷಕ್ಕಿಂತ ಕೆಳಗಿಳಿದ ಕೋವಿಡ್‌ ಕೇಸು
*   ಸಕ್ರಿಯ ಕೇಸು 22.36 ಲಕ್ಷಕ್ಕಿಳಿಕೆ
*  ಪಾಸಿಟಿವಿಟಿ ಶೇ.15ಕ್ಕಿಳಿಕೆ
 


ನವದೆಹಲಿ(ಜ.26):  ಸತತ 5 ದಿನ ಕಾಲ 3 ಲಕ್ಷದ ಮೇಲಿದ್ದ ಕೋವಿಡ್‌(Covid-19) ಪ್ರಕರಣ ಸಂಖ್ಯೆ ಮಂಗಳವಾರ 2.55 ಲಕ್ಷಕ್ಕೆ ಇಳಿದಿದೆ. ಇದು ಕೊರೋನಾದ 3ನೇ ಅಲೆ(Corona 3rd Wave) ಇಳಿಕೆಯ ಸೂಚಕ ಎಂದು ಭಾವಿಸಲಾಗುತ್ತಿದೆ. ಸೋಮವಾರಕ್ಕೆ ಹೋಲಿಸಿದೆ ಮಂಗಳವಾರ ಒಂದೇ ದಿನದಲ್ಲಿ ಹೊಸ ಪ್ರಕರಣಗಳಲ್ಲಿ 50000ದಷ್ಟು ಭಾರೀ ಇಳಿಕೆ ದಾಖಲಾಗಿದೆ.

ಮಂಗಳವಾರ ಬೆಳಗ್ಗೆ 8 ಗಂಟೆಗೆ ಮುಗಿದ 24 ತಾಸು ಅವಧಿಯಲ್ಲಿ 2,55,874 ಪ್ರಕರಣಗಳು ದೃಢಪಟ್ಟಿವೆ. ಆದರೆ ಸಾವಿನ ಸಂಖ್ಯೆ 600ರ ಗಡಿ ದಾಟಿದ್ದು, 614ಕ್ಕೇರಿದೆ. ಇದರಲ್ಲ ಕೇರಳದ ಬ್ಯಾಕ್‌ಲಾಗ್‌ ಸಾವಿನ ಸಂಖ್ಯೆ ಅಧಿಕ.
ಈ ನಡುವೆ 2.67 ಲಕ್ಷ ಜನ ಗುಣಮುಖರಾಗಿದ್ದಾರೆ. ಹೀಗಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 22,36,842ಕ್ಕೆ ಇಳಿದಿದೆ. ಶೇ.20ಕ್ಕೇರಿದ್ದ ಪಾಸಿಟಿವಿಟಿ ದರ ಕೂಡ ಶೇ.15.52ಕ್ಕೆ ಇಳಿದಿದೆ. ಸಾವಿನ ಸಂಖ್ಯೆ ಗಮನಿಸಿದಾಗ 614 ಸಾವುಗಳ ಪೈಕಿ ಕೇರಳದಲ್ಲಿ 171, ತಮಿಳುನಾಡಿನಲ್ಲಿ(Tamil Nadu) 46 ಹಾಗೂ ಪಂಜಾಬ್‌ನಲ್ಲಿ(Punjab) 45 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಏತನ್ಮಧ್ಯೆ ಈವರೆಗೆ 162 ಕೋಟಿ ಡೋಸ್‌ ಲಸಿಕೆ(Vaccine) ನೀಡಲಾಗಿದೆ ಎಂದು ಕೇಂದ್ರ ಸರ್ಕಾರ(Central Government) ತಿಳಿಸಿದೆ.

Tap to resize

Latest Videos

undefined

Fact Check: ಕೊರೋನಾ, ವೈರಸ್ ಅಲ್ಲ, ಆಸ್ಪಿರಿನ್‌ ಬಳಸಿ ಚಿಕಿತ್ಸೆ ನೀಡಬಹುದಾದ ಬ್ಯಾಕ್ಟೀರಿಯಾ ಎಂಬುದು ಸುಳ್ಳು!

ಕೇರಳದಲ್ಲಿ 55,475 ಕೇಸು: ಸಾರ್ವಕಾಲಿಕ ಗರಿಷ್ಠ

ತಿರುವನಂತಪುರ: ಕೇರಳದಲ್ಲಿ(Kerala) ಮಂಗಳವಾರ ಒಂದೇ ದಿನ 55,475 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಈವರೆಗಿನ ಸಾರ್ವಕಾಲಿಕ ಗರಿಷ್ಠವಾಗಿದೆ. ಜ.20ರಂದು 46387 ಕೇಸು ದಾಖಲಾಗಿದ್ದೇ ಇದುವರೆಗಿನ ಗರಿಷ್ಠವಾಗಿತ್ತು. ಜೊತೆಗೆ ಮಂಗಳವಾರ 154 ಜನರ ಸಾವು ತೋರಿಸಲಾಗಿದೆ. ಈ ಪೈಕಿ 70 ಸಾವು ಈ ಹಿಂದಿನ ಕೆಲವು ದಿನಗಳಲ್ಲಿ ದಾಖಲಾಗಿದ್ದು ಎಂದು ಸರ್ಕಾರ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳಲ್ಲಿ 1,21,281 ಮಾದರಿಗಳನ್ನು ಪರೀಕ್ಷಿಸಿದ್ದು, ಪಾಸಿಟಿವಿಟಿ ದರ ಶೇ.44 ರಷ್ಟಿದೆ. ಪ್ರಸ್ತುತ ರಾಜ್ಯದಲ್ಲಿ ಒಟ್ಟು 2,85,365 ಸಕ್ರಿಯ ಕೋವಿಡ್‌ ಪ್ರಕರಣಗಳು ಇದ್ದು ಅವರಲ್ಲಿ ಕೇವಲ ಶೇ. 3.8 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೋವಿಡ್‌ ನಿಯಂತ್ರಣಕ್ಕೆ ಕಠಿಣ ಕ್ರಮ ಜಾರಿ

ತಿರುವನಂತಪುರ: ಕೇರಳದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಸರ್ಕಾರ ಇನ್ನಷ್ಟು ಕಠಿಣ ನಿರ್ಬಂಧಗಳನ್ನು(Strict Restrictions) ಜಾರಿಗೊಳಿಸಿದೆ. ಸತತ ಮೂರು ದಿನಗಳ ಕಾಲ ಶೇ.40ಕ್ಕೂ ಕಡಿಮೆ ಹಾಜರಾತಿಯಿರುವ ಶೈಕ್ಷಣಿಕ ಸಂಸ್ಥೆಗಳನ್ನು ಕ್ಲಸ್ಟರ್‌ಗಳಾಗಿ ಘೋಷಿಸಿ ಅವುಗಳನ್ನು 2 ವಾರ ಮುಚ್ಚಲು ಆದೇಶಿಸಲಾಗಿದೆ. ಜೊತೆಗೆ ಸೋಂಕು ಹಾಗೂ ಆಸ್ಪತ್ರೆಗೆ ದಾಖಲಾದವರ ಆಧಾರದ ಮೇಲೆ ಜಿಲ್ಲೆಗಳನ್ನು ವರ್ಗೀಕರಿಸಲು ನಿರ್ಧರಿಸಲಾಗಿದೆ.

‘ಎ’ ವರ್ಗದಲ್ಲಿ ಬರುವ ಜಿಲ್ಲೆಗಳಲ್ಲಿ ಎಲ್ಲ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಮದುವೆ, ಅಂತ್ಯಸಂಸ್ಕಾರಕ್ಕೆ 50 ಜನರ ಮಿತಿ ಹೇರಲಾಗಿದೆ. ‘ಬಿ’ ವರ್ಗದ ಜಿಲ್ಲೆಗಳಲ್ಲಿ ಯಾವುದೇ ಕಾರ್ಯಕ್ರಮಗಳಿಗೆ ಅನುಮತಿ ನೀಡಿಲ್ಲ. ಮದುವೆ ಹಾಗೂ ಅಂತ್ಯಸಂಸ್ಕಾರಕ್ಕೆ 20 ಜನರ ಮಿತಿ ಹೇರಲಾಗಿದೆ. ‘ಸಿ’ ವರ್ಗದ ಜಿಲ್ಲೆಯಲ್ಲಿ ‘ಬಿ’ ವರ್ಗದ ಎಲ್ಲ ನಿರ್ಬಂಧಗಳು ಸೇರಿದಂತೆ ಸಿನಿಮಾ ಮಂದಿರ, ಸ್ನಾನಕೊಳ, ಜಿಮ್‌ಗಳ ಮೇಲೂ ನಿರ್ಬಂಧವಿದೆ.

ಸೋಂಕಿಗೆ 19 ಬಲಿ: 209 ದಿನಗಳ ಗರಿಷ್ಠ

ಬೆಂಗಳೂರು:  ನಗರದಲ್ಲಿ ಕೊರೋನಾ(Coronavirus) ಸೋಂಕಿನಿಂದ ಮಂಗಳವಾರ 19 ಜನರು ಮೃತಪಟ್ಟಿದ್ದು, 209 ದಿನಗಳ ಗರಿಷ್ಠ ಪ್ರಕರಣ ಇದಾಗಿದೆ. ಈ ಮೂಲಕ ಸೋಂಕಿಗೆ ಬಲಿಯಾದವರ(Death) ಸಂಖ್ಯೆ 16,526ಕ್ಕೆ ಏರಿಕೆಯಾಗಿದೆ.

Covid-19 Crisis: ದೇಶದಲ್ಲಿ ಕೋವಿಡ್‌ ಕೇಸು ಶೇ.150ರಷ್ಟು ಹೆಚ್ಚಳ!

ಈ ಹಿಂದೆ ಜೂ.23ರಂದು 24 ಸೋಂಕಿತರು ಮತ್ತು ಜು.1ರಂದು 18 ಮಂದಿ ಮೃತಪಟ್ಟಿದ್ದು, ಈವರೆಗಿನ ಅತ್ಯಧಿಕ ಸಂಖ್ಯೆಯಾಗಿತ್ತು. ಮಂಗಳವಾರ 19,105 ಜನರಲ್ಲಿ ಕೊರೋನಾ ದೃಢಪಟ್ಟಿದೆ. ಹೊಸ ಪ್ರಕರಣದೊಂದಿಗೆ ನಗರದಲ್ಲಿ ಈವರೆಗಿನ ಸೋಂಕಿತರ ಸಂಖ್ಯೆ 16.26 ಲಕ್ಷಕ್ಕೆ ಏರಿಕೆಯಾಗಿದೆ. 33,011 ಮಂದಿ ಸೋಂಕಿತರು ಬಿಡುಗಡೆಯಾಗಿದ್ದು ಇದುವರೆಗೆ 13.97 ಲಕ್ಷ ಜನರು ಗುಣಮುಖರಾಗಿದ್ದಾರೆ. ಹೊಸ ಪ್ರಕರಣಗಳ ಪತ್ತೆಯಿಂದ ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,12,460ಕ್ಕೆ ಹೆಚ್ಚಳವಾಗಿದೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ. ಬಿಬಿಎಂಪಿಯ(BBMP) ಎಂಟು ವಲಯಗಳಲ್ಲಿ ಮೈಕ್ರೋ ಕಂಟೈನ್ಮೆಂಟ್‌ಗಳ ಸಂಖ್ಯೆ ಇಳಿಕೆಯಾಗಿದ್ದು 188 ಕಂಟೈನ್ಮೆಂಟ್‌ಗಳನ್ನು ಗುರುತಿಸಲಾಗಿದೆ.

ಯಲಹಂಕ 49, ಪೂರ್ವ 45, ಬೊಮ್ಮನಹಳ್ಳಿ 42, ಮಹದೇವಪುರ 26, ಪಶ್ಚಿಮ 13, ರಾಜರಾಜೇಶ್ವರಿ ನಗರ 6, ದಕ್ಷಿಣ 5, ದಾಸರಹಳ್ಳಿ 2 ಕಂಟೈನ್ಮೆಂಟ್‌ಗಳನ್ನು ಗುರುತಿಸಲಾಗಿದೆ ಎಂದು ಪಾಲಿಕೆ ವರದಿಯಲ್ಲಿ ತಿಳಿಸಿದೆ.
ಪಾಲಿಕೆ ವ್ಯಾಪ್ತಿಯ ಹತ್ತು ವಾರ್ಡ್‌ಗಳಲ್ಲಿ ಕಳೆದೊಂದು ವಾರದಿಂದ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಬೆಳ್ಳಂದೂರು 648, ನ್ಯೂತಿಪ್ಪಸಂದ್ರ 381, ಬೇಗೂರು 380, ಎಚ್‌ಎಸ್‌ಆರ್‌ ಲೇಔಟ್‌ 357, ಹೊರಮಾವು 356, ದೊಡ್ಡನೆಕ್ಕುಂದಿ 348, ವರ್ತೂರು 343, ಹಗದೂರು 302, ಹೂಡಿ 272 ಮತ್ತು ಕೋರಮಂಗಲ 257 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.
 

click me!