ಪಶ್ಚಿಮ ಬಂಗಾಳದಲ್ಲಿ ಮೋದಿ ಬಿರುಸಿನ ಪ್ರಚಾರ/ ಮಮತಾ ಮುಸ್ಲಿಂ ಹೇಳಿಕೆಗೆ ಉತ್ತರ/ ನೀವು ಬೆಂಬಲ ಕಳೆದುಕೊಂಡಿದ್ದೀರಿ/ ಈ ಚುನಾವಣೆಯೊಂದಿಗೆ ನಿಮ್ಮ ರಾಜಕಾರಣ ಜೀವನ ಅಂತ್ಯವಾಗಲಿದೆ
ಕೋಲ್ಕತ್ತಾ (ಏ. 06) ಮುಸ್ಲಿಮರು ತಮ್ಮ ಮತ ವಿಭಜಿಸಬಾರದು ಎಂದು ಮಮತಾ ಬ್ಯಾನರ್ಜಿ ಹೇಳಿರುವುದು ಅವರು ಬೆಂಬಲ ಕಳೆದುಕೊಂಡಿರುವುದನ್ನು ಸೂಚಿಸುತ್ತದೆ ಎಂದು ಪ್ರಧಾನಿ ಪ್ರತಿಕ್ರಿಯೆ ನೀಡಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣಾ ಅಖಾಡ ರಂಗೇರಿದೆ. ಮೂರನೇ ಹಂತದ ಮತದಾನ ನಡೆಯುತ್ತಿದೆ. ರಾಜ್ಯದಲ್ಲಿ ಮಾರ್ಚ್ 27 ರಂದು ಮೊದಲನೇ ಹಂತದ ಚುನಾವಣೆ ಆರಂಭವಾಗಿದ್ದು ಏಪ್ರಿಲ್ 29ರ ವರೆಗೆ ಚುನಾವಣೆ ನಡೆಯಲಿದೆ. ಈ ಮಧ್ಯೆ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿಗೆ ಪ್ರಧಾನಿ ಮೋದಿ ಟಾಂಗ್ ನೀಡಿದ್ದಾರೆ.
'ಪಲ್ಟಿ ಮಾಡಿ' ಜನರಿಗೆ ಮೋದಿ ಕರೆ, ಬದಲಾಗಲಿದೆ ಬಂಗಾಳ
ಪಶ್ಚಿಮ ಬಂಗಾಳದ ಮುಸ್ಲಿಮರು ತಮ್ಮ ಮತಗಳನ್ನು ವಿಭಜಿಸದೇ ಏಕತೆಯನ್ನು ತೋರಿಸಬೇಕು ಎಂದು ಮಮತಾ ಹೇಳಿತ್ತಿದ್ದಾರೆ. ಇದರ ಅರ್ಥ ಅವರು ಮುಸ್ಲಿಮರ ಬೆಂಬಲವನ್ನು ಕಳೆದುಕೊಂಡಿದ್ದಾರೆ ಎನ್ನವುದನ್ನು ಸೂಚಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ʼನಿಮ್ಮ ಪ್ರೀತಿಯನ್ನು ಬಡ್ಡಿ ಸಮೇತ ಅಭಿವೃದ್ಧಿ ರೂಪದಲ್ಲಿ ಹಿಂತಿರಿಗುಸುತ್ತೇನೆʼ ಎಂದು ಮೋದಿ ಭರವಸೆ ಕೊಟ್ಟಿದ್ದಾರೆ. ಪಶ್ಚಿಮ ಬಂಗಾಳದ ಜನಸಂಖ್ಯೆಯಲ್ಲಿ ಶೇ 27 ರಷ್ಟು ಮುಸ್ಲಿಮರಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಅಧಿಕಾರಕ್ಕೇರಲು ಮುಸ್ಲಿಂ ಮತದಾನ ಅತ್ಯಂತ ಮಹತ್ವದಾಗುತ್ತದೆ. ಅಸಾವುದ್ದೀನ್ ಒವೈಸಿ AIMIM ನ್ನು ಮಮತಾ ಬಿಜೆಪಿಯ ಬಿ ಟೀಂ ಎಂದು ಕರೆದಿದ್ದರು.
ʼದೀದಿ, ಇತ್ತಿಚೀಗೆ ನೀವು ಎಲ್ಲ ಮುಸ್ಲಿಮರು ಒಂದಾಗಬೇಕು ಅವರ ಮತಗಳು ವಿಭಜನೆಯಾಗಬಾರದು ಅಂತ ಹೇಳಿದ್ದಿರಿ, ಮುಸ್ಲಿಂ ವೋಟ್ ಬ್ಯಾಂಕ್ ಕೈ ತಪ್ಪಿರುವುದರಿಂದ ಈ ಮಾತುಗಳನ್ನು ನೀವು ಹೇಳುತ್ತಿದ್ದೀರಿ. ಮುಸ್ಲಿಮರು ಕೂಡ ನಿಮ್ಮಿಂದ ದೂರವಾಗಿದ್ದಾರೆ. ಈ ಮಾತನ್ನು ಬಹಿರಂಗವಾಗಿ ನೀವು ಹೇಳಿದ್ದಿರಿ ಅಂದ್ಮೇಲೆ ನೀವು ಚುನಾವಣೆ ಸೋತಿದ್ದೀರಿ ಅಂತಾಯ್ತುʼ ಎಂದು ಮೋದಿ ಹೇಳಿದ್ದಾರೆ.
ʼದೀದಿ, ನೀವು ಚುನಾವಣೆ ಆಯೋಗವನ್ನೇ ನಿಂದಿಸಿದ್ದೀರಿ. ಒಂದು ವೇಳೆ ನಾವು ಹಿಂದೂಗಳನ್ನು ಒಗ್ಗೂಡಿಸುವ ಮಾತುಗಳನ್ನಾಡಿದ್ದರೆ ನಮಗೆ ಚುನಾವನಾ ಆಯೋಗದಿಂದ 8 ರಿಂದ 10 ನೋಟಿಸ್ ಳು ಬರುತ್ತಿದ್ದವು. ನಮ್ಮ ಬಗ್ಗೆ ದೇಶಾದ್ಯಂತ ಲೇಖನಗಳು ಬರುತ್ತಿದ್ದವುʼ ಎಂದು ಮೋದಿ ಕಿಡಿ ಕಾರಿದ್ದಾರೆ.
ರಾಜಕಾರಣವನ್ನು ಫುಟ್ ಬಾಲ್ ಆಟ ಮಾಡಿಕೊಂಡ ನೀವು ನಿಮ್ಮದೆ ಗೋಲ್ ಕೀಪರ್ ಬಳಿ ಗೋಲು ಹೊಡೆದು ಸ್ವಯಂ ಸೋತುಹೋಗಿದ್ದೀರಿ. ನಿಮ್ಮ ರಾಜಕಾರಣದ ಅಧ್ಯಾಯ ಈ ಫಲಿತಾಂಶದೊಂದಿಗೆ ಮುಗಿಯಲಿದ್ದು ಜನ ಅಭಿವೃದ್ಧಿ ಬಯಸಿದ್ದಾರೆ ಎಂದು ಮೋರಿ ಹೇಳಿದ್ದಾರೆ.
ಬಿಜೆಪಿಯು ಮಮತಾ ಬ್ಯಾನರ್ಜಿ ವಿರುಧ್ದ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಮುಸ್ಲಿಮರೆಲ್ಲರು ಒಂದಾಗಬೇಕು ಎಂದು ಕರೆ ನೀಡುವುದರ ಮೂಲಕ ತೃಣಮೂಲ ಕಾಂಗ್ರೇಸ್ ಚುನಾವಣಾ ನೀತಿಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದೆ.ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 29ರ ವರೆಗೂ ಚುನಾವಣೆಗಳು ನಡೆಯಲಿವೆ ಹಾಗೂ ಚುನಾವನಾ ಫಲಿತಾಂಶ ಮೇ 2 ರಂದು ಹೊರ ಬಿಳಲಿದೆ.