
ಲಕ್ನೋ(ಏ. 06) ಕುಬ್ಜ ದೇಹದ ಕಾರಣಕ್ಕೆ ಮದುವೆ ಮಾತುಕತೆ ಪದೇಪದೆ ಮುರಿದು ಬೀಳುತ್ತಿರುವುದರಿಂದ ರೋಸಿ ಹೋದ ಯುವಕನೊಬ್ಬ ಕನ್ಯೆ ಹುಡುಕಿಕೊಡಿ ಎಂದು ಪೊಲೀಸರ ಮೊರೆ ಹೋಗಿದ್ದರು. ಕೊನೆಗೂ ಆತನಿಗೆ ಕನ್ಯೆ ಸಿಕ್ಕಿದ್ದು ಸಖತ್ ಖುಷಿಯಾಗಿದ್ದಾನೆ.
ಎರಡು ಅಡಿ ಎತ್ತರವಿರುವ ತನಗೆ ಹುಡುಗಿ ಕೊಡಲು ಯಾರೂ ಒಪ್ಪುತ್ತಿಲ್ಲ. ನನ್ನ ಮನೆಯವರೂ ನೆರವಿಗೆ ನಿಲ್ಲುತ್ತಿಲ್ಲ. 'ನಾಗರಿಕ ಸೇವೆ'ಯ ಸೂತ್ರದಡಿ ನೀವಾದರೂ ಹುಡುಗಿ ಹುಡುಕಿಕೊಟ್ಟು ಮದುವೆ ಮಾಡಿಸಿ,'' ಎಂದು ಯುವಕ 26 ವರ್ಷದ ಅಜೀಮ್ ಮನವಿ ಸಲ್ಲಿಸಿದ್ದ.
ಮಂಡ್ಯದಲ್ಲಿ 'ನಾಗಿಣಿ' ಆರತಕ್ಷತೆ, ಯಾರೆಲ್ಲ ಬಂದಿದ್ದರು?
ಐದು ವರ್ಷದಿಂದ ವಧು ಹುಡುಕಿತ್ತಿದ್ದವನ ಪರಿಶ್ರಮಕ್ಕೆ ತೆರೆ ಬಿದ್ದಿದೆ. ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕೈರಾಣ ನಿವಾಸಿ 5ನೇ ತರಗತಿ ಓದಿದ್ದು ಕಾಸ್ಮೆಟಿಕ್ ಅಂಗಡಿ ಹಾಕಿಕೊಂಡಿದ್ದಾರೆ. ಯುವಕನನ್ನು ಹಪುರ್ ಮೂಲದ ಬುಶ್ರಾ ಎನ್ನುವರು ಮದುವೆಯಾಗಲು ಒಪ್ಪಿಕೊಂಡಿದ್ದಾರೆ. ಇವರು ಕೂಡ ವರನಷ್ಟೇ ಎತ್ತರ ಇದ್ದಾರೆ!
ಭಾವೀ ಪತ್ನಿಯನ್ನು ಭೇಟಿ ಮಾಡಿ ಉಡುಗೊರೆಗಳನ್ನು ಅಜೀಮ್ ನೀಡಿದ್ದಾರೆ. ಹುಡುಗಿ ಮನೆಯವರೂ ಹೊಸ ಅಳಿಯನಿಗೆ ಚಿನ್ನದ ಉಂಗುರ ನೀಡಿದ್ದಾರೆ.
ಕಾಸ್ಮೆಟಿಕ್ ವಸ್ತುಗಳನ್ನು ಮಾರುವ ಅಂಗಡಿಯೊಂದನ್ನು ನಡೆಸುತ್ತಿದ್ದು, ಕೈ ತುಂಬಾ ಆದಾಯವಿದ್ದರೂ ಆತನ ದೇಹದ ಗಾತ್ರ ನೋಡಿದ ಯುವತಿಯರು ಯಾರೂ ಮದುವೆಗೆ ಒಪ್ಪುತ್ತಿಲ್ಲ. ಹಲವು ಬಾರಿ ಹುಡುಗಿ ನೋಡುವ ಕಾರ್ಯಕ್ರಮ ಇಟ್ಟುಕೊಂಡಿದ್ದರೂ 'ತಿಂಡಿ ತಿಂದು, ಚಹಾ ಕುಡಿದು ಹೋದವರು ಏನನ್ನೂ ತಿಳಿಸುತ್ತಿಲ್ಲ ಎಂದು ನೊಂದು ನುಡಿದಿದ್ದವನ ಬಾಳಲ್ಲಿ ಹೊಸ ಕಿರಣ ಮೂಡಿದೆ. 2019ರಲ್ಲಿ ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿ ತನ್ನ ಅಳಲು ತೋಡಿಕೊಂಡಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ